ಬರ್ಮಿಂಗ್ಹ್ಯಾಮ್: ವಾರ್ವಿಕ್‌ಷೈರ್ ತಂಡದ ಪರ ಹನುಮ ವಿಹಾರಿ ಬುಧವಾರ ಒಪ್ಪಂದ ಮುಗಿಸಿದ್ದು, 6 ದಿನಗಳ ಕ್ವಾರಂಟೈನ್ ಮುಗಿಸುತ್ತಿದ್ದಂತೆ ಆರಂಭದಲ್ಲಿ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಯ ಆಲ್ರೌಂಡರ್ ಮುಂದಿನ ವಾರ ನಾಟಿಂಗ್ಹ್ಯಾಮ್ಷೈರ್ ವಿರುದ್ಧ ಕಣಕ್ಕಿಳಿಯಲಿದ್ದಾರೆಂದು ವಾರ್ವಿಕ್‌ಷೈರ್ ವಿಶ್ವಾಸ ವ್ಯಕ್ತಪಡಿಸಿದೆ.
ಹನುಮ ವಿಹಾರಿ ಇಂದು ಮಧ್ಯಾಹ್ನ ಯುಕೆಗೆ ಆಗಮಿಸಲಿದ್ದಾರೆ. ಅವರು 6 ದಿನಗಳ ಕ್ವಾರಂಟೈನ್ ಮುಗಿಸಿ ಕೋವಿಡ್-19 ನೆಗೆಟಿವ್ ವರದಿ ಪಡೆದ ನಂತರ ಮುಂದಿನ ವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಾಟಿಂಗ್ಹ್ಯಾಮ್ಷೈರ್ ವಿರುದ್ಧದ ಪಂದ್ಯದಲ್ಲಿ ತಂಡದ ಭಾಗವಾಗಲಿದ್ದಾರೆ ಎಂದು ವಾರ್ವಿಕ್‌ಷೈರ್ ಕ್ರಿಕೆಟ್ ನಿರ್ದೇಶಕ ಪಾಲ್ ಫಾರ್ಬ್ರೇಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಸಾ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾದ ಪೀಟರ್ ಮಲನ್ ಈ ವರ್ಷದ ಕೌಂಟಿ ಚಾಂಪಿಯನ್ಶಿಪ್ನಿಂದ ಹೊರಗುಳಿದಿದ್ದರಿಂದ ವಾರ್ವಿಕ್‌ಷೈರ್ ತಂಡದೊಂದಿಗೆ ವಿಹಾರಿ ಒಪ್ಪಂದ ಮಾಡಿಕೊಂಡಿದ್ದಾರೆ. 27 ವರ್ಷದ ವಿಹಾರಿ ಭಾರತದ ಪರ 12 ಟೆಸ್ಟ್ ಪಂದ್ಯಗಳಿಂದ ಒಂದು ಶತಕ ಸೇರಿದಂತೆ 32ರ ಸರಾಸರಿಯಲ್ಲಿ 624 ರನ್ ಗಳಿಸಿದ್ದಾರೆ.
ವಿಹಾರಿ 90 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 7000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲೂ 24 ವಿಕೆಟ್ ಪಡೆದಿದ್ದಾರೆ.