ನವದೆಹಲಿ : ಕ್ರಿಕೆಟ್ನಲ್ಲಿ ದಿನಕ್ಕೊಂದು ಅಚ್ಚರಿ ನಡೆಯುತ್ತಲೇ ಇರುತ್ತೆ. ಹಾಗೆಯೇ ದಿನಕ್ಕೆ ಒಬ್ಬರಂತೆ ಆಟಗಾರರು ತಂಡಕ್ಕೆ ಸೆರ್ಪಡೆಯಾಗುತ್ತಿರುತ್ತಾರೆ, ನಿವೃತ್ತಿ ಹೊಂದುತ್ತಿರುತ್ತಾರೆ. ಕ್ರಿಕೆಟ್ನ ಮಹತ್ವದ ಸರಣಿ ಎನಿಸಿಕೊಳ್ಳುವ ವಿಶ್ವಕಪ್ ನಲ್ಲಿ ಇದೇ ನನ್ನ ಕಡೆಯ ವಿಶ್ವಕಪ್ ಎಂದು ಆಡುವ ಆಟಗಾರರು ತಮ್ಮ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ನಿವೃತ್ತಿ ಘೋಷಿಸುತ್ತಾರೆ. ಅಂಥ ಆಟಗಾರರು ಇಲ್ಲಿದ್ದಾರೆ.
ಆಸ್ಟ್ರೇಲಿಯಾ ತಂಡದ ಯಶಸ್ವಿ ಬ್ಯಾಟ್ಸ್ಮನ್ ಹಾಗೂ ಕ್ಯಾಪ್ಟನ್ ರಿಕಿ ಪಾಂಟಿಂಗ್ ನಾಯಕನಾಗಿ ಮೊದಲ ವಿಶ್ವಕಪ್ನ ಪಂದ್ಯದಲ್ಲಿ ಶತಕ ಸಿಡಿಸಿದ್ದರು. 2003 ರಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡದ ಸಾರಥ್ಯ ವಹಿಸಿದ್ದ ಪಾಂಟಿಂಗ್ವಿಶ್ವಕಪ್ ಗೆದ್ದು ಸಾಧನೆ ಮಾಡಿದ್ದರು. ಈ ಪಂದ್ಯಾವಳಿಯ ಭಾರತದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 148 ರನ್ಗಳಿಸಿ ವಿಶ್ವಕಪ್ ಗೆಲುವಿನ ಮಹತ್ವದ ಪಾತ್ರ ವಹಿಸಿದ್ದರು.
ನಂತರ 2011ರ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್ ಟೂರ್ನಿ ಎಂದು ಹೇಳಿದ್ದರು. ಈ ಪಂದ್ಯಾವಳಿಯಲ್ಲಿ ಪಾಂಟಿಂಗ್ ಭಾರತ ವಿರುದ್ಧ ಕ್ವಾರ್ಟರ್ಫೈನಲ್ ಆಡಿದ್ದೇ ವಿಶ್ವಕಪ್ನ ಕೊನೆಯ ಪಂದ್ಯವಾಯಿತು. ಈ ಪಂದ್ಯದಲ್ಲಿ ಪಾಂಟಿಂಗ್ 118 ಬಾಲ್ಗಳಲ್ಲಿ 104 ರನ್ ಬಾರಿಸಿದ್ರೂ ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿದ್ದರು.
ಇನ್ನು ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಡಂ ಗಿಲ್ಕ್ರಿಸ್ಟ್ ಕೂಡಾ ಇಂತಹ ಸಾಧನೆ ಮಾಡಿದ್ದಾರೆ. 2003ರ ವಿಶ್ವಕಪ್ ಪಂದ್ಯಾವಳಿಯ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
2007ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದರು. ಮಳೆ ಬಂದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಂದ್ಯವನ್ನು 38 ಒವರ್ಗಳಿಗೆ ಇಳಿಸಲಾಗಿತ್ತು. ಓಪನರ್ ಆಗಿ ಕಣಕ್ಕಿಳಿದ್ದ ಗಿಲ್ಕ್ರಿಸ್ಟ್ 104 ಬಾಲ್ಗಳಲ್ಲಿ 149 ರನ್ಗಳಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ತಂಡ ಲಂಕಾ ವಿರುದ್ಧ 53 ರನ್ಗಳಿಂದ ಗೆಲುವು ಸಾಧಿಸಿತ್ತು.
ಹಾಗೆಯೇ ಪಾಕಿಸ್ತಾನ ತಂಡದ ಒಪನಿಂಗ್ ಬ್ಯಾಟ್ಸ್ಮನ್ ಇಮ್ರಾನ್ ನಜೀರ್ ಕೂಡಾ ತಮ್ಮ ಕೊನೆಯ ವರ್ಲ್ಡ್ಕಪ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ರು. 2007ರಲ್ಲಿ ಜ್ವಿಂಬಾಂಬೆ ವಿರುದ್ಧ ನಜೀರ್ 121 ಬಾಲ್ಗಳಲ್ಲಿ 8 ಸಿಕ್ಸ್ರ್ 14 ಬೌಂಡರಿ ಸಮೇತ 160 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ, ಜ್ವಿಂಬಾಂಬೆ ವಿರುದ್ಧ ಭರ್ಜರಿ ಜಯಗಳಿಸಿತ್ತು.