ETV Bharat / entertainment

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ 2' ಟ್ರೇಲರ್ ರಿಲೀಸ್​: ಅದ್ಭುತ ಸಿನಿಮೀಯ ಅನುಭವಕ್ಕಾಗಿ ಸಜ್ಜಾಗಿ - PUSHPA 2 TRAILER

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ಪುಷ್ಪ 2: ದಿ ರೂಲ್' ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ.

Pushpa 2 trailer out
'ಪುಷ್ಪ 2' ಟ್ರೇಲರ್ ರಿಲೀಸ್​ (Photo: Film Poster)
author img

By ETV Bharat Entertainment Team

Published : Nov 17, 2024, 6:27 PM IST

'ಪುಷ್ಪ 2: ದಿ ರೂಲ್', ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಈ ವರ್ಷಾಂತ್ಯ ಅಪಾರ ಸಂಖ್ಯೆಯ ಸಿನಿಪ್ರಿಯರಿಗೆ ಅದ್ಭುತ ಸಿನಿಮೀಯ ಅನುಭವ ಪೂರೈಸಲು ಸುಕುಮಾರ್​ ನಿರ್ದೇಶನದ ಈ ಸಿನಿಮಾ ಸಜ್ಜಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್, ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ಫಹಾದ್​ ಫಾಸಿಲ್​ ಅಭಿನಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದ್ದು, ಪ್ರೇಕ್ಷಕರು ಟ್ರೇಲರ್​​ಗಾಗಿ ಕಾತರರಾಗಿದ್ದರು. ಫೈನಲಿ ಇಂದು ನಡೆದ ಅದ್ಧೂರಿ ಈವೆಂಟ್​ನಲ್ಲಿ ದಿ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಟ್ರೇಲರ್​​​ ಅನಾವರಣಗೊಂಡಿದೆ.

'ಪುಷ್ಪ 2: ದಿ ರೂಲ್' ಟ್ರೇಲರ್,​​ ಸಸ್ಪೆನ್ಸ್, ಥ್ರಿಲ್ಲಿಂಗ್​​ ಅಂಶಗಳೊಂದಿಗೆ ಭರಪೂರ ಆ್ಯಕ್ಷನ್​​ ಸೀನ್​​​ಗಳನ್ನು ಸಿನಿಮಾ ಒದಗಿಸಲಿದೆ ಎಂಬ ಭರವಸೆಯನ್ನು ನೀಡಿದೆ. ಚಿತ್ರ ಬರುವ ತಿಂಗಳು ಡಿಸೆಂಬರ್​ 5ರಂದು ​ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದ್ದು, ಈಗಾಗಲೇ ಭರ್ಜರಿ ಪ್ರಚಾರ ಪ್ರಾರಂಭವಾಗಿದೆ.

'ಪುಷ್ಪ 2: ದಿ ರೂಲ್​​' ಸಿನಿಮಾವನ್ನು ಎಂಜಾಯ್​ ಮಾಡಲು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಪ್ರೇಕ್ಷಕರು ಸಜ್ಜಾಗಿದ್ದಾರೆ. ಚಿತ್ರತಂಡ ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​​​ ಅನ್ನು ಮೂಲೆ ಮೂಲೆಗೂ ತಲುಪಿಸುವ ಪ್ರಯತ್ನದಲ್ಲಿ ಪಟ್ನಾ, ಕೋಲ್ಕತ್ತಾ, ಚೆನ್ನೈ, ಕೊಚ್ಚಿ, ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ನಂತಹ ಪ್ರಮುಖ ನಗರಗಳಲ್ಲಿ ಭರ್ಜರಿ ಪ್ರಮೋಶನ್​ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ಡಿಸೆಂಬರ್ 5ರಂದು ಸಿನಿಮಾ ತೆರೆಗಪ್ಪಳಿಸಲಿದೆ. ಇದಕ್ಕೂ ಮುನ್ನ ಬಹುನಿರೀಕ್ಷಿತ ಚಿತ್ರವನ್ನು ಆಗಸ್ಟ್​​ನಲ್ಲಿ ಬಿಡುಗಡೆಗೊಳಿಸಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದರು. ಆದ್ರೆ ಸಿನಿಮಾ ಕೆಲಸಗಳು ಪೂರ್ಣಗೊಳ್ಳದ ಹಿನ್ನೆಲೆ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 6ಕ್ಕೆ ಮುಂದೂಡಲಾಗಿತ್ತು. ಆದ್ರೀಗ ಪುಷ್ಪ ಸೀಕ್ವೆಲ್​​ ಒಂದು ದಿನ ಮೊದಲೇ ರಿಲೀಸ್​ ಆಗಲು ರೆಡಿಯಾಗಿದೆ. ಡಿಸೆಂಬರ್ 5, 2024ಕ್ಕೆ ಪುಷ್ಪ 2 ಬಹಳ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದ್ದು, ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: 'ಪುಷ್ಪ 2'ಕ್ಕೆ ಅಲ್ಲು ಅರ್ಜುನ್ ಪಡೆದಿದ್ದು 300 ಕೋಟಿ: ಅತಿ ಹೆಚ್ಚು ಸಂಭಾವನೆ ಗಳಿಸುವ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ

ತೆಲುಗು ಸ್ಟಾರ್ ಹೀರೋ ಅಲ್ಲು ಅರ್ಜುನ್ ಪುಷ್ಪರಾಜ್ ಪಾತ್ರವನ್ನು ಮುಂದುವರಿಸಿದ್ದಾರೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದಲ್ಲಿ ಮರಳಲಿದ್ದಾರೆ. ಫಹಾದ್ ಫಾಸಿಲ್ ತಮ್ಮ ಖಳನಾಯಕ ಭನ್ವರ್ ಸಿಂಗ್ ಶೆಕಾವತ್ ಪಾತ್ರವನ್ನು ಮುಂದುವರಿಸಿದ್ದಾರೆ. ಮೊದಲ ಭಾಗ 2021ರ ಡಿಸೆಂಬರ್​ 17ರಂದು ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಅಲ್ಲು ಅರ್ಜುನ್ ತಮ್ಮ ಅಮೋಘ ಅಭಿನಯದಿಂದ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಇದೀಗ ಸೀಕ್ವೆಲ್​ ಅನುಭವಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಪಾತ್ರಗಳು, ಸಿನಿಮಾ ಕಥೆ, ಆ್ಯಕ್ಷನ್​ ಕಂಟೆಂಟ್​ಗಳು ಹೇಗೆ ಮೂಡಿಬರಬಹುದು ಎಂಬ ಕುತೂಹಲ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.