ಲಾಹೋರ್: ಪಾಕಿಸ್ತಾನದ ಮಾಜಿ ನಾಯಕ ಮಾಜಿ ನಾಯಕ ಹಾಗೂ ಹಾಲಿ ಕೋಚ್ ಮಿಸ್ಬಾ ಉಲ್ ಹಕ್ ಪ್ರಸ್ತುತ ಪಾಕ್ ತಂಡದ ಬಾಬರ್ ಅಜಮ್ಗೆ ನಾಯಕತ್ವ ಸಿಕ್ಕಿರುವುದರಿಂದ ಅವರು ಮತ್ತಷ್ಟು ಜವಾಬ್ದಾರಿಯುತ ಬ್ಯಾಟ್ಸ್ಮನ್ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಬಾಬರ್ ಅಜಮ್ ಪಾಕಿಸ್ತಾನದ ನಾಯಕತ್ವ ನಿಭಾಯಿಸುವುದು ಕಷ್ಟ, ಅವರು ಒತ್ತಡವನ್ನು ನಿಭಾಯಿಸಲಾರರು ಎಂದು ಮಾಜಿ ಕೋಚ್ ಗ್ರ್ಯಾಂಟ್ ಫ್ಲವರ್ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬಾಬರ್ ಬೆನ್ನಿಗೆ ನಿಂತಿದ್ದಾರೆ.
2014ರಿಂದ ಕಳೆದ ವರ್ಷ ವಿಶ್ವಕಪ್ವರೆಗೂ ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಬಾಬರ್ ಉತ್ತಮ ಕ್ರಿಕೆಟ್ ಮೆದುಳನ್ನು ಹೊಂದಿದ್ದಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್ನಲ್ಲಿರುವ ರಾಜಕೀಯ ಹಾಗೂ ಪಾಕಿಸ್ತಾನದ ಅಭಿಮಾನಿಗಳಿಂದ ಉಂಟಾಗುವ ಒತ್ತಡ ಅವರು ನಿಭಾಯಿಸಿವುದು ಕಷ್ಟ ಎಂದು ಫ್ಲವರ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮಿಸ್ಬಾ, ಕಳೆದ ವರ್ಷ ಬಾಬರ್ಗೆ ಟಿ -20 ನಾಯಕತ್ವ ನೀಡುವ ಮೂಲಕ ಅವರ ನಾಯಕತ್ವದ ಪರೀಕ್ಷೆ ಮಾಡಲಾಗಿತ್ತು. ಇದೀಗ ನಾವು ಹೊಸ ಸವಾಲು ಹೇಗೆ ಸ್ವೀಕರಿಸಿಲಿದ್ದಾರೆ. ಇದರಿಂದ ಅವರ ಬ್ಯಾಟಿಂಗ್ ಏನಾದರೂ ಪರಿಣಾಮ ಬೀರಲಿದೆಯಾ ಎಂದು ಕಾದು ನೋಡಬೇಕಿದೆ.
ನಾವೆಲ್ಲರೂ ಆತ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ ಎಂದು ನಂಬಿದ್ದೇವೆ, ಅವರು ನಾಯಕನಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದರೆ ಆತ ಮೊದಲು ಬ್ಯಾಟ್ಸ್ಮನ್ ಆಗಿ ಜವಾಬ್ದಾರಿಯುತ ಪ್ರದರ್ಶನ ನೀಡಬೇಕು ಎಂದಿದ್ದಾರೆ.
ಬಾಬರ್ ಅಜಮ್ ಈಗಾಗಲೇ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ವಿಭಿನ್ನ ಮಟ್ಟದಲ್ಲಿ ತಂದು ನಿಲ್ಲಿಸಿದೆ. ಹಾಗಾಗಿ ನಾವೆಲ್ಲರೂ ಏಕದಿನ ತಂಡದ ಜವಾಬ್ದಾರಿ ನೀಡುವ ನಿರ್ಧಾರ ಮಾಡಿದೆವು ಎಂದು ಮಿಸ್ಬಾ ತಿಳಿಸಿದ್ದಾರೆ.
ಪಿಸಿಬಿ ಕಳೆದ ತಿಂಗಳು ಬಾಬರ್ ಅಜಮ್ ಅವರನ್ನು ಏಕದಿನ ತಂಡದ ನಾಯಕನ್ನನ್ನಾಗಿ ನೇಮಕ ಮಾಡಿತ್ತು.