ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ವ್ಯಕ್ತಿ ಎಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿರುವ ಗಂಗೂಲಿ, ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನ ಮುಖ್ಯ ವ್ಯಕ್ತಿ. ನಾನು ಅಧ್ಯಕ್ಷನಾಗಿರುವುದು ಕೊಹ್ಲಿ ಕೆಲಸವನ್ನ ಸುಲಭಗೊಳಿಸಲು, ಕಷ್ಟ ನೀಡಲು ಅಲ್ಲ ಎಂದಿದ್ದಾರೆ.
ಕೊಹ್ಲಿ ಮುಖ್ಯವಾದ ವ್ಯಕ್ತಿ ನಾನು ಅವರೊಂದಿಗೆ ನಾಳೆ ಮಾತನಾಡುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ನಾನು ಬದ್ಧನಾಗಿದ್ದೇನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತಿದೆ. ಈ ತಂಡ ವಿಶ್ವದಲ್ಲೇ ಬೆಸ್ಟ್ ಟೀಂ ಆಗಬೇಕೆಂಬುದು ನನ್ನ ಆಸೆ ಎಂದಿದ್ದಾರೆ.
ನಾವು ಭಾರತೀಯ ಕ್ರಿಕೆಟ್ನ ಭವಿಷ್ಯದ ಕುರಿತು ಯೋಚನೆ ಮಾಡಬೇಕಾಗುತ್ತದೆ. ಈ ದುಷ್ಠಿಯಲ್ಲಿ ವಿರಾಟ್ ಮುಖ್ಯ ವ್ಯಕ್ತಿಯಾಗಿದ್ದಾರೆ, ಅವರು ಹೇಳುವುದನ್ನ ಕೇಳುತ್ತೇವೆ. ಅವರಿಗೆ ನಮ್ಮ ಬೆಂಬಲ ಇದ್ದೇ ಇದೆ. ನಾನು ಕೂಡ ನಾಯಕನಾಗಿದ್ದರಿಂದ ನನಗೆ ಅರ್ಥವಾಗುತ್ತದೆ. ಪರಸ್ಪರ ಗೌರವದಿಂದ ವಿಷಯಗಳನ್ನ ಚರ್ಚೆ ನಡೆಸಿ ತಂಡಕ್ಕೆ ಒಳಿತಾಗುವ ನಿರ್ಧಾರವನ್ನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.