ವೆಲ್ವಾ(ಸ್ಪೇನ್): ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 27ನೇ ಶ್ರೇಯಾಂಕದಲ್ಲಿರುವ ಚೀನಾದ ಲು ಗವಾಂಗ್ ಜು ವಿರುದ್ಧ ಸುಲಭ ಜಯ ಸಾಧಿಸಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ಸ್ನಲ್ಲಿ ಶ್ರೀಕಾಂತ್ 21-10, 21-15ರ ನೇರ ಗೇಮ್ಗಳ ಅಂತರದಲ್ಲಿ ಜುವಾಂಗ್ ವಿರುದ್ಧ ಸುಲಭ ಜಯ ಸಾಧಿಸಿದರು.12ನೇ ಶ್ರೇಯಾಂಕದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ನೆದರ್ಲೆಂಡ್ಸ್ನ ಮಾರ್ಕ್ ಕಾಲ್ಜೋವ್ ವಿರುದ್ಧ ಸೆಣಸಾಡಲಿದ್ದಾರೆ.
ಇದಕ್ಕೂ ಮುನ್ನ ನಡೆದ ಮಹಿಳೆಯರ್ ಸಿಂಗಲ್ಸ್ನ 3ನೇ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು 21-14, 21-18ರಲ್ಲಿ ಥಾಯ್ ಶಟ್ಲರ್ ಚೊಚುವಾಂಗ್ ವಿರುದ್ಧ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಸುಲಭ ಜಯ ಸಾಧಿಸಿದರು. ಈ ಮೂಲಕ ಚೊಚುವಾಂಗ್ ವಿರುದ್ಧ ಮುಖಾಮುಖಿಯಲ್ಲಿ 5-3ರಲ್ಲಿ ಮುನ್ನಡೆ ಹೆಚ್ಚಿಸಿಕೊಂಡರು. ಅಲ್ಲದೇ ಈ ಋತುವಿನಲ್ಲಿ ಥಾಯ್ ಆಟಗಾರ್ತಿ ವಿರುದ್ಧ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.
ಇನ್ನು ಎರಡು ಒಲಿಂಪಿಕ್ ಪದಕ ವಿಜೇತೆ ಸಿಂಧು 8ರ ಘಟ್ಟದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ತೈವಾನ್ನ ತಾಯ್ ಜು ಯಿಂಗ್ ವಿರುದ್ಧ ಸೆಣಸಾಡಲಿದ್ದಾರೆ. ಯಿಂಗ್ ಸ್ಕಾಟ್ಲೆಂಡ್ನ ಕಿರ್ಸ್ಟಿ ಗಿಲ್ಮೋರ್ ವಿರುದ್ಧ 21-10, 19-21, 21-11ರಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪುರಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ -ಚಿರಾಗ್ ಶೆಟ್ಟಿ ಜೋಡಿ 12 ಶ್ರೇಯಾಂಕದ ಮಲೇಷ್ಯಾ ಜೋಡಿ ವಿರುದ್ಧ 20-22, 21-18, 15-21ರ ರೋಚಕ ಹೋರಾಟದಲ್ಲಿ ಸೋಲು ಕಂಡು ನಿರಾಸೆಯನುಭವಿಸಿದರು. ಮಹಿಳಾ ಡಬಲ್ಸ್ನಲ್ಲೂ ಅಶ್ವಿನಿ ಪೊನ್ನಪ್ಪ-ಸಿಕ್ಕಿರೆಡ್ಡಿ ಜೋಡಿ ಕೂಡ ಸೋಲುಕಂಡು ಟೂರ್ನೆಮೆಂಟ್ನಿಂದ ಹೊರಬಿದ್ದಿತು. ಹೆಚ್ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಪ್ರತ್ಯೇಕ ಪುರುಷರ ಸಿಂಗಲ್ಸ್ನಲ್ಲಿ ಇಂದು ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ:World Championships: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಹಾಲಿ ಚಾಂಪಿಯನ್ ಸಿಂಧು