ETV Bharat / sports

ಭಾರತ ತಂಡಕ್ಕೆ ಇಬ್ಬಿಬ್ಬರು ನಾಯಕರ ಬೇಕಾಗಿಲ್ಲ, ಅದು ನಮ್ಮ ಸಂಸ್ಕೃತಿಯೂ ಅಲ್ಲ: ಕಪಿಲ್ ದೇವ್​ - ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ 5ನೇ ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆ ಭಾರತ ಟಿ20 ತಂಡಕ್ಕೆ ನಾಯಕ ನಾಯಕನನ್ನಾಗಿ ನೇಮಕ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ ಕಪಿಲ್ ದೇವ್ ಪ್ರಕಾರ ನಾಯಕತ್ವ ವಿಕೇಂದ್ರೀಕರಣ ಭಾರತ ಸಂಸ್ಕೃತಿಯಲ್ಲ ಎಂದಿದ್ದಾರೆ.

ಕಪಿಲ್ ದೇವ್​
ಕಪಿಲ್ ದೇವ್​
author img

By

Published : Nov 21, 2020, 10:54 PM IST

ಮುಂಬೈ: ಭಾರತ ತಂಡದ ಮಾಜಿ ನಾಯಕ ಕಪಿಲ್​ದೇವ್​ ನಾಯಕತ್ವ ವಿಭಜನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಟೀಮ್​ ಇಂಡಿಯಾಕ್ಕೆ ಇದು ಒಳ್ಳೆಯದಲ್ಲ, ಆದ್ದರಿಂದ ತಂಡದಲ್ಲಿ ಹೆಚ್ಚಿನ ವ್ಯತ್ಯಾಸಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

" ಒಂದು ಮಲ್ಟಿ ನ್ಯಾಷನಲ್ ಕಂಪನಿಗೆ ಇಬ್ಬರು ಸಿಇಒಗಳಿರುವುದಿಲ್ಲ" ಎಂದು 1983 ರ ವಿಶ್ವಕಪ್ ವಿಜೇತ ತಂಡದ ನಾಯಕ ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರೋಹಿತ್ ಶರ್ಮಾ 5ನೇ ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆ ಭಾರತ ಟಿ20 ತಂಡಕ್ಕೆ ನಾಯಕ ನಾಯಕನನ್ನಾಗಿ ನೇಮಕ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ ಕಪಿಲ್ ದೇವ್ ಪ್ರಕಾರ ನಾಯಕತ್ವ ವಿಕೇಂದ್ರೀಕರಣ ಭಾರತ ಸಂಸ್ಕೃತಿಯಲ್ಲ ಎಂದಿದ್ದಾರೆ.

ನಮ್ಮ ಸಂಸ್ಕೃತಿಯಲ್ಲಿ ಒಂದೇ ತಂಡಕ್ಕೆ ಇಬ್ಬರು ನಾಯಕರಿರುವುದಿಲ್ಲ. ಒಂದೇ ಕಂಪನಿಗೆ ಇಬ್ಬರು ಸಿಇಒಗಳಿರುತ್ತಾರೆಯೇ?. ಇಲ್ಲ ಅಲ್ವ. ಕೊಹ್ಲಿ ಇನ್ನು ಟಿ20 ಆಡುತ್ತಾರೆಂದರೆ ಅವರು ನಾಯಕರಾಗಿ ಉಳಿಯಲು ಅಷ್ಟು ಸಾಕು. ಅವರೇ ಇರಲಿ ಬಿಡಿ. ನಾನೂ ಬೇರೆ ನಾಯಕನನ್ನು ಕಾಣಲು ಇಷ್ಟಪಡುತ್ತೇನೆ. ಆದರೆ ಅದು ತುಂಬಾ ಕಷ್ಟ ಎಂದು ಕಪಿಲ್ ಹೇಳಿದ್ದಾರೆ.

70-80 ​ ಪರ್ಸೆಂಟ್​ ಆಟಗಾರರು ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಆಡುತ್ತಾರೆ. ಅವರು ಇಬ್ಬರು ನಾಯಕರ ಥಿಯರಿಗಳನ್ನು ಇಷ್ಟಪಡುವುದಿಲ್ಲ. ಅಲ್ಲದೆ ಅದು ನಾಯಕನ ಮತ್ತು ಆಟಗಾರರ ನಡುವೆ ಹೆಚ್ಚಿನ ವ್ಯತ್ಯಾಸಗಳನ್ನು ತರಬಹುದು ಎಂದು ಅವರು ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.