ಪುಣೆ: ಅಂತಾರಾಷ್ಟ್ರೀಯ ಕ್ರಿಕೆಟ್ನ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದು ಅನುಭವಿ ಆಟಗಾರನಾಗಿ ನನಗೆ ತಿಳಿದಿದೆ ಎಂದು ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಹೇಳಿದರು. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ 98 ರನ್ ಗಳಿಸುವ ಮೂಲಕ ಭಾರತ ತಂಡದ ಗೆಲುವಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ.
"ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒತ್ತಡ ಯಾವಾಗಲೂ ಇರುತ್ತದೆ. ಆದರೆ, ಒಬ್ಬ ಅನುಭವಿ ಆಟಗಾರನಾಗಿ ಆ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂದು ನನಗೆ ತಿಳಿದಿದೆ. ನಾನು ಹೇಳಿದಂತೆ, ನಾನು ಅನುಭವಿ ಆಟಗಾರ. ಹಾಗಾಗಿ ಯಾವಾಗ ಹೇಗೆ ಆಡಬೇಕೆಂದು ನನಗೆ ತಿಳಿದಿದೆ. ಬ್ಯಾಟಿಂಗ್ ಘಟಕದಲ್ಲಿ ಬಹಳ ಚೆನ್ನಾಗಿ ಸಂವಹನ ನಡೆಸುತ್ತೇವೆ. ಅದು ಕೆಲಸ ಮಾಡಿದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನು ಓದಿ: ಧವನ್, ಪ್ರಸಿದ್ ಕೃಷ್ಣ ಮಿಂಚು.. ಇಂಗ್ಲೆಂಡ್ ವಿರುದ್ಧ 66 ರನ್ಗಳಿಂದ ಜಯ ಸಾಧಿಸಿದ ಭಾರತ!
"ನಾನು ನನ್ನ ಪ್ರಕ್ರಿಯೆ, ಫಿಟ್‌ನೆಸ್, ಕೌಶಲ್ಯ, ಜಿಮ್ - ಕೆಲಸದ ಮೇಲೆ ಗಮನ ಹರಿಸುತ್ತಿದ್ದೆ. ನಾನು ಯಾವಾಗಲೂ ಸಕಾರಾತ್ಮಕ ಮಾನಸಿಕ ಜಾಗದಲ್ಲಿಯೇ ಇರುತ್ತೇನೆ. ಪ್ರತಿಯೊಂದು ಸನ್ನಿವೇಶದಿಂದಲೂ ಧನಾತ್ಮಕತೆ ನೋಡುತ್ತೇನೆ. ಅದನ್ನೇ ನಾನು ಮಾಡುತ್ತಿದ್ದೇನೆ. ನನ್ನ ಬ್ಯಾಟಿಂಗ್ ಬಗ್ಗೆ ನನಗೆ ವಿಶ್ವಾಸವಿದೆ "ಎಂದು ಹೇಳಿದರು.