ಜಮೈಕಾ: ವಿಂಡೀಸ್ ಕ್ರಿಕೆಟ್ ತಂಡದ ಸ್ಪೋಟಕ ದಾಂಡಿಗ ಆ್ಯಂಡ್ರೆ ರಸೆಲ್ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದು, ಈ ವಿಚಾರವನ್ನು ಭರ್ಜರಿ ಕಾರ್ಯಕ್ರಮ ಏರ್ಪಡಿಸಿ ಎಲ್ಲರೊಂದಿಗೆ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಜಮೈಕಾದ ಕಿಂಗಸ್ಟನ್ನಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು, ಅಲ್ಲಿ ರಸೆಲ್ ಹಾಗೂ ಪತ್ನಿ ಜಸ್ಸಿಮ್ ಲೋರಾ ಕ್ರಿಕೆಟ್ ಆಡುವ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ ತಾವು ಬ್ಯಾಟಿಂಗ್ ನಡೆಸಿ, ಅವರ ಪತ್ನಿಗೆ ಬೌಲಿಂಗ್ ಮಾಡಲು ಹೇಳಿದ್ದಾರೆ. ಲೋರಾ ಎಸೆದ ಬಣ್ಣ ತುಂಬಿದ ಚೆಂಡನ್ನು ಆಗಸಕ್ಕೆ ಬಾರಿಸಿದಾಗ ವೇಧಿಕೆಯಲ್ಲಿ ಬಣ್ಣದ ಚೆಂಡು ಸಿಡಿದು ಅಂಗಳದಲ್ಲಿ ಪಿಂಕ್ ಬಣ್ಣ ಚೆಲ್ಲಾಡಿತು.
ರಸೆಲ್ ಈ ವಿಡೀಯೋದ ಜೊತೆಗೆ, ಹುಟ್ಟುವ ಮಗು ಹೆಣ್ಣು ಅಥವಾ ಗಂಡು ಯಾವುದಾದರಾಗಲಿ, ಆ ದೇವರಲ್ಲಿ ಮಗು ಆರೋಗ್ಯವಾಗಿರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.