ETV Bharat / sports

ಮಹಿಳಾ ಟಿ-20 ವಿಶ್ವಕಪ್​: ವೆಸ್ಟ್​ ಇಂಡೀಸ್​ಗೆ ಶಾಕ್​ ಕೊಟ್ಟ ಪಾಕಿಸ್ತಾನ ವನಿತೆಯರು

author img

By

Published : Feb 26, 2020, 6:51 PM IST

ಟಿ-20 ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲೇ ಬಲಿಷ್ಠ ವೆಸ್ಟ್​ ಇಂಡೀಸ್​ ಮಹಿಳಾ ತಂಡದ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ಮಹಿಳೆಯರು ಶುಭಾರಂಭ ಮಾಡಿದ್ದಾರೆ.

women T20 World Cup
ವೆಸ್ಟ್​ ಇಂಡೀಸ್​ - ಪಾಕಿಸ್ತಾನ

ಕ್ಯಾನ್ಬೆರಾ: ಮಹಿಳಾ ಟಿ-20 ವಿಶ್ವಕಪ್​ನಲ್ಲಿ ಬಲಿಷ್ಠ ತಂಡವಾದ ವೆಸ್ಟ್​ ಇಂಡೀಸ್​ ವಿರುದ್ಧ ಪಾಕಿಸ್ತಾನ ತಂಡ 8 ವಿಕೆಟ್​ಗಳ ಭರ್ಜರಿ ಜಯಗಳಿಸಿ ಶುಭಾರಂಭ ಮಾಡಿದೆ.

ಕ್ಯಾನ್ಬೆರಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ವಿಂಡೀಸ್​ ಮಹಿಳೆಯರು 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 124 ರನ್​ಗಳಿಸಿದರು. ನಾಯಕಿ ಸ್ಟೆಫನಿ ಟೇಲರ್​ 43, ವಿಕೆಟ್​ ಕೀಪರ್​ ಶೆಮೈನ್​ ಕ್ಯಾಂಪ್​ಬೆಲ್ 36 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗ ಎರಡು ಸಿಕ್ಸರ್​ ನೆರವಿನಿಂದ 43 ರನ್​ಗಳಿಸಿ ತಂಡದ ಮೊತ್ತ 100 ರ ಗಡಿದಾಟಲು ನೆರವಾದರು.

ವೆಸ್ಟ್​ ಇಂಡೀಸ್​ - ಪಾಕಿಸ್ತಾನ ಪಂದ್ಯದ ಹೈಲೈಟ್ಸ್​

ಇನ್ನು ಮೊದಲ ಪಂದ್ಯದಲ್ಲೇ ಉತ್ತಮ ಬೌಲಿಂಗ್​ ದಾಳಿ ನಡೆಸಿದ ಪಾಕಿಸ್ತಾನದ ದಿಯಾನ ಬೇಗ್​ 2, ಐಮನ್ ​ಅನ್ವರ್​ 2, ನಿಡಾ ದಾರ್​ 2 ಹಾಗೂ ಅನಮ್​ ಅಮಿನ್ ಒಂದು ವಿಕೆಟ್​ ಪಡೆದು ವಿಂಡೀಸ್​ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

125 ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಆರಂಭಿಕರಾದ ಮುನೀಬಾ ಅಲಿ(25), ಜವೇರಿಯಾ ಖಾನ್​(35), ನಾಯಕಿ ಬಿಸ್ಮಾ ಮರೂಫ್ ಔಟಾಗದೇ​ 38 ಹಾಗೂ ನಿಡಾ ದಾರ್ ಔಟಾಗದೆ​ 18 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿದಾಟಿಸಿದರು.

ಈ ಗೆಲುವಿನ ಮೂಲಕ ಪಾಕಿಸ್ತಾನ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. 35 ರನ್​ಗಳಿಸಿದ ಜವೇರಿಯಾ ಖಾನ್​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.