ಅಬುಧಾಬಿ: ಕಗಿಸೋ ರಬಾಡ ಮತ್ತು ತಬ್ರೈಜ್ ಶಮ್ಸಿ ಅವರ ಮನಮೋಹಕ ಬೌಲಿಂಗ್ ನೆರವಿನಿಂದ ಸೆಮಿಫೈನಲ್ ಪ್ರವೇಶಿಸಲು ಪ್ರಮುಖವಾಗಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶವನ್ನು ಕೇವಲ 84 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
ಸೂಪರ್ 12ನಲ್ಲಿ ತಮ್ಮ 4ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶಕ್ಕೆ ರಬಡಾ ಪವರ್ ಪ್ಲೇನಲ್ಲೇ ಆಘಾತ ನೀಡಿದರು. ಅವರು ಇನ್ನಿಂಗ್ಸ್ನ 4ನೇ ಓವರ್ನಲ್ಲಿ ಮೊಹಮ್ಮದ್ ನಯೀಮ್(9) ಮತ್ತು ಸೌಮ್ಯ ಸರ್ಕಾರ್(0) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಬಂದ ಮುಶ್ಪೀಕರ್ ರಹೀಮ್ ಕೂಡ ಖಾತೆ ತೆರೆಯದೇ ರಬಾಡ ಬೌಲಿಂಗ್ನಲ್ಲಿ ಹೆಂಡ್ರಿಕ್ಸ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
-
A spectacular performance from South Africa leads to them bowling out Bangladesh for 84 👏
— T20 World Cup (@T20WorldCup) November 2, 2021 " class="align-text-top noRightClick twitterSection" data="
Which bowler impressed you the most?#T20WorldCup | #SAvBAN | https://t.co/ahwmbzGcK2 pic.twitter.com/8CgxeaTNI8
">A spectacular performance from South Africa leads to them bowling out Bangladesh for 84 👏
— T20 World Cup (@T20WorldCup) November 2, 2021
Which bowler impressed you the most?#T20WorldCup | #SAvBAN | https://t.co/ahwmbzGcK2 pic.twitter.com/8CgxeaTNI8A spectacular performance from South Africa leads to them bowling out Bangladesh for 84 👏
— T20 World Cup (@T20WorldCup) November 2, 2021
Which bowler impressed you the most?#T20WorldCup | #SAvBAN | https://t.co/ahwmbzGcK2 pic.twitter.com/8CgxeaTNI8
ವಿಕೆಟ್ ಕೀಪರ್ ಲಿಟನ್ ದಾಸ್ 36 ಎಸೆತಗಳಲ್ಲಿ 24 ಮತ್ತು ಮೆಹೆದಿ ಹಸನ್ 25 ಎಸೆತಗಳಲ್ಲಿ 27 ರನ್ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟ್ಸ್ಮನ್ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು.
ನಾಯಕ ಮಹಮದುಲ್ಲಾ 3, ಶಮೀಮ್ ಹೊಸೈನ್ 11, ತಸ್ಕಿನ್ ಅಹ್ಮದ್ 3, ಆಫೀಫ್ ಹುಸೇನ್ ಮತ್ತು ನಸುಮ್ ಅಹ್ಮದ್ ಖಾತೆ ತೆರೆಯದೇ ನಿರ್ಗಮಿಸಿದರು.
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 20ಕ್ಕೆ 3, ತಬ್ರೈಜ್ ಶಮ್ಸಿ 21ಕ್ಕೆ 2,, ಎನ್ರಿಚ್ ನಾರ್ಕಿಯಾ 8ಕ್ಕೆ 3 ಹಾಗೂ ಪ್ರೆಟೋರಿಯಸ್ 11ಕ್ಕೆ1 ವಿಕೆಟ್ ಪಡೆದು ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಆಗುವಂತೆ ಮಾಡಿದರು.
ಇದನ್ನು ಓದಿ:ಟಿ20 ವಿಶ್ವಕಪ್ನಲ್ಲಿ ವೈಫಲ್ಯ: ಕೊಹ್ಲಿ ODI ನಾಯಕತ್ವದಲ್ಲಿ ಮುಂದುವರಿಯುವುದು ಅನುಮಾನ!