ಮುಂಬೈ: ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತನ್ನ 84ನೇ ವಾರ್ಷಿಕ ಮಹಾಸಭೆಯನ್ನು ಡಿಸೆಂಬರ್ 18 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಸದಸ್ಯರ ಉಪಸ್ಥಿತಿಯಲ್ಲಿ ನಡೆಸಲು ಮಹಾರಾಷ್ಟ್ರ ಸರ್ಕಾರದ ಅನುಮತಿ ಕೋರಿದೆ.
ಮುಂಬೈ ದೇಶದಲ್ಲಿ ಅತಿ ಹೆಚ್ಚು ಕೋವಿಡ್ 19 ಹೊಡೆತಕ್ಕೆ ಸಿಲುಕಿದ ನಗರವಾಗಿದೆ. ಗುರುವಾರದವರೆಗಿನ ಅಂಕಿಅಂಶ ಗಮನಿಸಿದರೆ ಸುಮಾರು 9325 ಸಕ್ರಿಯ ಪ್ರಕರಣಗಳು ಮುಂಬೈನಲ್ಲಿ ವರದಿಯಾಗಿದೆ.
" ಕ್ರಿಕೆಟ್ ಬೋರ್ಡ್ನ ಅಪೆಕ್ಸ್ ಕೌನ್ಸಿಲ್ 2020ರ ಡಿಸೆಂಬರ್ 18 ರಂದು 84ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ವಾಂಖೆಡೆ ಸ್ಟೇಡಿಯಂ ಮೈದಾನದಲ್ಲಿ ನಡೆಸಲು ನಿರ್ಧರಿಸಿದೆ".
"ಸದಸ್ಯರ ದೈಹಿಕ ಉಪಸ್ಥಿತಿಯೊಂದಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಎಜಿಎಂ ನಡೆಸಲು ಅನುಮತಿ ನೀಡುವಂತೆ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ರಾಜ್ಯ ಸರ್ಕಾರದಿಂದ ಅನುಮತಿಯನ್ನು ನಿರೀಕ್ಷಿಸಲಾಗಿದೆ " ಎಂದು ಎಂಸಿಎ ಕಾರ್ಯದರ್ಶಿ ಸಂಜಯ್ ನಾಯಕ್ ಮತ್ತು ಜಂಟಿ ಕಾರ್ಯದರ್ಶಿ ಶಹಲಂ ಶೇಖ್ ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಅದಾಗ್ಯೂ, ಸರ್ಕಾರ ಸದಸ್ಯರ ದೈಹಿಕ ಉಪಸ್ಥಿತಿಯೊಂದಿಗೆ ಸಭೆ ನಡೆಸಲು ಅನುಮತಿ ನೀಡದಿದ್ದರೇ, ಸಾಮಾನ್ಯ ಸಭೆಯನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುತ್ತೇವೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.