ETV Bharat / sports

ಕ್ರಿಕೆಟ್​ನ ಮೂರು ಫಾರ್ಮೆಟ್​ನಲ್ಲಿ 100 ಪಂದ್ಯವಾಡಿದ ಟೇಲರ್... ವಿಶ್ವ ಮೊದಲ ಆಟಗಾರ ಎಂಬ ಹೆಗ್ಗಳಿಕೆ

author img

By

Published : Feb 21, 2020, 9:26 AM IST

ನ್ಯೂಜಿಲ್ಯಾಂಡ್​ ತಂಡದ ಅನುಭವಿ ಆಟಗಾರ ರಾಸ್ ಟೇಲರ್ ಕ್ರಿಕೆಟ್​​ನ ಮೂರು ಫಾರ್ಮೆಟ್​​ಗಳಲ್ಲಿ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Ross Taylor becomes first player to achieve this rare feat,ಮೂರು ಫಾರ್ಮೆಟ್​ನಲ್ಲಿ 100 ಪಂದ್ಯವಾಡಿದ ಟೇಲರ್
ಮೂರು ಫಾರ್ಮೆಟ್​ನಲ್ಲಿ 100 ಪಂದ್ಯವಾಡಿದ ಟೇಲರ್

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್​ ತಂಡದ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಕ್ರಿಕೆಟ್​​ನ ಮೂರು ಫಾರ್ಮೆಟ್​ನಲ್ಲಿ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೇಸಿನ್ ರಿಸರ್ವ್‌ನಲ್ಲಿ ಇಂದಿನಿಂದ ಪ್ರಾರಂಭವಾದ ಭಾರತದ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಮೈದಾನ ಕ್ಕಿಳಿದ ಅವರು ಇಂತಾದ್ದೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ-20 ಕ್ರಿಕೆಟ್‌ನ 100ನೇ ಪಂದ್ಯವನ್ನೂ ಭಾರತದ ವಿರುದ್ಧವೇ ಆಡಿದ್ದರು.

ಟೇಲರ್ ಈಗಾಗಲೇ ನ್ಯೂಜಿಲ್ಯಾಂಡ್​ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 7,175 ಮತ್ತು 8,565 ರನ್ ಗಳಿಸಿದ್ದಾರೆ. 35 ವರ್ಷದ ರಾಸ್​ ಟೇಲರ್​ 45 ಬ್ಯಾಟಿಂಗ್ ಸರಾಸರಿ ಹೊಂದಿದ್ದು, ಟೆಸ್ಟ್​ ಕ್ರಿಕೆಟ್​​ನಲ್ಲಿ 19 ಶತಕ ಸಿಡಿಸಿದ್ದಾರೆ.

ನಾನಿನ್ನು ರನ್​ ಗಳಿಸುವ ದಾಹವನ್ನ ಹೊಂದಿದ್ದು, ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲೆ. ಈ ಬಗ್ಗೆ ನನಗೆ ಸಂತೋಷವಿದೆ ಎಂದು ಟೆಸ್ಟ್​ ಪಂದ್ಯ ಪ್ರಾರಂಭಕ್ಕೂ ಮುನ್ನ ರಾಸ್​ ಟೇಲರ್​ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.