ETV Bharat / sports

ನಿವೃತ್ತಿ ಯೂಟರ್ನ್​ಗೆ ಸಿಕ್ತು ಬಂಪರ್​​; ಹೈದರಾಬಾದ್​ ತಂಡಕ್ಕೆ ರಾಯುಡು ಕ್ಯಾಪ್ಟನ್‌!

ವಿಶ್ವಕಪ್​​ನಲ್ಲಿ ಅವಕಾಶ ವಂಚಿತರಾಗಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದ ಅಂಬಾಟಿ ರಾಯುಡು, ಕಳೆದ ಕೆಲ ದಿನಗಳ ಹಿಂದೆ ತಮ್ಮ ನಿರ್ಧಾರವನ್ನು ವಾಪಸ್​ ಪಡೆದುಕೊಂಡಿದ್ದರು. ಇದೀಗ ಅವರು ಮುಂಬರುವ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಗೆ ಹೈದರಾಬಾದ್​​ ತಂಡದ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ.

ಅಂಬಾಟಿ ರಾಯುಡು
author img

By

Published : Sep 14, 2019, 4:00 PM IST

Updated : Sep 14, 2019, 4:07 PM IST

ಮುಂಬೈ: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಅವಕಾಶ ವಂಚಿತರಾದ ನಿರಾಸೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಘೋಷಿಸಿದ್ದ ಟೀಂ ಇಂಡಿಯಾ ಆಟಗಾರ​​ ಅಂಬಾಟಿ ರಾಯುಡು ಕಳೆದ ಕೆಲ ದಿನಗಳ ಹಿಂದೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಇದೀಗ ಅವರನ್ನು ಮುಂಬರುವ ವಿಜಯ್​ ಹಜಾರೆ ಟ್ರೋಫಿ ಹಿನ್ನೆಲೆಯಲ್ಲಿ ಹೈದರಾಬಾದ್​ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ.

ಕಳೆದ ವಿಶ್ವಕಪ್​​ನಲ್ಲಿ ಇವರ ಜಾಗಕ್ಕೆ ಆಲ್​ರೌಂಡರ್​ ವಿಜಯ್​ ಶಂಕರ್​ ತದನಂತರ ರಿಷಭ್​ ಪಂತ್​ ಆಯ್ಕೆಯಾಗಿದ್ದರು. ಆಯ್ಕೆ ಸಮಿತಿ ನಿರ್ಧಾರದಿಂದ ಬೇಸತ್ತು ವೃತ್ತಿ ಬದುಕಿಗೆ ರಾಯುಡು ವಿದಾಯ ಘೋಷಣೆ ಮಾಡಿದ್ದರು. ಇದಾದ ಬಳಿಕ ತಮ್ಮ ತಪ್ಪಿನ ಅರಿವಾಗಿ ನಿವೃತ್ತಿ ವಾಪಸ್ ಪಡೆದುಕೊಂಡಿದ್ದಾಗಿ ಹೇಳಿಕೆ ನೀಡಿದ್ದರು.

ನಿವೃತ್ತಿ ಘೋಷಣೆ ಹೇಳಿಕೆ ಹಿಂಪಡೆದುಕೊಳ್ಳುವಂತೆ ಮಾಡಲು ಹೈದರಾಬಾದ್​ ಕ್ರಿಕೆಟ್ ಆಯ್ಕೆ​ ಸಮಿತಿ ಮುಖ್ಯಸ್ಥ ನೋಯೆಲ್ ಡೇವಿಡ್ ಹಾಗೂ ಮಾಜಿ ಕ್ರಿಕೆಟರ್​ ವಿವಿಎಸ್​ ಲಕ್ಷ್ಮಣ್​ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಸೆಪ್ಟೆಂಬರ್​ 24ರಿಂದ ಕರ್ನಾಟಕ ವಿರುದ್ಧ ಸೆಣಸುವ ಮೂಲಕ ಅಭಿಯಾನ ಆರಂಭಿಸಲಿರುವ ಹೈದರಾಬಾದ್​, ತದನಂತರ ಕ್ರಮವಾಗಿ ಗೋವಾ, ಆಂಧ್ರಪ್ರದೇಶ, ಜಾರ್ಖಂಡ್​, ಛತ್ತೀಸ್‌ಗಢ, ಸೌರಾಷ್ಟ್ರ,ಮುಂಬೈ ಹಾಗೂ ಕೇರಳ ತಂಡದೊಂದಿಗೆ ಫೈಟ್‌ ಮಾಡಲಿದ್ದಾರೆ. ಎಲ್ಲ ಪಂದ್ಯಗಳೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಹೈದರಾಬಾದ್​ ತಂಡ:

ಅಂಬಾಟಿ ರಾಯುಡು (ಕ್ಯಾಪ್ಟನ್​), ಬಿ ಸಂದೀಪ್ ​(ಡೆಪ್ಯುಟಿ ಕ್ಯಾಪ್ಟನ್​), ಪಿ ಆಕಾಶ್​ ರೆಡ್ಡಿ, ತನ್ಮಯಾ ಅಗರವಾಲ್​, ಠಾಕೂರ್​ ವರ್ಮಾ, ರೋಹಿತ್​ ರಾಯುಡ, ಮಿಲಿಂದ್​, ಮೆಹದಿ ಹಸನ್​, ಸಾಯಿ ರಾಮ್​, ಮೊಹಮ್ಮದ್​ ಸಿರಾಜ್​, ಜೈಸ್ವಾಲ್​, ಜೆ ಮಲ್ಲಿಕಾರ್ಜುನ್​(ವಿ.ಕೀ), ಟಿ ರವಿತೇಜ್​, ಅಜಯ್​ ದೇವ್​ ಗೌಡ.

