ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ನಂಬರ್ 1ಸ್ಥಾನಕ್ಕೆ ಲಗ್ಗೆ ಹಾಕಿದೆ.
ಕೊಲ್ಕತ್ತಾ ನೀಡಿದ್ದ 149ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಕೇವಲ 16.5 ಓವರ್ಗಳಲ್ಲಿ 2ವಿಕೆಟ್ ಕಳೆದುಕೊಂಡು 149ರನ್ ಗುರಿಮುಟ್ಟಿದೆ. ತಂಡದ ಪರ ಡಿಕಾಕ್ ಅಜೇಯ 78 ರನ್ ಗಳಿಸಿದರು.
-
A comprehensive win for the @mipaltan here in Abu Dhabi. They win by 8 wickets against #KKR.
— IndianPremierLeague (@IPL) October 16, 2020 " class="align-text-top noRightClick twitterSection" data="
Quinton de Kock remains unbeaten on 78.#Dream11IPL. pic.twitter.com/BDhMILSKI0
">A comprehensive win for the @mipaltan here in Abu Dhabi. They win by 8 wickets against #KKR.
— IndianPremierLeague (@IPL) October 16, 2020
Quinton de Kock remains unbeaten on 78.#Dream11IPL. pic.twitter.com/BDhMILSKI0A comprehensive win for the @mipaltan here in Abu Dhabi. They win by 8 wickets against #KKR.
— IndianPremierLeague (@IPL) October 16, 2020
Quinton de Kock remains unbeaten on 78.#Dream11IPL. pic.twitter.com/BDhMILSKI0
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ತಂಡ ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್ಗಳಲ್ಲಿ 5ವಿಕೆಟ್ ಕಳೆದುಕೊಂಡು 148ರನ್ಗಳಿಕೆ ಮಾಡ್ತು. ತಂಡದ ಪರ ಕಮ್ಮಿನ್ಸ್ ಅಜೇಯ 53ರನ್ ಹಾಗೂ ಕ್ಯಾಪ್ಟನ್ ಮಾರ್ಗನ್ 39ರನ್ಗಳಿಕೆ ಮಾಡಿದ್ರು.
ಇದರ ಬೆನ್ನತ್ತಿದ್ದ ರೋಹಿತ್ ಪಡೆ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್- ಡಿಕಾಕ್ ಜೋಡಿ ಮೊದಲ ವಿಕೆಟ್ಗೆ 94ರನ್ಗಳ ಜೊತೆಯಾಟ ಆಡಿದ್ರು. ಈ ವೇಳೆ 35ರನ್ಗಳಿಸಿದ್ದ ರೋಹಿತ್ ವಿಕೆಟ್ ಒಪ್ಪಿಸಿದರು. ಇದಾದ ಬೆನ್ನಲ್ಲೇ ಸೂರ್ಯಕುಮಾರ್ 10ರನ್ಗಳಿಕೆ ಮಾಡಿ ಪೆವಿಲಿಯನ್ ಸೇರಿಕೊಂಡರು. ಆದರೆ ಡಿಕಾಕ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಕೇವಲ 44 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಸೇರಿ ಅಜೇಯ 78ರನ್ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡದ ಹಾರ್ದಿಕ್ 11 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ನೊಂದಿಗೆ ಅಜೇಯ 21ರನ್ಗಳಿಕೆ ಮಾಡಿದರು.
ತಂಡ ಕೊನೆಯದಾಗಿ 16.5 ಓವರ್ಗಳಲ್ಲಿ 149ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿ, ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದ್ದು, 12 ಅಂಕಗಳಿಸಿದೆ. ಕೋಲ್ಕತ್ತಾ ಪರ ವರುಣ್, ಶಿವಂ ತಲಾ 1ವಿಕೆಟ್ ಕಂಬಳಿಸಿದ್ರೆ, ಉಳಿದ ಬೌಲರ್ಸ್ ಯಶಸ್ವಿಯಾಗಲಿಲ್ಲ. ಇನ್ನು ಮಾರಕ ಬೌಲಿಂಗ್ ದಾಳಿ ನಡೆಸಿದ ಮುಂಬೈ ತಂಡ ರಾಹುಲ್ ಚಹರ್ 2ವಿಕೆಟ್ ಪಡೆದರೆ, ಬೊಲ್ಟ್,ನಾಥನ್ ಹಾಗೂ ಬುಮ್ರಾ ತಲಾ 1ವಿಕೆಟ್ ಪಡೆದುಕೊಂಡರು. ದಿನೇಶ್ ಕಾರ್ತಿಕ್ ನಾಯಕತ್ವ ಜವಾಬ್ದಾರಿ ಬಿಟ್ಟುಕೊಟ್ಟಿರುವ ಕಾರಣ ಇಯಾನ್ ಮಾರ್ಗನ್ ತಂಡ ಮುನ್ನಡೆಸಿದ್ದರು.