ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲುವ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಗಾಯಗೊಂಡಿದ್ದರೂ ತಂಡಕ್ಕಾಗಿ ಮೂರು ಗಂಟೆಗಳ ಕಾಲ ಅಶ್ವಿನ್ ಜೊತೆಗೂಡಿ ವಿಹಾರಿ 43 ಓವರ್ಗಳ ಕಾಲ ಬ್ಯಾಟಿಂಗ್ ನಡೆಸಿದ್ದರು.
ಆದರೆ ಈ ಪಂದ್ಯ ಮುಗಿಯುತ್ತಿದ್ದಂತೆ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ, 109 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದ 'ಹನುಮ ಬಿಹಾರಿ' ಭಾರತ ಐತಿಹಾಸಿಕ ಟೆಸ್ಟ್ ಜಯ ಸಾಧಿಸಬಹುದಾಗಿದ್ದ ಅವಕಾಶವನ್ನಷ್ಟೇ ಕೊಲೆ ಮಾಡಿಲ್ಲ, ಅವರು ಸಂಪೂರ್ಣ ಕ್ರಿಕೆಟ್ಅನ್ನೇ ಕೊಲೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
-
Apna Vihari , Sab par Bhaari ! pic.twitter.com/PoHqWHUIwV
— Virender Sehwag (@virendersehwag) January 13, 2021 " class="align-text-top noRightClick twitterSection" data="
">Apna Vihari , Sab par Bhaari ! pic.twitter.com/PoHqWHUIwV
— Virender Sehwag (@virendersehwag) January 13, 2021Apna Vihari , Sab par Bhaari ! pic.twitter.com/PoHqWHUIwV
— Virender Sehwag (@virendersehwag) January 13, 2021
ಆ ಟ್ವೀಟ್ಗೆ ಇಂದು ಪ್ರತಿಕ್ರಿಯಿಸಿರುವ ವಿಹಾರಿ, ನನ್ನ ಹೆಸರು 'ಹನುಮ ವಿಹಾರಿ' ಎಂದು ಬಾಬುಲ್ ಸುಪ್ರಿಯೋ ಅವರ ಟ್ವೀಟ್ಗೆ ಮಾರ್ಮಿಕವಾಗಿ ತಾವೂ ಭಾರತಕ್ಕಾಗಿ ಅತ್ಯುತ್ತಮವಾದ ಕ್ರಿಕೆಟ್ ಆಡಿರುವುದಾಗಿ ದೈರ್ಯದಿಂದ ಉತ್ತರ ಕೊಟ್ಟಿದ್ದರು.
-
ROFLMAX!! 😂😂😂 pic.twitter.com/gIHpngYg3E
— Ashwin 🇮🇳 (@ashwinravi99) January 13, 2021 " class="align-text-top noRightClick twitterSection" data="
">ROFLMAX!! 😂😂😂 pic.twitter.com/gIHpngYg3E
— Ashwin 🇮🇳 (@ashwinravi99) January 13, 2021ROFLMAX!! 😂😂😂 pic.twitter.com/gIHpngYg3E
— Ashwin 🇮🇳 (@ashwinravi99) January 13, 2021
ವಿಹಾರಿ ಕೇಂದ್ರ ಸಚಿವರಿಗೆ ಟಾಂಗ್ ನೀಡಿದ ಟ್ವೀಟ್ ಭಾರಿ ವೈರಲ್ ಆಗುತ್ತಿದ್ದು, ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಬಬಲ್ ಸುಪ್ರಿಯೋ ಅವರಿಗೆ ಕ್ರಿಕೆಟ್ ಬಗ್ಗೆ ಎರಡಕ್ಷರದ ಜ್ಞಾನವಿಲ್ಲ, ಸೋಲುವ ಪಂದ್ಯವನ್ನು 2ನೇ ಗ್ರೇಡ್ ಗಾಯಕ್ಕೊಳಗಾದರೂ 3 ಗಂಟೆ ಮೈದಾನದಲ್ಲಿ ಆಡಿರುವುದಕ್ಕೆ ಮೊದಲು ಗೌರವ ಕೊಡಬೇಕೆಂದು ಭಾರತೀಯ ಕ್ರಿಕೆಟಿಗನ ಪರ ಬ್ಯಾಟಿಂಗ್ ಮಾಡಿದ್ದಾರೆ. ಜೊತೆಗೆ ಇದು ಟ್ವೀಟ್ ಆಫ್ ದ ಡಿಕೇಡ್ ಎಂದಿದ್ದಾರೆ.
ಕೇವಲ ಅಭಿಮಾನಿಗಳಲ್ಲದೆ, ವಿಹಾರಿ ಜೊತೆ ದಾಖಲೆಯ ಜೊತೆಯಾಟದಲ್ಲಿ ಭಾಗಿಯಾಗಿದ್ದ ಅಶ್ವಿನ್ ಕೂಡ ವಿಹಾರಿ ಉತ್ತರ ನೋಡಿ ನೆಲದ ಮೇಲೆ ಹೊರಳಾಡುವಷ್ಟು ನಗು ಬರುತ್ತಿದೆ ಎಂಬರ್ಥದಲ್ಲಿ (ROFLMAX!! )ಎಂದು ಟ್ವೀಟ್ ಮಾಡಿದ್ದರು. ಇದೀಗ ಸೆಹ್ವಾಗ್ ಕೂಡ ಟ್ವೀಟ್ ಮಾಡಿದ್ದು, 'ಆಪ್ನ ವಿಹಾರಿ ಸಬ್ ಪರ್ ಭಾರಿ'(ನಮ್ಮ ವಿಹಾರಿ ಎಲ್ಲರಿಗಿಂತಲೂ ಒಂದು ಕೈ ಮೇಲೂ) ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.