ETV Bharat / state

ಹುಬ್ಬಳ್ಳಿ: 500 ರೂ. ವಾಪಸ್​ ಕೇಳಿದ್ದಕ್ಕೆ ಚಾಕು ಇರಿತ, ಐವರು ಆರೋಪಿಗಳ ಬಂಧನ - STABBING FOR ASKING MONEY BACK

ಹಣ ವಾಪಸ್​ ಕೇಳಿದ್ದಕ್ಕಾಗಿ, ಕೊಡುವುದಾಗಿ ಹೇಳಿ ಕರೆಸಿಕೊಂಡು ಐವರು ಸೇರಿ ಸ್ನೇಹಿತನಿಗೆ ಚಾಕು ಚುಚ್ಚಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Arrested Accused
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : Nov 17, 2024, 7:32 PM IST

ಹುಬ್ಬಳ್ಳಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವಕನೊಬ್ಬನಿಗೆ ಸ್ನೇಹಿತರೇ ಚಾಕುವಿನಿಂದ ಇರಿದ ಘಟನೆ ಆನಂದ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೊಹಮ್ಮದ್ ಅಲಿ ಮೊರಬ ಎಂಬಾತ ಚಾಕು ಇರಿತಕ್ಕೊಳಗಾದ ಯುವಕ.

ಜಮೀರ್​ ಎಂಬಾತ ಮೊಹಮದ್​ನಿಂದ 500 ರೂ. ಪಡೆದಿದ್ದ. ಅದನ್ನು ಕೊಡುವ ನೆಪದಲ್ಲಿ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ರೆಹಮತ್ ನಗರದ ವಾಲಿಬಾಲ್ ಗ್ರೌಂಡ್‌ಗೆ ಕರೆಸಿಕೊಂಡಿದ್ದ. ಆಗ ಮಹ್ಮದ್ ಮತ್ತು ಜಮೀರ್​ ನಡುವೆ ಗಲಾಟೆಯಾಗಿದೆ. ಜಮೀರ್​ ಜತೆಗಿದ್ದ ಸಾಧಿಕ್, ಅಲ್ತಾಫ್, ಇರ್ಫಾನ್, ಅಸ್ಲಾಂ ಕೂಡಿಕೊಂಡು ಮಹ್ಮದ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅಸ್ಲಾಂ ಚಾಕುವಿನಿಂದ ಮೊಹಮದ್​ ಬೆನ್ನು, ಎದೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

500 ರೂ. ವಾಪಸ್​ ಕೇಳಿದ್ದಕ್ಕೆ ಚಾಕು ಇರಿತ: ಐವರು ಆರೋಪಿಗಳ ಬಂಧನ (ETV Bharat)

ಗಾಯಾಳು ಮೊಹಮದ್​ ಮೊರಬನನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ಜಮೀರ್​, ಅಸ್ಲಾಂ, ಸಾಧಿಕ್​, ಅಲ್ತಾಫ್, ಹಾಗೂ ಇರ್ಫಾನ್‌ನನ್ನು ಬಂಧಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಮೊಹಮದ್​ ಅಲಿ ಮೊರಬ, "ನಾನು ಕೊಟ್ಟ ಹಣ ಕೇಳಿದ್ದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ. ಕೇವಲ 500 ರೂಪಾಯಿಯನ್ನು ಜಮೀರ್​ ತನ್ನ ಹೆಂಡತಿಗೆ ಔಷಧ ತರಲು ತೆಗೆದುಕೊಂಡಿದ್ದ. ಆ ಹಣವನ್ನು ವಾಪಸ್​ ಕೇಳಿದಾಗ, ಕೊಡುತ್ತೇನೆ ಎಂದು ಕರೆದು ಚಾಕುವಿನಿಂದ ಇರಿದಿದ್ದಾರೆ. ಇದನ್ನು ಬಿಟ್ಟು ಬೇರೆ ಯಾವ ಕಾರಣವು ಇಲ್ಲ" ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ‌ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.