ಒಂಟಾರಿಯೋ: ಗ್ಲೋಬಲ್ ಟಿ-20 ಕ್ರಿಕಟ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅಬ್ಬರ ಜೋರಾಗಿದ್ದು, ಇದೀಗ ಒಂದೇ ಓವರ್ನಲ್ಲಿ ಬರೋಬ್ಬರಿ 32ರನ್ಗಳಿಕೆ ಮಾಡುವ ಮೂಲಕ ಪಾಕ್ ಬೌಲರ್ ಬೆವರಿಳಿಸಿದ್ದಾರೆ.
-
Power hitting!
— GT20 Canada (@GT20Canada) August 3, 2019 " class="align-text-top noRightClick twitterSection" data="
6-6-4-4-6-6@henrygayle in Shadab Khan's over.
Watch here!#ERvsVK #GT2019 pic.twitter.com/kJKD8FeGCV
">Power hitting!
— GT20 Canada (@GT20Canada) August 3, 2019
6-6-4-4-6-6@henrygayle in Shadab Khan's over.
Watch here!#ERvsVK #GT2019 pic.twitter.com/kJKD8FeGCVPower hitting!
— GT20 Canada (@GT20Canada) August 3, 2019
6-6-4-4-6-6@henrygayle in Shadab Khan's over.
Watch here!#ERvsVK #GT2019 pic.twitter.com/kJKD8FeGCV
ವ್ಯಾಂಕೋವರ್ ನೈಟ್ಸ್ ತಂಡದ ನಾಯಕರಾಗಿರುವ ಗೇಲ್ 13ನೇ ಓವರ್ ಎಸೆದ ಶಾದಾಬ್ ಖಾನ್ ಬೌಲಿಂಗ್ನಲ್ಲಿ ನಾಲ್ಕು ಸಿಕ್ಸ್ ಹಾಗೂ ಎರಡು ಬೌಂಡರಿ ಸಿಡಿಸಿ 32ರನ್ಗಳಿಕೆ ಮಾಡಿದ್ದಾರೆ. ಜತೆಗೆ ಕೇವಲ 44 ಎಸೆತಗಳಲ್ಲಿ ಬರೋಬ್ಬರಿ 94ರನ್ಗಳಿಕೆ ಮಾಡಿದ್ದು, ಆರು ರನ್ಗಳಿಂದ ಶತಕ ವಂಚಿತರಾಗಿದ್ದಾರೆ. ಗೇಲ್ ಇನ್ನಿಂಗ್ಸ್ನಲ್ಲಿ ಒಟ್ಟು 9 ಸಿಕ್ಸ್ ಹಾಗೂ 6 ಬೌಂಡರಿ ಸೇರಿಕೊಂಡಿದ್ದವು. ಇದಕ್ಕೂ ಮೊದಲಿನ ಪಂದ್ಯದಲ್ಲಿ ಗೇಲ್ 54 ಎಸೆತಗಳಲ್ಲಿ ಬರೋಬ್ಬರಿ ಅಜೇಯ 122 ರನ್ಗಳಿಕೆ ಮಾಡಿದದರು.
ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗೇಲ್ ಈ ಸಾಧನೆ ನಿರ್ಮಿಸಿದ್ದು, ಈ ಪಂದ್ಯದಲ್ಲಿ ಗೇಲ್ ನೇತೃತ್ವದ ವ್ಯಾಂಕೋವರ್ ತಂಡ ಆರು ವಿಕೆಟ್ಗಳ ಗೆಲುವಿನ ನಗೆ ಬೀರಿದೆ.