ಹೈದರಾಬಾದ್: ಟೀಂ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು, ಟಿ-20 ಸರಣಿಗೆ ಆಯ್ಕೆಯಾಗಿಲ್ಲ. ಆದರೆ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ವಾರ್ನರ್ ವಿಕೆಟ್ ಪಡೆದ ರೀತಿಗೆ ಆಶ್ವಿನ್ರನ್ನು ಆಯ್ಕೆ ಮಾಡಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಏಳು ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ 27 ವಿಕೆಟ್ ಪಡೆದಿದ್ದಾರೆ. ಆದರೆ ಏಳು ಏಕದಿನ ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಮತ್ತು ಟಿ-20 ಪಂದ್ಯಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ. ಟಿ-20 ಸರಣಿಯಲ್ಲಿ ವಿಕೆಟ್ ಪಡೆಯದಿದ್ರೂ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ರು.
ಎತ್ತರದಲ್ಲಿ ಚೆಂಡು ಎಸೆದು ಅಕ್ರಮಣಕಾರಿಯಾಗಿ ಆಡುವಂತೆ ಬ್ಯಾಟ್ಸ್ಮನ್ರನ್ನ ಪ್ರೇರೇಪಿಸಿ ವಾರ್ನರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ರು. ಈ ಸೀಸನ್ನಲ್ಲಿ 10 ಪಂದ್ಯಗಳನ್ನಾಡಿರುವ ಅಶ್ವಿನ್ 9 ವಿಕೆಟ್ ಪಡೆದಿದ್ದಾರೆ. ಪ್ರತಿ ಓವರ್ಗೆ ಸರಾಸರಿ 8.28 ರನ್ಬಿಟ್ಟುಕೊಟ್ಟಿದ್ದಾರೆ.
ಸೆಪ್ಟೆಂಬರ್ 20ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದು ಓವರ್‌ನಲ್ಲಿ ಎರಡು ರನ್ ನೀಡಿ, ಎರಡು ವಿಕೆಟ್ ಪಡೆದರು. ಅಕ್ಟೋಬರ್ 9ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಉತ್ತಮ ಸ್ಪೆಲ್ ಮಾಡಿದ ಅಶ್ವಿನ್, 22 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರು. ಈ ಮೂಲಕ ವೈಟ್ ಬಾಲ್ ಕ್ರಿಕೆಟ್ನಲ್ಲಿ ಅಶ್ವಿನ್ ಇನ್ನೂ ಕೂಡ ಪ್ರಭಾವಶಾಲಿ ಬೌಲರ್ ಎಂದು ಸಾಬೀತುಪಡಿಸಿದ್ದಾರೆ.
ಭಾರತ ಟೆಸ್ಟ್ ತಂಡದ ಕಾಯಂ ಸದಸ್ಯರಾಗಿರುವ ಅಶ್ವಿನ್ ಸೀಮಿತ ಓವರ್ಗಳ ಕ್ರಿಕೆಟ್ ಆಡಿ ಮೂರು ವರ್ಷಗಳೇ ಉರುಳಿವೆ. ಚಹಾಲ್ ಹಾಗೂ ಕುಲ್ದೀಪ್ ಯಾದವ್ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರಿಂದ ಅಶ್ವಿನ್ಗೆ ಅವಕಾಶ ಸಿಕ್ಕಿರಲ್ಲ. ಅಶ್ವಿನ್ ಕೊನೆಯ ಬಾರಿ 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ-20 ಪಂದ್ಯವನ್ನಾಡಿದ್ದರು.
ಅಶ್ವಿನ್ ಇಲ್ಲಿಯವರೆಗೆ 71 ಟೆಸ್ಟ್, 111 ಏಕದಿನ ಮತ್ತು 46 ಟಿ-20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 365, 150 ಮತ್ತು 52 ವಿಕೆಟ್ ಪಡೆದಿದ್ದಾರೆ.