ಮೈಸೂರು: ನಾಯಕ ವಿನಯ್‍ಕುಮಾರ್ ಹಾಗೂ ಕೆ ಬಿ ಪವನ್ ಅವರ 111 ರನ್‍ಗಳ ಜೊತೆಯಾಟದಿಂದ ಶಿವಮೊಗ್ಗ ಲಯನ್ಸ್ ತಂಡವನ್ನು 20 ರನ್‍ಗಳಿಂದ ಬಗ್ಗು ಬಡಿದ ಹುಬ್ಬಳ್ಳಿ ಟೈಗರ್ಸ್ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ 2ನೇ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ.
-
.@HubliTigers have won a close match here, all thanks to their bowlers. They have edged past @shivamoggalions by 20 run to qualify for the second Qualifier against Belagavi. And that's the end of the season for the Lions. #SLvHT #KPL8 #NammaKPL #KPLNoduGuru pic.twitter.com/W9n2t2eQGg
— Namma KPL (@KPLKSCA) August 29, 2019 " class="align-text-top noRightClick twitterSection" data="
">.@HubliTigers have won a close match here, all thanks to their bowlers. They have edged past @shivamoggalions by 20 run to qualify for the second Qualifier against Belagavi. And that's the end of the season for the Lions. #SLvHT #KPL8 #NammaKPL #KPLNoduGuru pic.twitter.com/W9n2t2eQGg
— Namma KPL (@KPLKSCA) August 29, 2019.@HubliTigers have won a close match here, all thanks to their bowlers. They have edged past @shivamoggalions by 20 run to qualify for the second Qualifier against Belagavi. And that's the end of the season for the Lions. #SLvHT #KPL8 #NammaKPL #KPLNoduGuru pic.twitter.com/W9n2t2eQGg
— Namma KPL (@KPLKSCA) August 29, 2019
ಮಾನಸ ಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಉತ್ತಮ ಪ್ರದರ್ಶನ ತೋರಿತು. ಶಿವಮೊಗ್ಗ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಹುಬ್ಬಳ್ಳಿ ಹುಡುಗರು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 190 ರನ್ ಪೇರಿಸಿದ್ರು. ಹುಬ್ಬಳ್ಳಿ ಟೈಗರ್ಸ್ ಪರ ಕೆ ಬಿ ಪವನ್ ಔಟಾಗದೆ 56 ರನ್, ವಿನಯ್ ಕುಮಾರ್ 55, ಮೊಹ್ಮದ್ ತಹ 41, ಪ್ರವೀಣ್ ದುಬೆ 23 ರನ್ಗಳಿಸಿದರು.
190 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಶಿವಮೊಗ್ಗ ಲಯನ್ಸ್ ತಂಡ ಆರಂಭಿಕ ಆಘಾತ ಅನುಭವಿಸಿತು. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪವನ್ ದೇಶಪಾಂಡೆ 38, ಎಂ ನದೀಶ್ 26, ನಾಯಕ ಅಭಿಮನ್ಯು ಮಿಥುನ್ 40, ಹೆಚ್ ಎಸ್ ಶರತ್ 25ರನ್ ಗಳಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಹುಬ್ಬಳ್ಳಿ ಟೈಗರ್ಸ್ ತಂಡದ ಆಟಗಾರರು ಶಿವಮೊಗ್ಗ ತಂಡವನ್ನ ಕಟ್ಟಿಹಾಕಿದರು. ಅಂತಿಮವಾಗಿ 19.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 170 ರನ್‍ಗಳಿಸಿದ ಶಿವಮೊಗ್ಗ ತಂಡ 20 ರನ್‍ಗಳಿಂದ ಸೋಲೊಪ್ಪಿಕೊಂಡಿತು.
ಈ ಮೂಲಕ ಎರಡನೇ ಕ್ವಾಲಿಫೈಯರ್ ಸುತ್ತಿಗೆ ಪ್ರವೇಶ ಪಡೆದ ಹುಬ್ಬಳ್ಳಿ ಟೈಗರ್ಸ್ ತಂಡ ಇಂದು ಬೆಳಗಾವಿ ಪ್ಯಾಂಥರ್ಸ್ ತಂಡವನ್ನ ಎದುರಿಸಲಿದೆ.