ನವದೆಹಲಿ: 21 ದಿನಗಳ ಕಾಲ ದೇಶಾದ್ಯಂತ ಲಾಕ್ಡೌನ್ ಹೇರಿ ಕೇಂದ್ರ ಸರ್ಕಾರ ಈಗಾಗಲೇ ಆದೇಶ ಹೊರಹಾಕಿದೆ. ಇದರಿಂದ ಎಲ್ಲ ಸೆಲೆಬ್ರೆಟಿಗಳು ಮನೆಯಲ್ಲಿ ಉಳಿದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮನೆಯಲ್ಲೇ ಲಾಕ್ಡೌನ್ ಆಗಿದ್ದು, ತಮ್ಮ ಹೆಂಡತಿ ಅನುಷ್ಕಾ ಜತೆ ಕಾಲ ಕಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಗಂಡ ವಿರಾಟ್ ಕೊಹ್ಲಿ ಹೇರ್ ಕಟಿಂಗ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
-
Meanwhile, in quarantine.. 💇🏻♂💁🏻♀ pic.twitter.com/XO0UJ7NmSU
— Anushka Sharma (@AnushkaSharma) March 28, 2020 " class="align-text-top noRightClick twitterSection" data="
">Meanwhile, in quarantine.. 💇🏻♂💁🏻♀ pic.twitter.com/XO0UJ7NmSU
— Anushka Sharma (@AnushkaSharma) March 28, 2020Meanwhile, in quarantine.. 💇🏻♂💁🏻♀ pic.twitter.com/XO0UJ7NmSU
— Anushka Sharma (@AnushkaSharma) March 28, 2020
ಕ್ವಾರಂಟೈನ್ ಸಮಯದಲ್ಲಿ ಈ ರೀತಿಯ ಕೆಲಸ ಮಾಡಿ ಎಂದು ವಿರಾಟ್ ಕೊಹ್ಲಿ ಕೂಡ ಈ ವಿಡಿಯೋ ಶೇರ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದ ವಿರಾಟ್ ಕೊಹ್ಲಿ 21 ದಿನಗಳ ಲಾಕ್ಡೌನ್ ಘೋಷಣೆ ಗಂಭೀರವಾಗಿ ತೆಗೆದುಕೊಳ್ಳಿ ಎಂದು ಕೊಹ್ಲಿ ಮನವಿ ಮಾಡಿಕೊಂಡಿದ್ದರು.
21 ದಿನಗಳ ಲಾಕ್ಡೌನ್ ಘೋಷಣೆ ಹೊರಹಾಕಿರುವ ಕಾರಣ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.