ETV Bharat / bharat

'ಕೊನೆಗೂ ಸತ್ಯ ಹೊರಬಂದಿದೆ': 'ದಿ ಸಾಬರಮತಿ ರಿಪೋರ್ಟ್' ಚಿತ್ರ ಶ್ಲಾಘಿಸಿದ ಪ್ರಧಾನಿ ಮೋದಿ

ಗೋಧ್ರಾ ರೈಲು ದುರಂತ ಆಧರಿತ 'ದಿ ಸಾಬರಮತಿ ರಿಪೋರ್ಟ್' ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

'ದಿ ಸಾಬರಮತಿ ರಿಪೋರ್ಟ್'
'ದಿ ಸಾಬರಮತಿ ರಿಪೋರ್ಟ್' (IANS)
author img

By ETV Bharat Karnataka Team

Published : 2 hours ago

ನವದೆಹಲಿ: ಗುಜರಾತಿನಲ್ಲಿ 2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲು ಸುಟ್ಟ ಘಟನೆಯನ್ನು ಆಧರಿಸಿದ 'ದಿ ಸಾಬರಮತಿ ರಿಪೋರ್ಟ್' ಚಲನಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಶ್ಲಾಘಿಸಿದ್ದಾರೆ. ಚಿತ್ರವನ್ನು ಶ್ಲಾಘಿಸಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್ ನಲ್ಲಿ ಸಿನಿಪ್ರಿಯರೊಬ್ಬರು ಮಾಡಿದ ಪೋಸ್ಟ್ ಅನ್ನು ಹಂಚಿಕೊಂಡ ಪಿಎಂ ಮೋದಿ, "ಸರಿಯಾಗಿ ಹೇಳಿದಿರಿ. ಕೊನೆಗೂ ಈ ಕುರಿತಾದ ಸತ್ಯ ಹೊರಬರುತ್ತಿರುವುದು ಒಳ್ಳೆಯದು. ಅದೂ ಸಾಮಾನ್ಯ ಜನರಿಗೆ ತಿಳಿಯುವ ರೀತಿಯಲ್ಲಿ." ಎಂದು ರಿಪ್ಲೈ ಮಾಡಿದ್ದಾರೆ.

"ಸುಳ್ಳು ನಿರೂಪಣೆಯು ಸೀಮಿತ ಅವಧಿಗೆ ಮಾತ್ರ ಜೀವಂತವಾಗಿರುತ್ತದೆ. ಅಂತಿಮವಾಗಿ, ಸತ್ಯಗಳು ಯಾವಾಗಲೂ ಹೊರಬರುತ್ತವೆ" ಎಂದು ಪಿಎಂ ಮೋದಿ ಹೇಳಿದರು. ಅಲೋಕ್ ಭಟ್ ಎಂಬುವರು ಈ ಚಿತ್ರದ ಬಗ್ಗೆ ಪೋಸ್ಟ್ ಮಾಡಿ, ಇದು ನೋಡಲೇಬೇಕಾದ ಚಿತ್ರ ಎಂದು ಬರೆದಿದ್ದಾರೆ. ಈ ಪೋಸ್ಟ್​ಗೆ ಪ್ರಧಾನಿ ಮೋದಿ ರಿಪ್ಲೈ ಮಾಡಿದ್ದಾರೆ.

ಚಿತ್ರವನ್ನು ಏಕೆ ನೋಡಬೇಕೆಂಬ ಬಗ್ಗೆ ಅಲೋಕ್ ಭಟ್ ಎಕ್ಸ್​ನಲ್ಲಿ ನಾಲ್ಕು ಕಾರಣಗಳನ್ನು ನೀಡಿದ್ದಾರೆ.

"#SabarmatiReport ಚಿತ್ರವು ನೋಡಲೇಬೇಕಾದ ಚಿತ್ರ ಎಂದು ನಾನು ಏಕೆ ಭಾವಿಸುತ್ತೇನೆ ಎಂಬ ಬಗ್ಗೆ ನಾನು ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಚಿತ್ರವು ವಿಶೇಷವಾಗಿ ಶ್ಲಾಘನೀಯವಾಗಿದೆ. ಏಕೆಂದರೆ ಇದು ನಮ್ಮ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ನಾಚಿಕೆಗೇಡಿನ ಘಟನೆಯೊಂದರ ಪ್ರಮುಖ ಸತ್ಯವನ್ನು ಹೊರತಂದಿದೆ" ಎಂದು ಅವರು ಬರೆದಿದ್ದಾರೆ.

"ಚಿತ್ರದ ತಯಾರಕರು ಈ ವಿಷಯವನ್ನು ಸಾಕಷ್ಟು ಸೂಕ್ಷ್ಮತೆ ಮತ್ತು ಘನತೆಯಿಂದ ನಿಭಾಯಿಸಿದ್ದಾರೆ" ಎಂದು ಭಟ್ ಹೇಳಿದರು.

"ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ- ಸಾಬರಮತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕ್ರೂರವಾಗಿ ಸುಡುವುದನ್ನು ಪಟ್ಟಭದ್ರ ಹಿತಾಸಕ್ತಿ ಗುಂಪು ಹೇಗೆ ರಾಜಕೀಯ ಲಾಭದ ವಿಷಯವನ್ನಾಗಿ ಪರಿವರ್ತಿಸಿತು ಎಂಬುದು ನಮ್ಮೆಲ್ಲರಿಗೂ ಆತ್ಮಾವಲೋಕನಕ್ಕೆ ಯೋಗ್ಯವಾಗಿದೆ. ಅವರ ವ್ಯವಸ್ಥಿತ ಕೂಟವು ತಮ್ಮದೇ ಆದ ಕ್ಷುಲ್ಲಕ ಕಾರ್ಯಸೂಚಿಯನ್ನು ಸಾಧಿಸಲು ಒಂದರ ನಂತರ ಒಂದರಂತೆ ಸುಳ್ಳುಗಳನ್ನು ಹರಡಿತು" ಎಂದು ಭಟ್ ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

"ಅಂತಿಮವಾಗಿ 59 ಮುಗ್ಧ ಸಂತ್ರಸ್ತರು ತಮ್ಮ ಪರವಾಗಿ ತಾವೇ ಮಾತನಾಡಬೇಕಾಯಿತು. ಹೌದು, ಅವರು ಹೇಳಿದಂತೆ, ಸತ್ಯವೊಂದೇ ಗೆಲ್ಲುತ್ತದೆ. ಆ ಫೆಬ್ರವರಿ ಬೆಳಿಗ್ಗೆ ನಾವು ಕಳೆದುಕೊಂಡ 59 ಮುಗ್ಧ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಈ ಚಲನಚಿತ್ರವು ನಿಜವಾಗಿಯೂ ಸೂಕ್ತ ಗೌರವವಾಗಿದೆ. ಈ ಚಿತ್ರವು ಫೆಬ್ರವರಿ 27, 2002 ರ ಬೆಳಿಗ್ಗೆ ಗುಜರಾತ್ ನ ಗೋಧ್ರಾ ರೈಲ್ವೆ ನಿಲ್ದಾಣದ ಬಳಿ ಸಾಬರಮತಿ ಎಕ್ಸ್​ಪ್ರೆಸ್​ನಲ್ಲಿ ನಡೆದ ಘಟನೆಗಳನ್ನು ಪ್ರದರ್ಶಿಸುವ ಪ್ರಯತ್ನವಾಗಿದೆ." ಎಂದು ಅವರು ಹೇಳಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ 'ದಿ ಸಾಬರಮತಿ ರಿಪೋರ್ಟ್' ಚಿತ್ರಕ್ಕೆ ಯು/ಎ ಪ್ರಮಾಣಪತ್ರವನ್ನು ನೀಡಿದ್ದು, ಹಿಂಸಾತ್ಮಕ ದೃಶ್ಯಗಳು, ಕೆಲವು ಮೌನ ಪದಗಳು ಮತ್ತು ಮಾರ್ಪಾಡುಗಳೊಂದಿಗೆ ಕೆಲ ಕಡಿತಗಳನ್ನು ಮಾಡಲಾಗಿದೆ. ಚಿತ್ರದ ಅವಧಿ 126.51 ನಿಮಿಷಗಳು.

ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ವಿಕಿರ್ ಫಿಲ್ಮ್ಸ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸಿ, ರಿಧಿ ಡೋಗ್ರಾ ಮತ್ತು ರಾಶಿ ಖನ್ನಾ ನಟಿಸಿದ್ದಾರೆ ಮತ್ತು ಧೀರಜ್ ಸರ್ನಾ ಚಿತ್ರವನ್ನು ನಿರ್ದೇಶಿಸಿದ್ದಾರೆ. 2002ರ ಫೆಬ್ರವರಿ 27ರಂದು ಗೋಧ್ರಾ ರೈಲು ದುರಂತದಲ್ಲಿ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಒಟ್ಟು 59 ಹಿಂದೂ ಯಾತ್ರಾರ್ಥಿಗಳು ಮತ್ತು ಕರಸೇವಕರು ಸಾವನ್ನಪ್ಪಿದ್ದರು.

ಇದನ್ನೂ ಓದಿ : ಅಪಹರಣಕ್ಕೊಳಗಾದ ಒಂದೂವರೆ ತಿಂಗಳ ಮಗು ರೈಲು ನಿಲ್ದಾಣದಲ್ಲಿ ಪತ್ತೆ: ಮಹಿಳೆ ಸೇರಿ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.