ಪ್ಯಾರಿಸ್ : ಹಾಲಿ ವಿಶ್ವ ಚಾಂಪಿಯನ್ ಭಾರತದ ಪಿವಿ ಸಿಂಧು ಫ್ರೆಂಚ್ ಓಪನ್ 2021ರ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಒಲಿಂಪಿಕ್ಸ್ ನಂತರ ಆಡಿದ ಎರಡೂ ಟೂರ್ನಮೆಂಟ್ನಲ್ಲಿ ಫೈನಲ್ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಶನಿವಾರ ನಡೆದ ಸೆಮಿಫೈನಲ್ನಲ್ಲಿ ಜಪಾನ್ನ ಸಯಕಾ ತಕಹಶಿ ವಿರುದ್ಧ 21-18, 16-21, 12-21 ವಿರುದ್ಧ ಒಂದು ಗಂಟೆ 8 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಸಿಂಧು ಸೋಲಿನೊಂದಿಗೆ ಫ್ರೆಂಚ್ ಓಪನ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಮೊದಲ ಸೆಟ್ನಲ್ಲಿ ಒಂದು ಹಂತದಲ್ಲಿ 11-10ರ ಅಂತರದಲ್ಲಿದ್ದ ಸಿಂಧು ಸೂಪರ್ ಕಮ್ಬ್ಯಾಕ್ ಮಾಡಿ ಮೊದಲ ಸೆಟ್ ಪಡೆದುಕೊಂಡರು. ಎರಡನೇ ಸೆಟ್ನಲ್ಲೂ ಮಧ್ಯದಲ್ಲಿ 2 ಅಂಕಗಳ ಮುನ್ನಡೆ ಸಾಧಿಸಿದ್ದರು.
ಆದರೆ, ಜಪಾನ್ ಶಟ್ಲರ್ ಅದ್ಭುತ ಕಮ್ಬ್ಯಾಕ್ ಮಾಡಿ 2ನೇ ಸೆಟ್ ಗೆದ್ದು 1-1ರಲ್ಲಿ ಸಮಬಲ ಸಾಧಿಸಿದರು. ಆದರೆ, 3ನೇ ಗೇಮ್ನಲ್ಲಿ ಸಿಂಧುಗೆ ಜಪಾನ್ ಆಟಗಾರ್ತಿಗೆ ಕಠಿಣ ಪೈಪೋಟಿ ನೀಡಲು ವಿಫಲರಾದರು. ಕಳೆದ ವಾರ ಸಿಂಧು ಡೆನ್ಮಾರ್ಕ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ಸ್ನಲ್ಲೇ ಸೋತು ಹೊರ ಬಿದ್ದಿದ್ದರು.
ಇದನ್ನು ಓದಿ:ಶಾಹೀನ್ ಅಫ್ರಿದಿಯಂತೆ ಭಾರತದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡುವ ವಿಶ್ವಾಸವಿದೆ : ಟ್ರೆಂಟ್ ಬೌಲ್ಟ್