ETV Bharat / sports

ಕ್ಯಾಪ್ಟನ್ ಆಗಿದ್ದಿದ್ದರೆ ಆತನನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸ್ತಿದ್ದೆ: ಅಕ್ರಮ್ ಹೇಳಿದ್ದು ಯಾರ ಬಗ್ಗೆ? - ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​

ಮುಂದಿನ ಪಂದ್ಯದಲ್ಲಿ ಚೆಂಡು ಹೆಚ್ಚು ತಿರುವು ಪಡೆದುಕೊಳ್ಳುವುದಿಲ್ಲ. ಹಾಗಾಗಿ, ತಂಡದಲ್ಲಿ ಒಬ್ಬನೇ ಸ್ಪಿನ್ನರ್‌ ಇದ್ದರೆ ಸಾಕು. ಒಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್​ನೊಂದಿಗೆ ಆಡಿದರೆ ಇನ್ನೂ ಉತ್ತಮ ಎಂದು ವಾಸೀಂ ಅಕ್ರಮ್‌ ಪಾಕ್ ತಂಡಕ್ಕೆ ಸಲಹೆ ನೀಡಿದ್ದಾರೆ.

ಫವಾದ್​ ಆಲಮ್
ಫವಾದ್​ ಆಲಮ್
author img

By

Published : Aug 11, 2020, 4:32 PM IST

ಸೌತಾಂಪ್ಟನ್​: ಇಂಗ್ಲೆಂಡ್​ ವಿರುದ್ಧದ ಸರಣಿಗೆ 11 ವರ್ಷಗಳ ಸುದೀರ್ಘ ಕಾಲದ ನಂತರ ತಂಡಕ್ಕೆ ಆಯ್ಕೆಯಾಗಿರುವ ಫವಾದ್​ ಆಲಮ್​ ಅವರನ್ನು ಸೌತಾಂಪ್ಟನ್​ ಟೆಸ್ಟ್​ಗೆ 11ರ ಬಳಗದಲ್ಲಿ ಆಡಿಸಿದರೆ ಪಾಕಿಸ್ತಾನ ತಂಡಕ್ಕೆ ಅನುಕೂಲ ಎಂದು ಮಾಜಿ ನಾಯಕ ವಾಸೀಂ​ ಅಕ್ರಮ್​ ಅಭಿಪ್ರಾಯಪಟ್ಟಿದ್ದಾರೆ.

ಮ್ಯಾಂಚೆಸ್ಟರ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 107 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಪಡೆದರೂ ಇಂಗ್ಲೆಂಡ್​ ವಿರುದ್ಧ 3 ವಿಕೆಟ್​ಗಳ ಸೋಲು ಕಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತ್ತು. ಆದ್ದರಿಂದ ಒಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್​ ತಂಡದಲ್ಲಿರಬೇಕು. 11 ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿರುವ ಫವಾದ್​ ಆಲಮ್​ಗೆ ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ.

ವಾಸೀಮ್​ ಅಕ್ರಮ್​
ವಾಸೀಂ​ ಅಕ್ರಮ್​

'ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಅಗತ್ಯವಿದೆ. ಫವಾದ್​ ಆಲಮ್​ ಅದಕ್ಕೆ ಉತ್ತಮ ಆಯ್ಕೆ. ಅವರು ಎಡಗೈ ಬ್ಯಾಟ್ಸ್​ಮನ್​ ಆಗಿರುವುದರಿಂದ ಎಡ-ಬಲ ಸಂಯೋಜನೆ ಹೊಂದಬಹುದು. ಆಲಮ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 56 ಸರಾಸರಿ ಹೊಂದಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಟೆಸ್ಟ್​ನ ಪದಾರ್ಪಣೆ ಪಂದ್ಯದಲ್ಲೇ ಇವರು ಶತಕ ಸಿಡಿಸಿದ್ದರು. ಹಾಗಾಗಿ, ತಂಡ ಒಂದು ಅವಕಾಶ ಮಾಡಿಕೊಡಬೇಕು. ನಾನೇನಾದರೂ ನಾಯಕನಾಗಿದ್ದರೆ ತಂಡದ ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದೆ' ಎಂದು ಪಾಕಿಸ್ತಾನ ಪರ ಗರಿಷ್ಠ ವಿಕೆಟ್ ಪಡೆದಿರುವ ಅಕ್ರಮ್​ ಹೇಳಿದ್ದಾರೆ.

ಆಲಮ್‌ ಕ್ರಿಕೆಟ್‌ ಸಾಧನೆ:

26 ವರ್ಷದ ಆಲಮ್​ 3 ಟೆಸ್ಟ್​ ಪಂದ್ಯಗಳನ್ನಾಡಿದ್ದು 250 ರನ್​ ಗಳಿಸಿದ್ದಾರೆ. 38 ಏಕದಿನ ಪಂದ್ಯವನ್ನಾಡಿರುವ ಅವರು 996 ರನ್​ ಗಳಿಸಿದ್ದಾರೆ. ಕೊನೆಯ ಟೆಸ್ಟ್​ ಪಂದ್ಯವನ್ನು 2009ರಲ್ಲಿ ಆಡಿದ್ದರು.

ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​ ಪಂದ್ಯ ಸೌತಾಂಪ್ಟನ್​ನಲ್ಲಿ ಗುರುವಾರದಿಂದ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.