ಬೆಂಗಳೂರು: ಲಾಕ್‌ಡೌನ್ 4.0 ಮುಂದುವರಿಸಿ ಮಾರ್ಗಸೂಚಿಗಳೊಂದಿಗೆ ಕೆಲ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ಚಟುವಟಿಕೆಗಳಿಗೆ ಅವಕಾಶ ನೀಡಬೇಕೇ ಎಂಬುದರ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಪಿಎಸ್‌ಎ) ಪದಾಧಿಕಾರಿಗಳು ಇಂದು ಚರ್ಚೆ ನಡೆಸಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಕೆಪಿಎಸ್‌ಸಿಎ ಖಜಾಂಜಿ ಮತ್ತು ವಕ್ತಾರ ವಿನಯ್ ಮೃತ್ಯಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1. ಎಲ್ಲಾ ಕ್ರಿಕೆಟಿಗರು, ತರಬೇತಿದಾರರು ಮತ್ತು ಸಹಾಯಕ ಸಿಬ್ಬಂದಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಆರಂಭಿಸುವುದಕ್ಕೂ ಮೊದಲು ಕೆಲ ದಿನಗಳ ವರೆಗೆ ಕಾದು ನೋಡುವ ನಿರ್ಧಾರ ಕೈಗೊಳ್ಳಲಾಗಿದೆ.
2. ಮುಂದಿನ ದಿನಗಳಲ್ಲಿ ನಡೆಸಲು ಸಾಧ್ಯವಿರುವಂತಹ ಗರಿಷ್ಠ ಮಟ್ಟದ ಆಯ್ಕೆಗಳು ಮತ್ತು ಗುಣಮಟ್ಟದ ಕ್ರಿಕೆಟ್ ಚಟುವಟಿಕೆಗಳಿಗಾಗಿ ಕೆಲಸ ಮಾಡುವುದು.
3. ಮೇ 31 ರ ವರೆಗೆ ಆಟಗಾರರು, ತರಬೇತಿದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಯಾವುದೇ ವೈಯಕ್ತಿಕ ಸಂವಹನದಿಂದ ನಿರುತ್ಸಾಹಗೊಳಿಸದಿರುವುದು.
4. ಆನ್‌ಲೈನ್ ಮೂಲಕ ವ್ಯವಸ್ಥಾಪಕರು, ತರಬೇತಿದಾರರು, ಆಟಗಾರರೊಂದಿಗೆ ಸಂವಹನ ನಡೆಸುವುದು. ಈಗಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಸಾಧ್ಯವಾದಷ್ಟು ಕೌಶಲ್ಯವನ್ನು ವೃದ್ಧಿಸಿಕೊಳ್ಳುವುದು.
5. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಐಸಿಸಿ, ಬಿಸಿಸಿ ಮತ್ತು ಸ್ಥಳೀಯ ಪ್ರಾಧಿಕಾರಗಳು ಮತ್ತು ಸ್ಟಾಂಡರ್ಡ್ ಆಪರೇಟಿಂಗ್ ಪ್ರಕ್ರಿಯೆ (ಎಸ್‌ಒಪಿ) ಎಲ್ಲಾ ಮಾರ್ಗಸೂಚಿಗಳನ್ನು ಪರಿಗಣಿಸುವುದು. ರಾಜ್ಯ ಕ್ರಿಕೆಟ್ ಮಂಡಳಿಯ ಎಲ್ಲಾ ಚಟುವಟಿಗಳಿಗೂ ಅನ್ವಯಿಸುವುಂತೆ ಕಟ್ಟುನಿಟ್ಟಾಗಿ ಪಾಲಿಸುವುದು.
6. ಕೆಲವು ಕಾರಣಗಳಿಂದ ನಿಷೇಧಕ್ಕೆ ಒಳಗಾಗಿರುವ/ನಿರ್ದೇಶನಗಳು ಸೇರಿದಂತೆ ಎಲ್ಲಾ ರೀತಿಯ ಕ್ರೀಡಾ ಕೇಂದ್ರಗಳನ್ನು ಮೇ 31 ರ ವರೆಗೆ ತೆರೆಯದಿರಲು ನಿರ್ಧಾರ.