ಬರ್ಮಿಂಗ್ಹ್ಯಾಮ್: ಆ್ಯಶಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಬಾರಿಸಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದ ಸ್ಟೀವ್ ಸ್ಮಿತ್ ಆಟಕ್ಕೆ ಆಸೀಸ್ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಮನಸೋತಿದ್ದಾರೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಪ್ರತಿಷ್ಠೆಯ ಆ್ಯಶಸ್ ಟೂರ್ನಿಯ ಮೊದಲ ಪಂದ್ಯದ ಮೊದಲೆರಡು ಇನ್ನಿಂಗ್ಸ್‌ನಲ್ಲಿ ಸ್ಮಿತ್ ಕ್ರಮವಾಗಿ 144 ಹಾಗೂ 142 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಸ್ಟೀವ್ ಸ್ಮಿತ್ ಆಟವನ್ನು ಹಿರಿಯ ಕ್ರಿಕೆಟ್ ಆಟಗಾರರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಇದೇ ಆಟದ ಬಗ್ಗೆ ಜಸ್ಟಿನ್ ಲ್ಯಾಂಗರ್ ಸ್ಮಿತ್ರನ್ನು ಕೊಂಡಾಡಿದ್ದಾರೆ. ಬಾರ್ಡರ್- ಗವಾಸ್ಕರ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಆಟ ಇಷ್ಟವಾಗಿತ್ತು. ಇದೇ ಕಾರಣಕ್ಕೆ ಕೊಹ್ಲಿ ವಿಶ್ವಶ್ರೇಷ್ಠ ಆಟಗಾರ ಎಂದಿದ್ದೆ. ಆದರೆ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿನ ಸ್ಮಿತ್ ಆಟ ಇದನ್ನೂ ಮೀರಿಸಿದೆ ಎಂದಿ ಆಸೀಸ್ ಮಾಜಿ ಆಟಗಾರ ಸ್ಮಿತ್ರನ್ನು ಪ್ರಶಂಸಿಸಿದ್ದಾರೆ.
ತಂಡ ಸಂಕಷ್ಟದಲ್ಲಿದ್ದಾಗ ಉತ್ತಮ ಆಟದೊಂದಿಗೆ ಮುನ್ನಡೆಸುವ ಛಾತಿ ಸ್ಮಿತ್ರಲ್ಲಿದೆ. ಇದು ಕೇವಲ ಕೌಶಲ್ಯದ ಮಾತಲ್ಲ. ಇದು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ತೋರಿಸುತ್ತದೆ ಎಂದು ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.