ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಭಾರತ ತಂಡ ಇನ್ನಿಂಗ್ಸ್ ಹಾಗೂ 137 ರನ್ಗಳಿಂದ ಜಯ ಸಾಧಿಸು ಮೂಲಕ ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 275 ರನ್ಗಳಿಗೆ ಆಲೌಟ್ ಆಗುವ ಮೂಲಕ 326 ರನ್ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿ ಫಾಲೋಅನ್ಗೆ ತುತ್ತಾಗಿದ್ದ ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ದಿನದಾಟದಲ್ಲಿ 189 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 137 ರನ್ಗಳ ಸೋಲನುಭವಿಸಿತು.
ಆರಂಭಿಕರಾದ ಮಾರ್ಕ್ರಮ್ ಮೊದಲ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರೆ, ನಂತರ ಬಂದ ಥ್ಯೂನಿಸ್ ಡಿ ಬ್ರೂಯ್ನ್ (8) ಉಮೇಶ್ ಯಾದವ್ ಬೌಲಿಂಗ್ನಲ್ಲಿ ಸಹಾ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಇವರ ಬೆನ್ನಲ್ಲೇ ನಾಯಕ ಪ್ಲೆಸಿಸ್(5) ಹಾಗೂ 48 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಡೀನ್ ಎಲ್ಗರ್ ಅಶ್ವಿನ್ ಬೌಲಿಂಗ್ನಲ್ಲಿ ಔಟಾದರು.
-
That will be it. #TeamIndia win the 2nd Test by an innings & 137 runs. 2-0 🇮🇳🇮🇳 #INDvSA @Paytm pic.twitter.com/pt3PPffdQt
— BCCI (@BCCI) October 13, 2019 " class="align-text-top noRightClick twitterSection" data="
">That will be it. #TeamIndia win the 2nd Test by an innings & 137 runs. 2-0 🇮🇳🇮🇳 #INDvSA @Paytm pic.twitter.com/pt3PPffdQt
— BCCI (@BCCI) October 13, 2019That will be it. #TeamIndia win the 2nd Test by an innings & 137 runs. 2-0 🇮🇳🇮🇳 #INDvSA @Paytm pic.twitter.com/pt3PPffdQt
— BCCI (@BCCI) October 13, 2019
ಭೋಜನ ವಿರಾಮದ ವೇಳೆಗೆ 74 ರನ್ಗೆ 4 ವಿಕೆಟ್ ಕಳೆದುಕೊಂಡಿದ ಆಫ್ರಿಕಾ ತಂಡ ವಿರಾಮದ ನಂತರ ಡಿಕಾಕ್(5) ಬವುಮಾ(38)ರನ್ನು ಜಡೇಜಾ ಪೆವಿಲಿಯನ್ಗಟ್ಟಿದ್ದರು. ನಂತರ ಬಂದ ಮುತ್ತುಸ್ವಾಮಿಯನ್ನು (9) ಶಮಿ ಬೌಲಿಂಗ್ನಲ್ಲಿ ರೋಹಿತ್ ಕ್ಯಾಚ್ ನೀಡಿ ಔಟಾದರು.
ಮತ್ತೆ ಕಾಡಿದ ಫಿಲಾಂಡರ್-ಮಹಾರಾಜ
ಮೊದಲ ಇನ್ನಿಂಗ್ಸ್ನಲ್ಲಿ 42 ಓವರ್ಗಳ ಕಾಳ ಭಾರತೀಯರನ್ನು ಕಾಡಿದ್ದ ಈ ಜೋಡಿ ಎರಡನೇ ಇನ್ನಿಂಗ್ಸ್ನಲ್ಲೂ 22 ಓವರ್ಗಳ ಜೊತೆಯಾಟ ನಡೆಸಿ ಭಾರತದ ಗೆಲುವನ್ನು ಸ್ವಲ ಸಮಯ ಮುಂದೂಡಿದರು.
ಆದರೆ 67 ನೇ ಓವರ್ನಲ್ಲಿ ಕಣಕ್ಕಿಳಿದ ಉಮೇಶ್ ಯಾದವ್ 37 ರನ್ಗಳಿಸಿದ್ದ ವೆರ್ನಾನ್ ಫಿಲಾಂಡರ್ ಹಾಗೂ ಇವರ ನಂತರ ಬಂದ ರಬಡಾ(4)ರನ್ನು ಒಂದೇ ಓವರ್ನಲ್ಲಿ ಔಟ್ ಮಾಡಿದರು. ನಂತರದ ಓವರ್ನಲ್ಲೇ 22 ರನ್ಗಳಿಸಿದ್ದ ಮಹಾರಾಜರನ್ನು ಜಡೇಜಾ ಎಲ್ಬಿ ಬಲೆಗೆ ಬೀಳಿಸಿ ಹರಿಣಗಳ ಎರಡನೇ ಇನ್ನಿಂಗ್ಸ್ಗೆ ತೆರೆ ಎಳೆದರು.
-
That will be it. #TeamIndia win the 2nd Test by an innings & 137 runs. 2-0 🇮🇳🇮🇳 #INDvSA @Paytm pic.twitter.com/pt3PPffdQt
— BCCI (@BCCI) October 13, 2019 " class="align-text-top noRightClick twitterSection" data="
">That will be it. #TeamIndia win the 2nd Test by an innings & 137 runs. 2-0 🇮🇳🇮🇳 #INDvSA @Paytm pic.twitter.com/pt3PPffdQt
— BCCI (@BCCI) October 13, 2019That will be it. #TeamIndia win the 2nd Test by an innings & 137 runs. 2-0 🇮🇳🇮🇳 #INDvSA @Paytm pic.twitter.com/pt3PPffdQt
— BCCI (@BCCI) October 13, 2019
ಭಾರತದ ಪರ ಉಮೇಶ ಯಾದವ್ 3, ಜಡೇಜಾ 3, ಅಶ್ವಿನ್ 2, ಶಮಿ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ 3 ಪಂದ್ಯಗಳ ಸರಣಿಯನ್ನು ಇನ್ನು ಒಂದು ಪಂದ್ಯ ಇರುವಂತೆಯೇ 2-0 ಯಲ್ಲಿ ಸರಣಿ ವಶಪಡಿಸಿಕೊಂಡಿತು. ಆಕರ್ಷಕ ದ್ವಿಶತಕ ಸಿಡಿಸಿದ್ದ ನಾಯಕ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.