Intro:Body:

ನಿವೃತ್ತಿ ಯೂಟರ್ನ್​ ಆಫರ್​​... ಹೈದರಾಬಾದ್​ ತಂಡದ ಕ್ಯಾಪ್ಟನ್​ ಆಗಿ ರಾಯುಡು ನೇಮಕ! 

ಮುಂಬೈ: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಅವಕಾಶ ವಂಚಿತರಾಗಿ ಅದೇ ನಿರಾಸೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಂಡಿದ್ದ ಟೀಂ ಇಂಡಿಯಾ ಪ್ಲೇಯರ್​​ ಅಂಬಾಡಿ ರಾಯುಡು ಕಳೆದ ಕೆಲ ದಿನಗಳ ಹಿಂದೆ ತಮ್ಮ ನಿವೃತ್ತಿ ವಾಪಸ್​ ಪಡೆದುಕೊಂಡಿದ್ದರು. ಇದೀಗ ಅವರನ್ನ ಮುಂಬರುವ ವಿಜಯ್​ ಹಜಾರೆ ಟ್ರೋಫಿಯ ಹೈದರಾಬಾದ್​ ತಂಡದ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. 

ವಿಶ್ವಕಪ್​​ನಲ್ಲಿ ವಿಶ್ವಕಪ್​​ನಲ್ಲಿ ಇವರ ಜಾಗಕ್ಕೆ ಆಲ್​ರೌಂಡರ್​ ವಿಜಯ್​ ಶಂಕರ್​ ತದನಂತರ ರಿಷಭ್​ ಪಂತ್​ಗೆ ಅವಕಾಶ ನೀಡಿದ್ದರಿಂದ ನಿರಾಸೆಗೊಂಡು ವೃತ್ತಿ ಬದುಕಿಗೆ ವಿದಾಯ ಘೋಷಣೆ ಮಾಡಿದ್ದರು. ಇದಾದ ಬಳಿಕ ತಮ್ಮ ತಪ್ಪಿನ ಅರಿವಾಗಿ ನಿವೃತ್ತಿ ವಾಪಸ್ ಪಡೆದುಕೊಂಡಿದ್ದಾಗಿ ಘೋಷಣೆ ಮಾಡಿದ್ದರು. 

ತಮ್ಮ ನಿವೃತ್ತಿ ಘೋಷಣೆ ಹೇಳಿಕೆ ಹಿಂಪಡೆದುಕೊಳ್ಳುವಂತೆ ಮಾಡಲು ಹೈದರಾಬಾದ್​ ಕ್ರಿಕೆಟ್ ಆಯ್ಕೆ​ ಸಮಿತಿ ಮುಖ್ಯಸ್ಥ ನೋಯೆಲ್ ಡೇವಿಡ್ ಹಾಗೂ ಮಾಜಿ ಕ್ರಿಕೆಟರ್​ ವಿವಿಎಸ್​ ಲಕ್ಷ್ಮಣ್​ ಮಹತ್ವದ ಪಾತ್ರ ನಿರ್ವಹಿಸಿದ್ದರು. ಅಂಬಾಡಿ ರಾಯುಡು ಜತೆ ಹೈದರಾಬಾದ್​ ತಂಡದಲ್ಲಿ ಮೊಹಮ್ಮದ್​ ಸಿರಾಜ್​ ಸಹ ಇದ್ದಾರೆ. 

ಸೆಪ್ಟೆಂಬರ್​ 24ರಿಂದ ಕರ್ನಾಟಕ ವಿರುದ್ಧ ಸೆಣಸಾಟ ಮಾಡುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿರುವ ಹೈದರಾಬಾದ್​ ತದನಂತರ ಕ್ರಮವಾಗಿ ಗೋವಾ,ಆಂಧ್ರಪ್ರದೇಶ,ಜಾರ್ಖಂಡ್​,ವತ್ತೀಸಘಡ,ಸೌರಾಷ್ಟ್ರ,ಮುಂಬೈ ಹಾಗೂ ಕೇರಳ ತಂಡದೊಂದಿಗೆ ಸೆಣಸಾಟ ನಡೆಸಲಿದ್ದಾರೆ. ಎಲ್ಲ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. 

ಹೈದರಾಬಾದ್​ ತಂಡ ಇಂತಿದೆ: ಅಂಬಾಡಿ ರಾಯುಡು(ಕ್ಯಾಪ್ಟನ್​), ಬಿ ಸಂದೀಪ್​(ಡೆಪ್ಯುಟಿ ಕ್ಯಾಪ್ಟನ್​),ಪಿ ಆಕಾಶ್​ ರೆಡ್ಡಿ, ತನ್ಮಯಾ ಅಗರವಾಲ್​,ಠಾಕೂರ್​ ವರ್ಮಾ,ರೋಹಿತ್​ ರಾಯುಡ,ಮಿಲಿಂದ್​,ಮೆಹದಿ ಹಸನ್​,ಸಾಯಿ ರಾಮ್​,ಮೊಹಮ್ಮದ್​ ಸಿರಾಜ್​,ಜೈಸ್ವಾಲ್​,ಜೆ ಮಲ್ಲಿಕಾರ್ಜುನ್​(ವಿ.ಕೀ), ಟಿ ರವಿತೇಜ್​, ಅಜಯ್​ ದೇವ್​ ಗೌಡ

Conclusion:
Last Updated : Sep 14, 2019, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.