ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಬಾಂಗ್ಲಾ ದೇಶಕ್ಕೆ 149ರನ್ಗಳ ಗುರಿ ನೀಡಿದೆ.
-
Innings Break!
— BCCI (@BCCI) November 3, 2019 " class="align-text-top noRightClick twitterSection" data="
Sweet little cameos by the spin bowling all-rounders, Krunal Pandya and Washington Sundar propel #TeamIndia's total to 148/6.
Updates - https://t.co/7oEQDn0RdS #INDvBAN pic.twitter.com/fNNjJBmw5N
">Innings Break!
— BCCI (@BCCI) November 3, 2019
Sweet little cameos by the spin bowling all-rounders, Krunal Pandya and Washington Sundar propel #TeamIndia's total to 148/6.
Updates - https://t.co/7oEQDn0RdS #INDvBAN pic.twitter.com/fNNjJBmw5NInnings Break!
— BCCI (@BCCI) November 3, 2019
Sweet little cameos by the spin bowling all-rounders, Krunal Pandya and Washington Sundar propel #TeamIndia's total to 148/6.
Updates - https://t.co/7oEQDn0RdS #INDvBAN pic.twitter.com/fNNjJBmw5N
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಯ್ತು ನಾಯಕ ರೋಹಿತ್ ಶರ್ಮಾ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಕೆ.ಎಲ್.ರಾಹುಲ್ ಕೂಡ 14 ರನ್ಗಳಿಸಿ ಅನಿಮುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದ್ರು.
ನಂತರ ಬಂದ ಶ್ರೇಯಸ್ ಐಯ್ಯರ್ ಭರ್ಜರಿ ಎರಡು ಸಿಕ್ಸರ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರು. ಆದ್ರೆ 22 ರನ್ ಗಳಿಸಿರುವಾಗ ಅನಿಮುಲ್ ಇಸ್ಲಾಂ ಎಸೆತದಲ್ಲಿ ಮೊಹಮ್ಮದ್ ನೈಮ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಬಿದ್ದರೂ ತಾಳ್ಮೆಯ ಆಟವಾಡಿದ ಶಿಖರ್ ಧವನ್ 41 ರನ್ಗಳಿಸಿ ಇಲ್ಲದ ರನ್ ಕದಿಯಲು ಹೋಗಿ ರನ್ಔಟ್ಗೆ ಬಲಿಯಾದ್ರು. ರಿಷಭ್ ಪಂತ್ ಕೂಡ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ 27 ರನ್ ಗಳಿಸಿದ್ರು.
ಕೊನೆಯ ಓವರ್ನಲ್ಲಿ ಅಬ್ಬರಿಸಿದ ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಭಾರತದ ಮೊತ್ತವನ್ನ ಹೆಚ್ಚಿಸಿದರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿದೆ. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡ 8 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕೊಳಗಾಗಿದೆ.