ETV Bharat / international

ಉಕ್ರೇನ್​​ನ ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ಬೃಹತ್ ದಾಳಿ: ಇಂಧನ ಮೂಲಸೌಕರ್ಯಗಳಿಗೆ ಅಪಾರ ಹಾನಿ - RUSSIA UKRAINE WAR

ರಷ್ಯಾ ಭಾನುವಾರ ಉಕ್ರೇನ್​​ನ ಇಂಧನ ಮೂಲಸೌಕರ್ಯ ಮತ್ತು ಇತರ ಗುರಿಗಳ ಮೇಲೆ ತನ್ನ ಅತಿದೊಡ್ಡ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಪ್ರಾರಂಭಿಸಿದೆ.

ಕ್ಷಿಪಣಿ ದಾಳಿ (ಸಂಗ್ರಹ ಚಿತ್ರ)
ಕ್ಷಿಪಣಿ ದಾಳಿ (ಸಂಗ್ರಹ ಚಿತ್ರ) (IANS)
author img

By ANI

Published : Nov 17, 2024, 6:47 PM IST

ಮಾಸ್ಕೊ: ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧವು 1,000 ದಿನಗಳ ಗಡಿಯನ್ನು ಸಮೀಪಿಸುತ್ತಿರುವ ಮಧ್ಯೆ ರಷ್ಯಾ ಭಾನುವಾರ ಉಕ್ರೇನ್​​ನ ಇಂಧನ ಮೂಲಸೌಕರ್ಯ ಮತ್ತು ಇತರ ಗುರಿಗಳ ಮೇಲೆ ತನ್ನ ಅತಿದೊಡ್ಡ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಪ್ರಾರಂಭಿಸಿದೆ. ಕ್ರೆಮ್ಲಿನ್ ಪಡೆಗಳು ಹೈಪರ್ ಸಾನಿಕ್ ಸಿರ್ಕಾನ್ಸ್ ಮತ್ತು ಕಿಂಜಾಲ್​ಗಳು ಸೇರಿದಂತೆ ಸುಮಾರು 120 ಕ್ರೂಸ್, ಬ್ಯಾಲಿಸ್ಟಿಕ್ ಮತ್ತು ಏರೋಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮತ್ತು 90 ಡ್ರೋನ್​ಗಳನ್ನು ಹಾರಿಸಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಹೇಳಿದ್ದಾರೆ. ಉಕ್ರೇನ್​ನ ವಾಯು ರಕ್ಷಣಾ ಪಡೆಗಳು 140 ಕ್ಕೂ ಹೆಚ್ಚು ಕ್ಷಿಪಣಿ, ಡ್ರೋನ್​ಗಳನ್ನು ಹೊಡೆದುರುಳಿಸಿವೆ ಎಂದು ಅವರು ಟೆಲಿಗ್ರಾಮ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಉಕ್ರೇನ್ ನ ಮಿಲಿಟರಿ-ಕೈಗಾರಿಕಾ ಕಾರ್ಯಾಚರಣೆಗಳನ್ನು ಬೆಂಬಲಿಸುವ ಮಿಲಿಟರಿ ವಾಯುನೆಲೆಗಳು, ಅನಿಲ ಉತ್ಪಾದನಾ ಸೌಲಭ್ಯಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ವಾಯುನೆಲೆ ದಾಳಿಯ ವರದಿಗಳನ್ನು ಉಕ್ರೇನ್ ದೃಢಪಡಿಸಿಲ್ಲ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಡಿಟಿಇಕೆ ನಿರ್ವಹಿಸುವ ಹಲವಾರು ಥರ್ಮೋಎಲೆಕ್ಟ್ರಿಕ್ ವಿದ್ಯುತ್ ಸ್ಥಾವರಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಇಂಧನ ಕಂಪನಿ ಟೆಲಿಗ್ರಾಮ್​​ನಲ್ಲಿ ತಿಳಿಸಿದೆ. ಇದು ಈ ವರ್ಷ ತನ್ನ ಸೌಲಭ್ಯಗಳ ಮೇಲೆ ನಡೆದ ಎಂಟನೇ ದೊಡ್ಡ ಪ್ರಮಾಣದ ದಾಳಿಯಾಗಿದೆ ಎಂದು ಅದು ಹೇಳಿದೆ. ಎಷ್ಟು ಸ್ಥಾವರಗಳಿಗೆ ಹಾನಿಯಾಗಿದೆ ಎಂಬುದನ್ನು ಅದು ನಿರ್ದಿಷ್ಟವಾಗಿ ತಿಳಿಸಿಲ್ಲ.

