ಮುಂಬೈ : ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಪದಾರ್ಪಣೆ ಪಂದ್ಯದ ನೆನಪನ್ನು ಬುಧವಾರ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ದಾದಾ, "ನೆನೆಪು.. 1996ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಾನು ಟೆಸ್ಟ್ ಪದಾರ್ಪಣೆ ಮಾಡುವ ಹಿಂದಿನ ದಿನ ತರಬೇತಿ ನಡೆಸುತ್ತಿದ್ದ ಕ್ಷಣ" ಎಂದು ಕ್ಯಾಪ್ಷನ್ನೀಡಿದ್ದಾರೆ.
- " class="align-text-top noRightClick twitterSection" data="
">
ಎಡಗೈ ಬ್ಯಾಟ್ಸ್ಮನ್ ಸೌರವ್ ಗಂಗೂಲಿ ಜೂನ್ 20, 1996ರಂದು ಟೆಸ್ಟ್ ಕ್ರಿಕೆಟ್ಗೆ ಲಾರ್ಡ್ಸ್ ಮೈದಾನದಲ್ಲಿ ಪದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ದಾದಾ ಆ ಪಂದ್ಯದಲ್ಲಿ 301 ಎಸೆತಗಳಲ್ಲಿ 20 ಬೌಂಡರಿಗಳ ಸಹಾಯದಿಂದ 131 ರನ್ ಸಿಡಿಸಿದ್ದರು.
ಬಂಗಾಳ ಮಹಾರಾಜ ಸಿಡಿಸಿದ ಶತಕದ ನೆರವಿನಿಂದ ಭಾರತ ತಂಡ 429 ರನ್ಗಳಿಸಿ ಇಂಗ್ಲೆಂಡ್ ವಿರುದ್ಧ ಮುನ್ನಡೆ ಸಾಧಿಸಲು ನೆರವಾಗಿದ್ದರು. ಆದರೆ, ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ನಂತರದ ಕೆಲವು ವರ್ಷಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಗಂಗೂಲಿ, ಯಶಸ್ವಿ ನಾಯಕ ಎನಿಸಿಕೊಂಡರು. ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಸರಣಿ ಜಯಿಸಿ ಸಾಧನೆ ಮಾಡಿದ್ದರು. 2003ರ ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಗಂಗೂಲಿ ಮಹತ್ವದ ಪಾತ್ರವಹಿಸಿದ್ದರು. ಭಾರತ ತಂಡದ ಪರ 113 ಟೆಸ್ಟ್ ಹಾಗೂ 311 ಏಕದಿನ ಪಂದ್ಯಗಳನ್ನಾಡಿದ್ದರು. 18,575 ರನ್ಗಳಿಸಿದ್ದಾರೆ ಬಂಗಾಳ ಟೈಗರ್. 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.