ETV Bharat / sports

ಕಾಂಗರೂ ದಾಳಿಗೆ ತತ್ತರಿಸಿದ ಹರಿಣಗಳು: ಎರಡೇ ದಿನದಲ್ಲಿ ಗಬ್ಬಾ ಟೆಸ್ಟ್​ ಅಂತ್ಯ!

author img

By

Published : Dec 18, 2022, 1:41 PM IST

Updated : Dec 18, 2022, 3:01 PM IST

ಬ್ರಿಸ್ಬೇನ್ ಟೆಸ್ಟ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾವು 6 ವಿಕೆಟ್​ಗಳ ಜಯ ಸಾಧಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ.

Australia beat South Africa by 6 wickets in Brisbane test
ಕಾಂಗರೂ ದಾಳಿಗೆ ತತ್ತರಿಸಿದ ಹರಿಣಗಳು: ಎರಡೇ ದಿನದಲ್ಲಿ ಗಬ್ಬಾ ಟೆಸ್ಟ್​ ಅಂತ್ಯ

ಬ್ರಿಸ್ಬೇನ್: ಆಸೀಸ್​ ವೇಗಿಗಳ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ 6 ವಿಕೆಟ್​ಗಳ ಸೋಲುಂಡಿದೆ. ಬೌಲರ್​ಗಳ ಸ್ವರ್ಗದಂತಿದ್ದ ಗಬ್ಬಾ ಪಿಚ್​ನಲ್ಲಿ ಎರಡೂ ಕಡೆಯ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದರು. ಎರಡೇ ದಿನದಲ್ಲಿ ಟೆಸ್ಟ್​ ಪಂದ್ಯ ಅಂತ್ಯ ಕಂಡಿದೆ.

ಶನಿವಾರ ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಹರಿಣಗಳ ತಂಡ, ಮಿಚೆಲ್​ ಸ್ಟಾರ್ಕ್ ಹಾಗೂ ಇತರರ ಬೌಲಿಂಗ್​ ದಾಳಿಗೆ ಸಿಲುಕಿ ಕೇವಲ 152 ರನ್​ಗೆ ಆಲೌಟ್​ ಆಗಿತ್ತು. 27ಕ್ಕೆ 4 ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಬೌಮಾ 38 ರನ್​ ಹಾಗೂ ವಿಕೆಟ್​ ಕೀಪರ್​ ವೆರೆನ್ನೆ ಅರ್ಧಶತಕ(64)ದ​ ಕಾಣಿಕೆ ನೀಡಿದ್ದರು.

ಬಳಿಕ ಮೊದಲ ಇನ್ನಿಂಗ್ಸ್ ಆಡಿದ ಆಸ್ಟ್ರೇಲಿಯಾ ಕೂಡ ಆರಂಭದಿಂದಲೇ ವಿಕೆಟ್​ ಕಳೆದುಕೊಳ್ಳುತ್ತ ಸಾಗಿತು. 27ಕ್ಕೆ 3 ವಿಕೆಟ್​ ಪತನವಾಗಿದ್ದವು. ಆದರೆ ಬಳಿಕ ಸ್ಟಿವ್​ ಸ್ಮಿತ್​ 36 ಹಾಗೂ ಟ್ರಾವಿಸ್​ ಹೆಡ್​ ಬಿರುಸಿನ ಅರ್ಧಶತಕ(92) ಬಾರಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದ್ದರು. ಎರಡನೇ ದಿನ 218 ರನ್​ಗೆ ಆಲೌಟ್​ ಆದ ಆಸೀಸ್​ 66 ರನ್​ಗಳ ಅಮೂಲ್ಯ ಮುನ್ನಡೆ ಪಡೆಯಿತು.

66 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ದಕ್ಷಿಣ ಆಫ್ರಿಕಾ ಮತ್ತೆ ವೈಫಲ್ಯ ಕಂಡಿತು. ನಾಯಕ ಡೀನ್​ ಎಲ್ಗರ್(2)​ ಸೇರಿ ಪ್ರಮುಖ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್​ ನಡೆಸಿದರು. 5 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಬೌಮಾ 29 ಹಾಗೂ ಜೊಂಡೊ 36 ರನ್​ ಗಳಿಸಿ ಕೊಂಚ ಚೇತರಿಕೆಯ ಭರವಸೆ ನೀಡಿದರೂ ಸಹ ಇವರಿಬ್ಬರ ವಿಕೆಟ್​ ಪತನದ ಬಳಿಕ ಹರಿಣಗಳ ಇನ್ನಿಂಗ್ಸ್​ಗೆ ಬಲ ಸಿಗಲಿಲ್ಲ. ಆಸೀಸ್​ ನಾಯಕ ಪ್ಯಾಟ್ ಕಮಿನ್ಸ್​ 5 ವಿಕೆಟ್​ ಕಿತ್ತು ಹರಿಣಗಳನ್ನು 99 ರನ್​ಗೆ ಆಲೌಟ್​ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಎರಡನೇ ಇನ್ನಿಂಗ್ಸ್​ನಲ್ಲಿ 35 ರನ್​ಗಳ ಅಲ್ಪ ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ ಕೂಡ 4 ವಿಕೆಟ್​ ಕಳೆದುಕೊಂಡಿತ್ತು. ಕಗೀಸೋ ರಬಾಡ 13 ರನ್​ಗೆ 4 ವಿಕೆಟ್​ ಉರುಳಿಸಿ ಭೀತಿ ಮೂಡಿಸಿದ್ದರು. ಅಂತಿಮವಾಗಿ ಆಸ್ಟ್ರೇಲಿಯಾ 7.5 ಓವರ್​ಗಳಲ್ಲಿ ಗುರಿ ತಲುಪುವ ಮೂಲಕ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. 2ನೇ ಪಂದ್ಯವು ಡಿ. 25ರಿಂದ ಮೆಲ್ಬೋರ್ನ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: ಚಿತ್ತಗಾಂಗ್​ ಟೆಸ್ಟ್: ಬಾಂಗ್ಲಾ ವಿರುದ್ಧ ರಾಹುಲ್​ ಪಡೆಗೆ 188 ರನ್​ಗಳ ಜಯ

Last Updated : Dec 18, 2022, 3:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.