ಟೌಂಟನ್: ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 6000 ರನ್ ಹಾಗೂ 250 ಕ್ಕೂ ಹೆಚ್ಚು ವಿಕೆಟ್ ಪಡದ ಬಾಂಗ್ಲಾದ ಪ್ರಥಮ, ವಿಶ್ವದ 4ನೇ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು.
ನಿನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 99 ಎಸೆತಗಳಲ್ಲಿ 124 ರನ್ಗಳಿಸಿದ ಶಕಿಬ್ ಅಲ್ ಹಸನ್ ಏಕದಿನ ಕ್ರಿಕೆಟ್ನಲ್ಲಿ 6 ಸಾವಿರ ರನ್ ಪೂರೈಸಿದರು. ಕಳೆದ ಪಂದ್ಯದಲ್ಲಿ 250 ವಿಕೆಟ್ ಪಡೆದಿದ್ದ ಶಕಿಬ್ ಇದೀಗ ಬಾಂಗ್ಲಾದೇಶದ ಪರ ಅತಿ ಹೆಚ್ಚುರನ್ ಹಾಗೂ ಅತಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಇನ್ನು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 6 ಸಾವಿರ ರನ್ ಹಾಗೂ 250 ವಿಕೆಟ್ ಪಡೆದಿರುವ ಪಟ್ಟಿಯಲ್ಲಿ ಶಕಿಬ್ 4ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ 13,430 ರನ್ ಹಾಗೂ 323 ವಿಕೆಟ್ಸ್, 2ನೇಸ್ಥಾನದಲ್ಲಿ ಆಫ್ರಿಕಾದ ಜಾಕ್ ಜಾಕ್ ಕಾಲೀಸ್ ಇದ್ದು, 11579 ರನ್ ಹಾಗೂ 273 ವಿಕೆಟ್ಗಳನ್ನ ಪಡೆದಿದ್ದಾರೆ.
ಇಷ್ಟೇ ಅಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಸತತ 2 ಶತಕ ಸಿಡಿಸಿದ ಬಾಂಗ್ಲಾದ ಎರಡನೇ ಬ್ಯಾಟ್ಸ್ಮನ್ ಕೂಡ ಹಾಗೂ ಸತತ ನಾಲ್ಕು ಪಂದ್ಯಗಳಲ್ಲಿ 50ಕ್ಕಿಂತ ಹೆಚ್ಚು ರನ್ಗಳಿಸಿದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿದರು. ಇವರಿಗೂ ಮೊದಲು ಭಾರತದ ನವ್ಜೋತ್ ಸಿಂಗ್ ಸಿಧು (1987) ಸಚಿನ್ (1996), ಗ್ರೇಮ್ ಸ್ಮಿತ್(2007) ರಲ್ಲಿ ಸತತ 50+ ಸ್ಕೋರ್ ಮಾಡಿದ್ದರು.
199 ಇನ್ನಿಂಗ್ಸ್ನಲ್ಲಿ 5000 ಸಾವಿರ ರನ್ ಪೂರೈಸುವ ಮೂಲಕ ಸಂಗಾಕ್ಕರ, ಯುವರಾಜ್ ಸಿಂಗ್, ದಿಲ್ಶನ್ರ ದಾಖಲೆ ಬ್ರೇಕ್ ಮಾಡಿದರು.