ಮ್ಯಾಂಚೆಸ್ಟರ್ (ಇಂಗ್ಲೆಂಡ್) : ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ 4ನೇ ಆಶಸ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನ ಎರಡನೇ ದಿನದ ಆಟದಲ್ಲಿ 317 ರನ್‌ಗೆ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ಕರಾರುವಾಕ್ಕಾಗಿ ಬೌಲಿಂಗ್ ಮಾಡಿದ ಕ್ರಿಸ್ ವೋಕ್ಸ್ 22.2 ಓವರ್ನಲ್ಲಿ 62 ರನ್ ಬಿಟ್ಟು ಕೊಟ್ಟು 5 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ರನ್‌ಗೆ ಕಡಿವಾಣ ಹಾಕಿದರು.
-
A fourth Test century, coming in just 93 balls 💯
— England Cricket (@englandcricket) July 20, 2023 " class="align-text-top noRightClick twitterSection" data="
Take a bow, Zak Crawley! 👏
🏴 #ENGvAUS 🇦🇺 | @IGcom pic.twitter.com/25Nah8QBTh
">A fourth Test century, coming in just 93 balls 💯
— England Cricket (@englandcricket) July 20, 2023
Take a bow, Zak Crawley! 👏
🏴 #ENGvAUS 🇦🇺 | @IGcom pic.twitter.com/25Nah8QBThA fourth Test century, coming in just 93 balls 💯
— England Cricket (@englandcricket) July 20, 2023
Take a bow, Zak Crawley! 👏
🏴 #ENGvAUS 🇦🇺 | @IGcom pic.twitter.com/25Nah8QBTh
317 ರನ್ ಟ್ರೈಲ್ ಆಡುತ್ತಿರುವ ಇಂಗ್ಲೆಂಡ್ಗೆ ಬೆನ್ ಡಕೆಟ್ ವಿಕೆಟ್ ಪಡೆಯುವ ಮೂಲಕ ಮಿಚೆಲ್ ಸ್ಟಾರ್ಕ್ ಆರಂಭಿಕ ಆಘಾತ ಕೊಟ್ಟರು. ಬಳಿಕ ಕ್ರೀಸ್ಗೆ ಬಂದ ಮೊಯಿನ್ ಅಲಿ, ಝಾಕ್ ಕ್ರಾಲಿ ಜೊತೆ ಸೇರಿ ತಂಡಕ್ಕೆ ಆಸರೆಯಾಗಿ ಶತಕದ ಜೊತೆಯಾಟವಾಡಿದರು. ಮತ್ತೆ ದಾಳಿಗೆ ಇಳಿದ ಮಿಚೆಲ್ ಸ್ಟಾರ್ಕ್ 82 ಬಾಲ್ನಲ್ಲಿ 54 ರನ್ ಗಳಿಸಿ ಅರ್ಧ ಶತಕ ಪೂರೈಸಿದ ಮೊಯಿನ್ ಅಲಿ ವಿಕೆಟ್ ಕಬಳಿಸಿದರು.
ಆದರೇ ಬೇಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಝಾಕ್ ಕ್ರಾಲಿ 93 ಬಾಲ್ಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿವೇಗವಾಗಿ ಶತಕ ಪೂರೈಸಿದ ದ್ವಿತೀಯ ಆಟಗಾರನಾಗಿ ಮತ್ತೊಮ್ಮೆ ದಾಖಲೆ ಬರೆದರು. 2022ರಲ್ಲೂ ಪಾಕಿಸ್ತಾನ ವಿರುದ್ಧ ಕೇವಲ 86 ಎಸೆತಗಳಲ್ಲಿ ಶತಕ ಪೂರೈಸಿ ಪಥಮ ಸ್ಥಾನದಲ್ಲಿದ್ದಾರೆ. ಆದೇ ಆಟ ಮುಂದುವರೆಸಿದ ಕ್ರಾಲಿ ಯಶ್ವಸಿಯಾಗಿ 150 ರನ್ ಪೂರ್ಣಗೊಳಿಸಿ ದ್ವಿಶತಕ ದಾಖಲಿಸುವ ಸೂಚನೆ ಕೂಡ ಕೊಟ್ಟಿದರು. ಆದರೇ ಕ್ಯಾಮರೂನ್ ಗ್ರೀನ್ ಬೌಲಿಂಗ್ನಲ್ಲಿ ಔಟ್ ಆಗುವ ಮೂಲಕ 189 ರನ್‌ಗೆ ತನ್ನ ಆಟ ನಿಲ್ಲಿಸಿ ಹೊರ ನಡೆದ ಕ್ರಾಲಿ, ರೂಟ್ ಜೊತೆಗೂಡಿ ಸಹಾ ಶತಕದ ಜೊತೆ ಆಡವಾಡಿದರು. ಮತ್ತೊಂದು ಕಡೆ ಶತಕದ ಹೊಸ್ತಿಲಲ್ಲಿ 84 ರನ್ ಹೊಡೆದು ಸಾಗುತ್ತಿದ್ದ ರೂಟ್ ಆಟಕ್ಕೆ ಜೋಶ್ ಹ್ಯಾಜಲ್ವುಡ್ ಬ್ರೇಕ್ ಹಾಕಿದರು.
ಇದೀಗಾ ಇಂಗ್ಲೆಂಡ್ ಬ್ಯಾಟರ್ಗಳಾದ ಹ್ಯಾರಿ ಬ್ರೂಕ್ 11 ರನ್ ಹಾಗು ನಾಯಕ ಬೆನ್ ಸ್ಟೋಕ್ಸ್ 19 ರನ್ ಗಳಿಸಿ ತಾಳ್ಮೆ ಆಟವಾಡುತ್ತಿದ್ದು, ಈ ಮೂಲಕ ಇಂಗ್ಲೆಂಡ್ 57 ರನ್ಗಳ ಮುನ್ನಡೆ ಸಾಧಿಸಿದೆ. ಇನ್ನು ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರೆ, ಕ್ಯಾಮರೂನ್ ಗ್ರೀನ್ ಮತ್ತು ಜೋಶ್ ಹ್ಯಾಜಲ್ವುಡ್ ತಲಾ ಒಂದು ವಿಕೆಟ್ ಪಡೆದು ಬೌಲಿಂಗ್ ದಾಳಿ ಮುಂದುವರೆಸಿದ್ದಾರೆ.
ತಂಡಗಳು : ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ : ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್ವುಡ್.
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ : ಬೆನ್ ಡಕೆಟ್, ಝಾಕ್ ಕ್ರಾಲಿ, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಅ್ಯಂಡರ್ಸನ್.
ಇದನ್ನೂ ಓದಿ : ಇಂದು ಭಾರತ-ವೆಸ್ಟ್ ಇಂಡೀಸ್ 100ನೇ ಟೆಸ್ಟ್ ಪಂದ್ಯ: ಉಭಯ ತಂಡಗಳ ಟೆಸ್ಟ್ ಜರ್ನಿಯ ಕುರಿತು ಒಂದಿಷ್ಟು ಮಾಹಿತಿ..