ರಾಷ್ಟ್ರವ್ಯಾಪಿ ತುರ್ತು ವಿದ್ಯುತ್ ಕಡಿತವನ್ನು ಘೋಷಿಸಲಾಗಿದೆ ಎಂದು ಇಂಧನ ಸಚಿವ ಜರ್ಮನ್ ಗಲುಶ್ಚೆಂಕೊ ಫೇಸ್ ಬುಕ್​ನಲ್ಲಿ ತಿಳಿಸಿದ್ದಾರೆ.

ದಕ್ಷಿಣ ನಗರ ಮೈಕೊಲೈವ್​​ನಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಜೆಲೆನ್ ಸ್ಕಿ ಹೇಳಿದರು. ಬ್ಲೂಮ್ ಬರ್ಗ್ ಪ್ರಕಾರ, ಪಶ್ಚಿಮ ಉಕ್ರೇನ್​​ನ ಎಲ್ವಿವ್ ಪ್ರದೇಶ ಮತ್ತು ಮಧ್ಯ ಉಕ್ರೇನ್​​ನ ಡಿನಿಪ್ರೊದಲ್ಲಿಯೂ ಸಾವುನೋವುಗಳು ವರದಿಯಾಗಿವೆ.

ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಆರಂಭಿಸಿದ ನಂತರ, ರಷ್ಯಾವು ಉಕ್ರೇನ್​​ನ ಇಂಧನ ಮೂಲಸೌಕರ್ಯಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡುತ್ತಿದೆ. ರಾಷ್ಟ್ರದ ವಿದ್ಯುತ್ ಸರಬರಾಜನ್ನು ಅಡ್ಡಿಪಡಿಸುವ ಮತ್ತು ಅದನ್ನು ಹಾಳುಗೆಡವುದು ರಷ್ಯಾ ಪಡೆಗಳ ಗುರಿಯಾಗಿದೆ.

2024 ರ ಮಧ್ಯದ ವೇಳೆಗೆ, ರಷ್ಯಾದ ದಾಳಿಗಳಿಂದ ಉಕ್ರೇನ್​ನ ದೇಶೀಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸುಮಾರು 9 ಗಿಗಾವಾಟ್ (ಜಿಡಬ್ಲ್ಯೂ) ಸಾಮರ್ಥ್ಯ ನಾಶವಾಗಿದೆ. ಇದು 2023 ರ ಚಳಿಗಾಲದಲ್ಲಿ ದೇಶದ ಉತ್ಪಾದನಾ ಸಾಮರ್ಥ್ಯದ ಅರ್ಧದಷ್ಟು ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ವರದಿ ತಿಳಿಸಿದೆ. ಈಗ, ಉಕ್ರೇನ್ ತನ್ನ ಇಂಧನ ಗ್ರಿಡ್ ಮೇಲೆ ರಷ್ಯಾದ ನಿರಂತರ ದಾಳಿಯ ಮಧ್ಯೆ ಮತ್ತೊಂದು ಚಳಿಗಾಲವನ್ನು ಎದುರಿಸಲು ತಯಾರಿ ನಡೆಸುತ್ತಿದೆ.

ಇದನ್ನೂ ಓದಿ : ಇಮ್ರಾನ್​ ಖಾನ್​ರೊಂದಿಗೆ ಮಾತುಕತೆ ಇಲ್ಲವೆಂದ ಸೇನೆ: ಪಾಕ್ ಮಾಜಿ ಪ್ರಧಾನಿಗೆ ಜೈಲೇ ಗತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.