ETV Bharat / sports

ಐಸಿಸಿ ಟೆಸ್ಟ್​ ಬೌಲಿಂಗ್ ರ‍್ಯಾಂಕ್: 600 ವಿಕೆಟ್ಸ್​ ಬೆನ್ನಲ್ಲೇ ಟಾಪ್​ 10​ಗೆ ಮರಳಿದ ಜೇಮ್ಸ್​ ಆ್ಯಂಡರ್ಸನ್​

author img

By

Published : Aug 27, 2020, 1:37 PM IST

ಪಾಕಿಸ್ತಾನ​ ಸರಣಿಗೂ ಮೊದಲು ಟಾಪ್​ 10 ರಿಂದ ಹೊರಗಿದ್ದ ಆ್ಯಂಡರ್ಸನ್​ ಕೊನೆಯ ಪಂದ್ಯದಲ್ಲಿ 7 ವಿಕೆಟ್​ ಪಡೆಯುತ್ತಿದ್ದಂತೆ 6 ಸ್ಥಾನ ಏರಿಕೆ ಕಂಡು, 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಜೇಮ್ಸ್​ ಆ್ಯಂಡರ್ಸನ್​ 600 ವಿಕೆಟ್​ಗಳ ದಾಖಲೆಯ ಜೊತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 29ನೇ ಬಾರಿ 5 ವಿಕೆಟ್​ ಸಾಧನೆ ಮಾಡಿದ್ದರು.

ಜೇಮ್ಸ್​ ಆ್ಯಂಡರ್ಸನ್​
ಜೇಮ್ಸ್​ ಆ್ಯಂಡರ್ಸನ್​

ಲಂಡನ್​: ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್​ನಲ್ಲಿ 600 ವಿಕೆಟ್​ ಪಡೆದ ಮೊದಲ ಬೌಲರ್​ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದ ಇಂಗ್ಲೆಂಡ್​ ವೇಗಿ ಜೇಮ್ಸ್​ ಆ್ಯಂಡರ್ಸನ್​ ಐಸಿಸಿ ಬಿಡುಗಡೆ ಮಾಡಿದ ನೂತನ ಟೆಸ್ಟ್​ ಬೌಲಿಂಗ್​ ಱಂಕಿಂಗ್​ನಲ್ಲಿ ಟಾಪ್​ 10ಗೆ ಮರಳಿದ್ದಾರೆ.

ಪಾಕಿಸ್ತಾನ​ ಸರಣಿಗೂ ಮೊದಲು ಟಾಪ್​ 10ರಿಂದ ಹೊರಗಿದ್ದ ಆ್ಯಂಡರ್ಸನ್​ ಕೊನೆಯ ಪಂದ್ಯದಲ್ಲಿ 7 ವಿಕೆಟ್​ ಪಡೆಯುತ್ತಿದ್ದಂತೆ 6 ಸ್ಥಾನ ಏರಿಕೆ ಕಂಡಿದ್ದು 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಜೇಮ್ಸ್​ ಆ್ಯಂಡರ್ಸನ್​ 600 ವಿಕೆಟ್​ಗಳ ದಾಖಲೆಯ ಜೊತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 29ನೇ ಬಾರಿ 5 ವಿಕೆಟ್​ ಸಾಧನೆ ಮಾಡಿದ್ದರು.

ಇಂಗ್ಲೆಂಡ್​ ಪರ 10ನೇ ಗರಿಷ್ಠ ರನ್​ ದಾಖಲಿಸಿದ್ದ 22 ವರ್ಷದ ಜಾಕ್​ ಕ್ರಾಲೆ(267) ಬರೋಬ್ಬರಿ 58 ಸ್ಥಾನಗಳ ಏರಿಕೆ ಕಂಡು ವೃತ್ತಿ ಜೀವನದ ಶ್ರೇಷ್ಠ 28ನೇ ಸ್ಥಾನಕ್ಕೇರಿದ್ದಾರೆ. ಈ ಸರಣಿಯಲ್ಲಿ 320 ರನ್​ಗಳಿಸಿದ್ದರಿಂದ ಕ್ರಾಲೆ ಇಂಗ್ಲೆಂಡ್​ನ 4ನೇ ಬೆಸ್ಟ್​ ಱಂಕಿಂಗ್​ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

152 ರನ್ ​ಗಳಿಸಿದ್ದ ಜೋಸ್​ ಬಟ್ಲರ್ ಒಂದು ಸ್ಥಾನ ಏರಿಕೆ ಕಂಡು 22ರಿಂದ 21 ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಅಲ್ಲದೆ ಅವರು ವೃತ್ತಿ ಜೀವನದಲ್ಲೇ ಗರಿಷ್ಠ 637 ರೇಟಿಂಗ್​ ಪಾಯಿಂಟ್​ ಪಡೆದಿದ್ದಾರೆ.

ಕೊನೆಯ ಪಂದ್ಯದಲ್ಲಿ 141 ರನ್ ​ಗಳಿಸಿದ ಪಾಕಿಸ್ತಾನ ನಾಯಕ ಅಜರ್​ ಅಲಿ 11 ಸ್ಥಾನ ಏರಿಕೆ ಕಂಡಿದ್ದು, 23ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.