ಮೌಂಟ್ ಮಾಂಗನುಯ್: ಕೊನೆಯ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯನ್ನು 2-0ಯಲ್ಲಿ ನ್ಯೂಜಿಲ್ಯಾಂಡ್ ತಂಡ ವಶಪಡಿಸಿಕೊಂಡಿದೆ.
ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 2.2 ಓವರ್ಗಳಲ್ಲಿ 25ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಮಳೆ ಬಂದು ಪಂದ್ಯ ಅರ್ಧಕ್ಕೆ ನಿಂತಿತ್ತು. ಮತ್ತೆ ಪಂದ್ಯಕ್ಕೆ ಮಳೆ ಅವಕಾಶ ನೀಡದ ಕಾರಣ ಈ ಪಂದ್ಯವನ್ನು ರದ್ದುಗೊಳಿಸಲಾಯಿತು.
-
Play abandoned at the Bay Oval!
— ICC (@ICC) November 30, 2020 " class="align-text-top noRightClick twitterSection" data="
The third #NZvWI T20I has been called off due to persistent rain 🌧️🌧️
New Zealand take the series 2-0. pic.twitter.com/pyuYg4gL01
">Play abandoned at the Bay Oval!
— ICC (@ICC) November 30, 2020
The third #NZvWI T20I has been called off due to persistent rain 🌧️🌧️
New Zealand take the series 2-0. pic.twitter.com/pyuYg4gL01Play abandoned at the Bay Oval!
— ICC (@ICC) November 30, 2020
The third #NZvWI T20I has been called off due to persistent rain 🌧️🌧️
New Zealand take the series 2-0. pic.twitter.com/pyuYg4gL01
ಸೌಥಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಮಿಚೆಲ್ ಸ್ಯಾಂಟ್ನರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಎರಡನೇ ಓವರ್ನಲ್ಲಿ ಲೂಕಿ ಫರ್ಗ್ಯುಸನ್ 11 ರನ್ ಗಳಿಸಿದ್ದ ಬ್ರೆಂಡನ್ ಕಿಂಗ್ ಅವರ ವಿಕೆಟ್ ಪಡೆದು ಕಿವೀಸ್ಗೆ ಮುನ್ನಡೆ ದೊರೆಕಿಸಿಕೊಟ್ಟಿದ್ದರು.
ಮೊನ್ನೆ ನಡೆದಿದ್ದ ಮೊದಲ ಪಂದ್ಯಗಲ್ಲಿ ನ್ಯೂಜಿಲ್ಯಾಂಡ್ ತಂಡ 5 ವಿಕೆಟ್ಗಳ ಜಯ ಮತ್ತು 2ನೇ ಪಂದ್ಯ ಪಂದ್ಯದಲ್ಲಿ 72 ರನ್ಗಳ ಅಂತರದಲ್ಲಿ ಜಯ ಸಾಧಿಸಿತ್ತು.
ಇನ್ನು ಎರಡೂ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಮೊದಲ ಟೆಸ್ಟ್ ಹ್ಯಾಮಿಲ್ಟನ್ನಲ್ಲಿ ಗುರುವಾರದಿಂದ ಆರಂಭವಾಗಲಿದೆ.