ETV Bharat / sports

ಡೋಪಿಂಗ್ ನಿಯಮ​ ಉಲ್ಲಂಘನೆ: ಬಾಂಗ್ಲಾದೇಶದ ಕ್ರಿಕೆಟಿಗನಿಗೆ 2 ವರ್ಷ ನಿಷೇಧ

ಕಾಝಿ 2018ರ ಅಂಡರ್​-19 ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ಪರ ಹೆಚ್ಚು ವಿಕೆಟ್​ ಪಡೆದಿದ್ದರು. ಅದೇ ವರ್ಷ ನಡೆದ ರಾಷ್ಟ್ರೀಯ ಕ್ರಿಕೆಟ್​ ಲೀಗ್​ ಪಂದ್ಯದ ಸಮಯದಲ್ಲಿ ನಿಷೇಧಿತ ವಸ್ತುವಾದ ಮೆಥಾಂಫೆಟೆಮೈನ್​ ಸೇವಿಸಿರುವುದು ಡೋಪಿಂಗ್ ಪರೀಕ್ಷೆಯಲ್ಲಿ ಸಾಬೀತಾಗಿದೆ. ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡಿರುವ 21 ವರ್ಷದ ಆಟಗಾರನಿಗೆ ಬಿಸಿಬಿ 2 ವರ್ಷ ನಿಷೇಧ ಶಿಕ್ಷೆ ವಿಧಿಸಿದೆ.

author img

By

Published : Jul 27, 2020, 1:37 PM IST

ಕಾಝಿ ಅನಿಕ್​ ಇಸ್ಲಾಮ್
ಕಾಝಿ ಅನಿಕ್​ ಇಸ್ಲಾಮ್

ಡಾಕಾ: ಡೋಪಿಂಗ್ ನಿಯಮ ಉಲ್ಲಂಘನೆ ಹಿನ್ನೆಲೆ ಬಾಂಗ್ಲಾದೇಶದ ಯುವ ಕ್ರಿಕೆಟಿಗ ಕಾಝಿ ಅನಿಕ್​ ಇಸ್ಲಾಮ್​ ಅವರನ್ನು ಬಾಂಗ್ಲಾದೇಶ ಕ್ರಿಕೆಟ್​ ಬೋರ್ಡ್​ 2 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿಷೇಧಿಸಿದೆ.

ಕಾಝಿ 2018ರ ಅಂಡರ್​-19 ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ಪರ ಹೆಚ್ಚು ವಿಕೆಟ್​ ಪಡೆದಿದ್ದರು. ಅದೇ ವರ್ಷ ನಡೆದ ರಾಷ್ಟ್ರೀಯ ಕ್ರಿಕೆಟ್​ ಲೀಗ್​ ಪಂದ್ಯದ ಸಮಯದಲ್ಲಿ ನಿಷೇಧಿತ ವಸ್ತುವಾದ ಮೆಥಾಂಫೆಟೆಮೈನ್​ ಸೇವಿಸಿರುವುದು ಡೋಪಿಂಗ್ ಪರೀಕ್ಷೆಯಲ್ಲಿ ಸಾಬೀತಾಗಿದೆ. ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡಿರುವ 21 ವರ್ಷದ ಆಟಗಾರನಿಗೆ ಬಿಸಿಬಿ 2 ವರ್ಷ ನಿಷೇಧ ಶಿಕ್ಷೆ ವಿಧಿಸಿದೆ.

ಬಾಂಗ್ಲಾದೇಶ ಕ್ರಿಕೆಟ್​ ಬೋರ್ಡ್​
ಬಾಂಗ್ಲಾದೇಶ ಕ್ರಿಕೆಟ್​ ಬೋರ್ಡ್​

ಅನಿಕ್​ ಅವರ ದೋಷದ ಮಟ್ಟವನ್ನು ಪರಿಗಣಿಸಿ ನೋಡಿದಾಗ, ಆತ ತನ್ನ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಿಷೇಧಿತ ವಸ್ತು ಬಳಸಿಲ್ಲ. ಬದಲಾಗಿ ಹುಡುಗುತನ ಹಾಗೂ ಅನಾನುಭವ ಮತ್ತು ಡೋಪಿಂಗ್ ವಿರೋಧಿ​ ಶಿಕ್ಷಣ ಕೊರತೆಯಿಂದ ಸೇವಿಸಿ ಡೋಪಿಂಗ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಬೋರ್ಡ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಮ್ಮ ತಪ್ಪನ್ನು ಒಪ್ಪಿಕೊಂಡು ಅನಗತ್ಯ ವಿಚಾರಣೆ ತಪ್ಪಿಸಿರುವುದಕ್ಕೆ ಮತ್ತು ಸಾಕಷ್ಟು ಸಮಯ ಮತ್ತು ಹಣವನ್ನು ಉಳಿಸಿರುವುದಕ್ಕೆ ಕಾಝಿಯನ್ನು ಮೆಚ್ಚಿಕೊಂಡಿದೆ. ಕಾಝಿ ಅವರ ನಿಷೇಧದ ಅವಧಿ ಫೆಬ್ರವರಿ 8, 2019ರಿಂದ ಆರಂಭವಾಗಿದೆ.

ಕಾಝಿ ನವೆಂಬರ್​ 29ರಂದು ರಾಜಶಾಹಿ ಕಿಂಗ್ಸ್​ ತಂಡದ ಪರ 2017ರಲ್ಲಿ ಬಿಪಿಎಲ್​ಗೆ ಪದಾರ್ಪಣೆ ಮಾಡಿದ್ದರು. ಅವರು ಬಾಂಗ್ಲಾದೇಶ ಕಿರಿಯರ ವಿಶ್ವಕಪ್​ ಹಾಗೂ 4 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.