ETV Bharat / sports

ಕೊಹ್ಲಿ ಪಡೆ ವಿರುದ್ಧ 'ಅತ್ಯುತ್ತಮ ಎಸೆತ' ಪ್ರಯೋಗಿಸಿದ್ರೆ ಮಾತ್ರ ಯಶಸ್ಸು ಸಾಧ್ಯ: ಇಂಗ್ಲೆಂಡ್ ಬ್ಯಾಟಿಂಗ್ ಕೋಚ್​ - ಭಾರತ-ಇಂಗ್ಲೆಂಡ್​ ಕ್ರಿಕೆಟ್​ ಟೆಸ್ಟ್​ ಸರಣಿ

ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್​ ಪಡೆ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ನಿರಂತರವಾಗಿ 'ಅತ್ಯುತ್ತಮ ಎಸೆತ'ಗಳನ್ನು ಬೌಲ್​ ಮಾಡುವುದು ಅಗತ್ಯ ಎಂದು ಆಂಗ್ಲರ ಬ್ಯಾಟಿಂಗ್ ತರಬೇತುದಾರ ಗ್ರಹಾಂ ಥಾರ್ಪ್ ಹೇಳಿದ್ದಾರೆ.

bowlers-need-to-bowl-their-best-balls-repeatedly-if-they-want-to-put-the-hosts-graham-thorpe
ಗ್ರಹಾಂ ಥಾರ್ಪ್
author img

By

Published : Jan 30, 2021, 6:09 AM IST

ಚೆನ್ನೈ: ಭಾರತದ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ವಿರಾಟ್​ ಪಡೆಯನ್ನು ಒತ್ತಡಕ್ಕೆ ಸಿಲುಕಿಸಬೇಕಾದರೆ ನಿರಂತರವಾಗಿ 'ಅತ್ಯುತ್ತಮ ಎಸೆತ'ಗಳನ್ನು ಬೌಲ್​ ಮಾಡಬೇಕು ಎಂದು ಆಂಗ್ಲರ ಬ್ಯಾಟಿಂಗ್ ತರಬೇತುದಾರ ಗ್ರಹಾಂ ಥಾರ್ಪ್ ಕರೆ ತಂಡದ ಆಟಗಾರರಿಗೆ ಕರೆ ನೀಡಿದ್ದಾರೆ.

2014ರ ಇಂಗ್ಲೆಂಡ್‌ ಪ್ರವಾಸದಲ್ಲಿ ವಿಫಲರಾಗಿದ್ದ ವಿರಾಟ್​ ಕೊಹ್ಲಿ ನಂತರ 2016, 2018 ಭರ್ಜರಿ ಯಶಸ್ಸು ಸಾಧಿಸಿದ್ದರು. ವಿರಾಟ್​ ಒಬ್ಬ ಅದ್ಭುತ ಆಟಗಾರ ಎಂದು ನಮಗೆ ತಿಳಿದಿದೆ. ಅವರು ಅನೇಕ ವರ್ಷಗಳಿಂದ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ನಮ್ಮ ಬೌಲಿಂಗ್ ಪಡೆಯ ಪ್ರಮುಖ ಗುರಿ 'ಅತ್ಯುತ್ತಮ ಎಸೆತಗಳನ್ನು ಹೆಚ್ಚು ಪ್ರಯೋಗಿಸುವುದಾಗಿದೆ. ನಮ್ಮ ಸ್ಪಿನ್ನರ್‌ಗಳು ಮತ್ತು ವೇಗಿಗಳಿಂದ ಹೆಚ್ಚಿನದನ್ನು ನಾನು ಬಯಸುವುದಿಲ್ಲ ಎಂದಿದ್ದಾರೆ.

ನಾವು ಬೃಹತ್​ ಮೊತ್ತ ಕಲೆ ಹಾಕಬೇಕು. ಬಳಿಕ ಭಾರತೀಯ ಬ್ಯಾಟಿಂಗ್​ ಪಡೆ ಮೇಲೆ ಒತ್ತಡ ಹೇರಬಹುದು. ಭಾರತ ತಂಡದಲ್ಲಿ ಕೇವಲ ಸ್ಪಿನ್ ಮಾತ್ರವಲ್ಲದೆ, ವೇಗದ ಬೌಲಿಂಗ್​ ಕೂಡ ಪ್ರಬಲವಾಗಿದ್ದು, ಎರಡೂ ಸವಾಲುಗಳಿಗೆ ಸಿದ್ಧವಿರಬೇಕು. ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಎದುರಿಸುವುದು ಸವಾಲಾದರೂ, ಅದನ್ನು ಮೆಟ್ಟಿನಿಲ್ಲಬೇಕಿದೆ. ತಂಡದ ಕೆಲ ಆಟಗಾರರು ಮೊದಲ ಬಾರಿಗೆ ಉಪಖಂಡದಲ್ಲಿ ಆಡುತ್ತಿದ್ದು, ಕಲಿಕೆಗೆ ಉತ್ತಮ ಅವಕಾಶವಾಗಿದೆ ಎಂದು ಗ್ರಹಾಂ ಹೇಳಿದ್ದಾರೆ.

ಇದನ್ನೂ ಓದಿ:ಭಾರತದ ಪರ ಸೀಮಿತ ಓವರ್​ಗಳಲ್ಲಿ ಆಡುವ ಹಂಬಲ ಇನ್ನೂ ಕೈಬಿಟ್ಟಿಲ್ಲ: ಪೂಜಾರ

ನಮ್ಮ ತಂಡದಲ್ಲಿ ಹೆಚ್ಚಿನವರು ಆಕ್ರಮಣಕಾರಿ ಆಟಗಾರರಾಗಿದ್ದಾರೆ, ಕೆಲವರು ಇಡೀ ದಿನ ಬ್ಯಾಟಿಂಗ್ ಮಾಡಬಹುದು. ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಆಡಬೇಕಿದೆ ಎಂದು ಇಂಗ್ಲೆಂಡ್​ ಬ್ಯಾಟಿಂಗ್​ ಕೋಚ್​​ ಮಾತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.