ETV Bharat / sports

'ಕಿವಿ' ಹಿಂಡಿದ ರಾಹುಲ್​​, ಅಯ್ಯರ್,​ ಕೊಹ್ಲಿ: ಮೊದಲ ಚುಟುಕು ಕದನದಲ್ಲಿ ಭಾರತಕ್ಕೆ ವಿಜಯ - India won by 6 wkts

ನ್ಯೂಜಿಲ್ಯಾಂಡ್​ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ.

India won by 6 wkts against New Zealand
India won by 6 wkts against New Zealand
author img

By

Published : Jan 24, 2020, 4:40 PM IST

ಆಕ್ಲೆಂಡ್​ (ನ್ಯೂಜಿಲ್ಯಾಂಡ್​​): 59, 51, 54, 56, 58*...ಇವು ಇಂದು ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಎರಡೂ ತಂಡಗಳಿಂದ ಮೂಡಿಬಂದ ಅರ್ಧ ಶತಕಗಳು! ಈ ಅರ್ಧಶತಕಗಳಲ್ಲಿ ಕಿವೀಸ್​ ಮೇಲುಗೈ ಸಾಧಿಸಿದ್ದರೂ ಗೆಲುವು ಮಾತ್ರ ಭಾರತದ್ದಾಯಿತು. ಅಲ್ಲದೆ, ಅತಿ ಹೆಚ್ಚು (4) ಬಾರಿ 200 ರನ್​​ಗೂ ಹೆಚ್ಚು​ ಟಾರ್ಗೆಟ್​​ ಮಾಡಿ ಗೆದ್ದ ದಾಖಲೆಗೂ ಪಾತ್ರವಾಯಿತು. ಆಸ್ಟ್ರೇಲಿಯಾ (2) ಎರಡನೇ ಸ್ಥಾನದಲ್ಲಿದೆ.

ಈಡನ್​ ಪಾರ್ಕ್​​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಭಾರತ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್​ ಮಾಡಿದ ಕಿವೀಸ್​ ತಂಡಕ್ಕೆ ಭರ್ಜರಿ ಆರಂಭ ದೊರಕಿತು. ಆರಂಭಿಕ ಆಟಗಾರರಾದ ಮಾರ್ಟಿನ್ ಗಪ್ಟಿಲ್ (30) ಮತ್ತು ಕಾಲಿನ್ ಮನ್ರೋ (59) ಭದ್ರ ಬುನಾದಿ ಹಾಕಿದರು.

ಟೀಂ ಇಂಡಿಯಾ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ಮೊದಲ ವಿಕೆಟ್​ಗೆ 80 ರನ್​ ಕಲೆಹಾಕಿತು. ಆರಂಭಿಕರಿಬ್ಬರೂ ಔಟಾದ ಬಳಿಕ ಕ್ರಿಸ್​ಗೆ ಬಂದ ನಾಯಕ ಕೇನ್​ ವಿಲಿಯಮ್ಸನ್​​​ ಕೇವಲ 26 ಎಸೆತಗಳಲ್ಲಿ 10ನೇ ಅರ್ಧಶತಕ (51) ಹಾಗೂ ರಾಸ್​ ಟೇಲರ್​ 6ನೇ ಅರ್ಧಶತಕ (54*) ಪೂರೈಸಿದರು.

ಒಟ್ಟಾರೆ ಕಿವೀಸ್​​ 20 ಓವರ್​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 203 ರನ್​ ಗಳಿಸಿತು. ಭಾರತದ ಪರ ಬೂಮ್ರಾ, ಶಾರ್ದೂಲ್​ ಠಾಕೂರ್​, ಚಹಾಲ್​, ಶಿವಂ ದುಬೆ, ಜಡೇಜಾ ತಲಾ 1 ವಿಕೆಟ್​ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಬೃಹತ್​ ಮೊತ್ತವನ್ನು ಬೆನ್ನತ್ತಿದ್ದ ಭಾರತ ಆರಂಭದಲ್ಲೇ ರೋಹಿತ್​ (7) ಔಟಾಗಿ ತಂಡಕ್ಕೆ ಆಘಾತ ನೀಡಿದರು. ನಂತರ ರಾಹುಲ್ (56)​​ ಜೊತೆಗೆ ನಾಯಕ ವಿರಾಟ್​ ಕೊಹ್ಲಿ (45) ಭರ್ಜರಿ ಜೊತೆಯಾಟವಾಡಿದರು. ಕಿವೀಸ್​ ಬೌಲರ್​ಗಳನ್ನು ಬೆಂಡೆತ್ತಿದ ಈ ಜೋಡಿ 2ನೇ ವಿಕೆಟ್​ಗೆ 99 ರನ್​ ಪೇರಿಸಿದರು.

ರಾಹುಲ್, ಇಶ್​ ಸೋಧಿ ಬಲೆಗೆ ಬೀಳುತ್ತಿದ್ದಂತೆ ಕ್ರೀಸಿಗೆ ಬಂದ ಶ್ರೇಯಸ್​​ ಅಯ್ಯರ್​ (58*) ಭರ್ಜರಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದರು. ಅರ್ಧಶತಕಕ್ಕೆ 5 ರನ್ ಬೇಕಿದ್ದಾಗ ನಾಯಕ ಕೊಹ್ಲಿ, ಟಿಕ್ಕರ್​ ಬೌಲರ್​​ನಲ್ಲಿ ಗಪ್ಟಿಲ್​ಗೆ ಕ್ಯಾಚಿತ್ತರು. ಕನ್ನಡಿಗ ಮನೀಷ್​ ಪಾಂಡೆ (14*) ಹಾಗೂ ಅಯ್ಯರ್​ ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಹೀಗೆ ಮೊದಲ ಚುಟುಕು ಸಮರದಲ್ಲಿ ಭಾರತ 6 ವಿಕೆಟ್​ಗಳ ಜಯ ಸಾಧಿಸಿತು.

ನ್ಯೂಜಿಲ್ಯಾಂಡ್​ ಪರ ಸ್ಯಾಂಟ್ನರ್​, ಟಿಕ್ಕರ್​ ತಲಾ ಒಂದು ವಿಕೆಟ್​, ಇಶ್​ ಸೋಧಿ 2 ವಿಕೆಟ್​ ಪಡೆದುಕೊಂಡರು. ಶ್ರೇಯಸ್​ ಅಯ್ಯರ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಒಟ್ಟು 5 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.