ETV Bharat / sports

ಟೀಂ ಇಂಡಿಯಾ ಕೋಚ್​ ಆಗಿ ರವಿಶಾಸ್ತ್ರಿ ಬಹುತೇಕ ಖಚಿತ... ನಾಳೆ ಹೆಸರಿಗೆ ಮಾತ್ರ ಸಂದರ್ಶನ!

ಟೀಂ ಇಂಡಿಯಾ ಕೋಚ್​ ಹುದ್ದೆಗಾಗಿ ಅಭ್ಯರ್ಥಿ ಹುಡುಕಾಟದಲ್ಲಿರುವ ಭಾರತೀಯ ಕ್ರಿಕೆಟ್​ ಮಂಡಳಿ ನಾಳೆ ಸಂದರ್ಶನ ನಡೆಸಲಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾ ಕೋಚ್​ ಆಗಿ ರವಿಶಾಸ್ತ್ರಿ ಮತ್ತೊಂದು ಅವಧಿಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ರವಿಶಾಸ್ತ್ರಿ/Ravi shastri
author img

By

Published : Aug 15, 2019, 6:12 PM IST

ಮುಂಬೈ: ಟೀಂ ಇಂಡಿಯಾ ಕೋಚ್​ ಹುದ್ದೆಗೆ ಅರ್ಜಿ ಆಹ್ವಾನ ಮಾಡಿರುವ ಬಿಸಿಸಿಐ ನಾಳೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ಆದರೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮತ್ತೊಂದು ಅವಧಿಗೆ ಕೋಚ್​ ಆಗಿ ರವಿಶಾಸ್ತ್ರಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ತಂಡದ ಕೋಚ್​ ಹುದ್ದೆಗಾಗಿ ಬಿಸಿಸಿಐ ನ್ಯೂಜಿಲ್ಯಾಂಡ್​ನ ಮಾಜಿ ಕೋಚ್​​ ಮೈಕ್​ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಹಾಗೂ ಶ್ರೀಲಂಕಾ ಕೋಚ್​ ಟಾಮ್​ ಮೊಡಿ, ಆಫ್ಘಾನಿಸ್ತಾನದ ಕೋಚ್​​ ಸಿಮನ್ಸ್​​, ಟೀಂ ಇಂಡಿಯಾ ಮಾಜಿ ಮ್ಯಾನೇಜರ್​ ಲಾಲ್​ಚಂದ್​ ರಜಪೂತ್​, ರಾಬಿನ್​​ ಸಿಂಗ್​​ ಹೆಸರು ಫೈನಲ್ ಮಾಡಿದ್ದು, ಇದರ ಜತೆಗೆ ಟೀಂ ಇಂಡಿಯಾ ಹಾಲಿ ಕೋಚ್​​ ರವಿಶಾಸ್ತ್ರಿ ಇದ್ದಾರೆ.

ಆದರೆ ಇನ್ನೊಂದು ಅವಧಿಗೆ ಅವರನ್ನೇ ಕೋಚ್​ ಆಗಿ ಮುಂದುವರಿಸುವ ಇರಾದೆ ಬಿಸಿಸಿಐಗೆ ಇದೆ ಎನ್ನಲಾಗಿದ್ದು, ಅದಕ್ಕೆ ತಂಡದ ಆಟಗಾರರು ಸಹ ಸಹಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಕೊಹ್ಲಿ ಕೂಡ ರವಿಶಾಸ್ತ್ರಿ ಅವರನ್ನೇ ತಂಡದ ಕೋಚ್​ ಆಗಿ ಮುಂದುವರಿಸುವ ಬಗ್ಗೆ ಸುಳಿವು ಸಹ ನೀಡಿದ್ದರು.

ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯರ ಸಮಿತಿ ನೂತನ ಕೋಚ್ ಆಯ್ಕೆ ಮಾಡಲಿದ್ದು, ಈಗಾಗಲೇ ಮಾತನಾಡಿರುವ ಸಮಿತಿಯ ಸದಸ್ಯ ಅಂಶುಮನ್ ಗಾಯಕ್‌ವಾಡ್, ಮುಖ್ಯ ತರಬೇತುದಾರ ಸ್ಥಾನವನ್ನು ರವಿಶಾಸ್ತ್ರಿ ಉಳಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ಸಹ ನೀಡಿದ್ದಾರೆ. ಉಳಿದಂತೆ ಸಹಾಯಕ ಕೋಚ್​ ಹುದ್ದೆಗಳಿಗಾಗಿ ಕೆಲವೊಂದು ಬದಲಾವಣೆ ಆಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ರವಿಶಾಸ್ತ್ರಿಗೆ ಇವೆಲ್ಲ ಪ್ಲಸ್​ ಪಾಯಿಂಟ್​
ರವಿಶಾಸ್ತ್ರಿ ಟೀಂ ಇಂಡಿಯಾದೊಂದಿಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಈ ಹಿಂದೆ ತಂಡದ ನಿರ್ದೇಶಕಾರಿಗಿ ಕಾರ್ಯ ನಿರ್ವಹಿಸಿದ್ದ ಅವರು, ಬಳಿಕ ಹಂಗಾಮಿ ಕೋಚ್ ಆಗಿ, ಇದೀಗ ಪೂರ್ಣ ಪ್ರಮಾಣದ ಕೋಚ್ ಆಗಿದ್ದಾರೆ. ಪ್ರಸ್ತುತ ಅವರ ಕೋಚ್ ಅವಧಿ ಮುಗಿದಿದೆಯಾದರೂ, ವೆಸ್ಟ್ ಇಂಡೀಸ್ ಪ್ರವಾಸದ ನಿಮಿತ್ತ ಅವರ ಕೋಚ್ ಅವಧಿಯನ್ನು ವಿಸ್ತರಿಸಲಾಗಿದೆ. ರವಿಶಾಸ್ತ್ರಿ ಅವರ ಅಡಿಯಲ್ಲಿ ಆಟಗಾರರು ಸಾಕಷ್ಟು ಸರಣಿಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಅವರ ಕೋಚಿಂಗ್ ಮಾದರಿಗೆ ಆಟಗಾರರು ಒಗ್ಗಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ವರೆಗೂ ಅವರೇ ಕೋಚ್ ಆಗಿ ಮುಂದುವರೆಯುವ ಸಾಧ್ಯತೆ ಇದೆ.

Intro:Body:

ಟೀಂ ಇಂಡಿಯಾ ಕೋಚ್​ ಆಗಿ ರವಿಶಾಸ್ತ್ರಿ ಬಹುತೇಕ ಖಚಿತ... ಹೆಸರಿಗೆ ಮಾತ್ರ ಸಂದರ್ಶನ!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.