ETV Bharat / sports

ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್​ಗೆ 3 ವರ್ಷ ನಿಷೇಧ ಹೇರಿದ ಪಿಸಿಬಿ

ಭ್ರಷ್ಟಾಚಾರ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉಮರ್‌ ಅಕ್ಮಲ್​ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಮೂರು ವರ್ಷಗಳ ಕಾಲ ನಿಷೇಧ ಹೇರಿರುವುದಾಗಿ ಆದೇಶಿಸಿದೆ.

author img

By

Published : Apr 27, 2020, 7:42 PM IST

PCB hands Umar Akmal three-year ban
ಉಮರ್ ಅಕ್ಮಲ್ 3 ವರ್ಷ ಬ್ಯಾನ್

ಕರಾಚಿ: ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಉಲ್ಲಂಘನೆ ಆರೋಪದ ಮೇಲೆ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟ್ಸಮನ್‌ ಉಮರ್‌ ಅಕ್ಮಲ್‌ ಮೇಲೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಮೂರು ವರ್ಷಗಳ ನಿಷೇಧ ಹೇರಿದೆ.

  • Umar Akmal handed three-year ban from all cricket by Chairman of the Disciplinary Panel Mr Justice (retired) Fazal-e-Miran Chauhan.

    — PCB Media (@TheRealPCBMedia) April 27, 2020 " class="align-text-top noRightClick twitterSection" data=" ">

ಭ್ರಷ್ಟಾಚಾರ ನೀತಿ ಸಂಹಿತೆ ಉಲ್ಲಂಘಿಸಿದ ಎರಡು ಪ್ರಕರಣಗಳಲ್ಲಿ ಅವರು ಆರೋಪಿಯಾಗಿದ್ದರು. ಹೀಗಾಗಿ, ಎರಡು ತಿಂಗಳ ಹಿಂದೆ ಉಮರ್‌ ಅಕ್ಮಲ್ ವಿರುದ್ಧ ತನಿಖೆ ಆರಂಭಿಸಲಾಗಿತ್ತು. 'ನಿವೃತ್ತ ನ್ಯಾಯಮೂರ್ತಿ ಫಜಲ್‌ ಇ ಮಿರಾನ್ ನೇತೃತ್ವದ ಶಿಸ್ತು ಸಮಿತಿಯು ಉಮರ್‌ ಅಕ್ಮಲ್​ಗೆ‌ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಮೂರು ವರ್ಷ ನಿಷೇಧ ಹೇರಿದೆ' ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಟ್ವೀಟ್‌ ಮೂಲಕ ತಿಳಿಸಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್‌ ಕೀಪರ್‌ ಕಮ್ರಾನ್‌ ಅಕ್ಮಲ್‌ ಅವರ ಸಹೋದರ ಉಮರ್‌, 16 ಟೆಸ್ಟ್‌, 121 ಏಕದಿನ ಹಾಗೂ 84 ಟಿ20 ಪಂದ್ಯಗಳನ್ನು ಆಡಿದ್ದಾರೆ. ಲಾಹೋರ್‌ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಪರೀಕ್ಷೆಯ ವೇಳೆ ತರಬೇತುದಾರನ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅಕ್ಮಲ್ ಫೆಬ್ರವರಿಯಲ್ಲಿ ನಿಷೇಧದಿಂದ ಪಾರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.