ETV Bharat / sports

ಬಹುಕಾಲದ ಟೀಮ್​ ಇಂಡಿಯಾ ಸಮಸ್ಯೆಗೆ ಪರಿಹಾರವಾದ್ರು ಶ್ರೇಯಸ್​ ಅಯ್ಯರ್​ - ಟಿ20 ವಿಶ್ವಕಪ್​

ಕಳೆದ ವರ್ಷ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್​ ಅಯ್ಯರ್​ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಯಶಸ್ವಿಯೂ ಆಗಿದ್ದರು. ಆದರೆ, ವಿಶ್ವಕಪ್​ ತಂಡದಲ್ಲಿ ಅವಕಾಶವಂಚಿತರಾಗಿ ನಿರಾಶೆಯನುಭವಿಸಿದ್ದ ಅವರು, ವಿಂಡೀಸ್​ ವಿರುದ್ಧ ಸರಣಿಯಲ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದರು.

Shreyas Iyer ಶ್ರೇಯಸ್​ ಅಯ್ಯರ್​
author img

By

Published : Nov 11, 2019, 4:54 PM IST

ಮುಂಬೈ: ಭಾರತ ತಂಡದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರನ ಆಯ್ಕೆಗೆ ಬಿಸಿಸಿಐ ನಡೆಸಿದ ಪ್ರಯೋಗಕ್ಕೆ ಇದೀಗ ಯಶಸ್ಸು ಸಿಕ್ಕಿದೆ.

ಹೌದು, ಕಳೆದ ವರ್ಷ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್​ ಅಯ್ಯರ್​ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಯಶಸ್ವಿಯೂ ಆಗಿದ್ದರು. ಆದರೆ, ವಿಶ್ವಕಪ್​ ತಂಡದಲ್ಲಿ ಅವಕಾಶವಂಚಿತರಾಗಿ ನಿರಾಶೆಯನುಭವಿಸಿದ್ದ ಅವರು ವಿಂಡೀಸ್​ ವಿರುದ್ಧ ಸರಣಿಯಲ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಇದೀಗ ಟಿ-20 ಕ್ರಿಕೆಟ್​ಯಲ್ಲೂ ತಮ್ಮ ತಾಕತ್ತು ಪ್ರದರ್ಶಿಸಿರುವ ಅಯ್ಯರ್​ ಬಾಂಗ್ಲಾದೇಶದ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮುಂಬರುವ ವಿಶ್ವಕಪ್​ಗೆ ತಾವೇ 4 ನೇ ಕ್ರಮಾಂಕಕ್ಕೆ ಸೂಕ್ತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

  • ' class='align-text-top noRightClick twitterSection' data=''>

ನಿನ್ನೆಯ ಪಂದ್ಯದಲ್ಲಿ ರೋಹಿತ್​-ಧವನ್​ ಬೇಗ ಔಟಾಗಿ ಪೆವಿಲಿಯನ್​ ಸೇರಿಕೊಂಡಿದ್ದರು. ಆ ವೇಳೆ, ಕ್ರೀಸ್​ಗೆ ಆಗಮಿಸಿದ ಅಯ್ಯರ್​ ಮೊದಲು ರಾಹುಲ್​ಗೆ ಹೆಚ್ಚಿನ ಸ್ಟ್ರೈಕ್​ ನೀಡುತ್ತಾ ರನ್​ ಸೇರಿಸಲು ನೆರವಾದರು. ರಾಹುಲ್​ ಅರ್ಧಶತಕ ಸಿಡಿಸಿ ಔಟಾದ ನಂತರ ವೇಗವಾಗಿ ಬ್ಯಾಟ್​ ಬೀಸಿ​ 33 ಎಸೆತಗಳಲ್ಲಿ ಹ್ಯಾಟ್ರಿಕ್ ಸೇರಿದಂತೆ 5 ಭರ್ಜರಿ ಸಿಕ್ಸರ್​ ಹಾಗೂ 3 ಬೌಂಡರಿ ಸಹಿತ 62 ರನ್​ಗಳಿಸಿದರು.

2020ರಲ್ಲಿ ಟಿ-20 ವಿಶ್ವಕಪ್​ ಇರುವುದರಿಂದ ಭಾರತ ತಂಡಕ್ಕೆ ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್​ ಅಯ್ಯರ್​ ಬಹುತೇಕ ಖಚಿತ ಎನ್ನಲಾಗುತ್ತಿದ್ದರೂ, ಶ್ರೇಯಸ್​ ಮಾತ್ರ ತಾವೂ ಯಾವುದೇ ಕ್ರಮಾಂಕಕ್ಕಾದರೂ ಸಿದ್ದ, 4ನೇ ಕ್ರಮಾಂಕಕ್ಕೆ ತುಂಬಾ ಪೈಪೋಟಿಯಿದೆ. ಅಲ್ಲದೇ ಎಲ್ಲರೂ ಉತ್ತಮವಾಗಿ ಬ್ಯಾಟಿಂಗ್​ ನಡೆಸುವವರೇ ಇರುವುದರಿಂದ ಇಲ್ಲಿ ಯಾರೊಬ್ಬರನ್ನು ಕಡೆಗಣಿಸಿ ನನ್ನನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ತಂಡದ ಆಡಳಿತ ಮಂಡಳಿ ನನಗೆ 4ನೇ ಕ್ರಮಾಂಕ ನೀಡಿದೆ, ಅದರಲ್ಲಿ ಮುಂದುವರಿಯುವತ್ತ ನನ್ನ ಗಮನ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.