ETV Bharat / sports

ಸ್ಪಾಟ್​ ಫಿಕ್ಸಿಂಗ್​​ನಲ್ಲಿ ಭಾಗಿ... ಪಾಕ್​ ಕ್ರಿಕೆಟರ್​ಗೆ 17 ತಿಂಗಳ ಜೈಲುಶಿಕ್ಷೆ! - ಸ್ಪಾಟ್​ ಫಿಕ್ಸಿಂಗ್

ಪಾಕಿಸ್ತಾನ ಸೂಪರ್​ ಲೀಗ್​​ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಲ್ಲಿನ ಮಾಜಿ ಕ್ರಿಕೆಟರ್ ಒಬ್ಬನಿಗೆ 17 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ.

Nasir Jamshed
Nasir Jamshed
author img

By

Published : Feb 8, 2020, 8:55 AM IST

Updated : Feb 8, 2020, 11:42 AM IST

ಕರಾಚಿ: ಪಾಕಿಸ್ತಾನ ಸೂಪರ್​​​ ಲೀಗ್​​ನಲ್ಲಿ ಸ್ಪಾಟ್​ ಫಿಕ್ಸಿಂಗ್​ ನಡೆಸಿರುವ ಆರೋಪದ ಮೇಲೆ ಮಾಜಿ ಕ್ರಿಕೆಟರ್​​ ನಾಸಿರ್ ಜಮ್‌ಶೆಡ್​ಗೆ 17 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ.

ಪಾಕ್​ ಪರ ಏಕದಿನ, ಟೆಸ್ಟ್​ ಹಾಗೂ ಟಿ-20 ಕ್ರಿಕೆಟ್​​ ಸರಣಿಯಲ್ಲಿ ಭಾಗಿಯಾಗಿರುವ ಪಾಕ್​ನ ಮಾಜಿ ಬ್ಯಾಟ್ಸ್​​ಮನ್​ ನಾಸಿರ್​ ಜಮ್​ಶೆಡ್​​, ಸದ್ಯ ಇಂಗ್ಲೆಂಡ್​ನಲ್ಲಿ ವಾಸವಾಗಿದ್ದು, ಕಳೆದ ಕೆಲ ತಿಂಗಳ ಹಿಂದೆ ನಡೆದ ಪಾಕ್​ ಸೂಪರ್​​​​ ಲೀಗ್​ನಲ್ಲಿ ಸ್ಪಾಟ್​ಫಿಕ್ಸಿಂಗ್​​​ನಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇವರ ಜತೆಗೆ ಯೂಸೂಫ್​ ಅನ್ವರ್ ಹಾಗೂ ಮೊಹಮ್ಮದ್​ ಇಲಾಜ್​ ಸಹ ಬಂಧನವಾಗಿದ್ದಾರೆ. ಬ್ಯಾಟಿಂಗ್​​ ಮಾಡುತ್ತಿದ್ದ ವೇಳೆ ಎರಡು ಡಾಟ್​ ಬಾಲ್​ ಮಾಡಲು ಇವರು ಫಿಕ್ಸಿಂಗ್​ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಇದರ ಜತೆಗೆ ಶರ್ಜೀಲ್ ಖಾನ್​, ಖಲೀದ್ ಲತೀಫ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದರು. ಹಾಗೆಯೇ ಫಾಸ್ಟ್ ಬೌಲರ್ ಮೊಹಮ್ಮದ್ ಇರ್ಫಾನ್ ಮತ್ತು ಆಲ್‌ರೌಂಡರ್ ಮೊಹಮ್ಮದ್ ನವಾಜ್ ಕೂಡ ಫಿಕ್ಸಿಂಗ್‌ನಲ್ಲಿ ತಪ್ಪಿತಸ್ಥರೆಂದು ಕಂಡುಬಂದಿತ್ತು.

Last Updated : Feb 8, 2020, 11:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.