'ಸಿಲ್ಲಿ ಲಲ್ಲಿ' ಖ್ಯಾತಿಯ ರವಿಶಂಕರ್ ಗೌಡ ಬಹಳ ವರ್ಷಗಳ ನಂತರ ಮಜಾಟಾಕೀಸ್ ಮೂಲಕ ಕಿರುತೆರೆಗೆ ಮತ್ತೆ ವಾಪಸಾಗುತ್ತಿದ್ದಾರೆ ಎಂಬ ವಿಚಾರ ಕಿರುತೆರೆ ವೀಕ್ಷಕರಿಗೆ ಖುಷಿ ನೀಡಿತ್ತು. ಇದರ ಬೆನ್ನಲ್ಲೇ ರಾಣಿಯಾಗಿ ಮೋಡಿ ಮಾಡಿದ್ದ ಶ್ವೇತಾ ಚೆಂಗಪ್ಪ ಕೂಡಾ ಮತ್ತೆ ಕಿರುತೆರೆಗೆ ವಾಪಸಾಗಿದ್ದು ಅವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಕಳೆದ ವರ್ಷ ಶ್ವೇತಾ ಚೆಂಗಪ್ಪ ಮಗುವಿಗೆ ಜನ್ಮ ನೀಡಿದ್ದರಿಂದ ಬಣ್ಣದ ಲೋಕದಿಂದ ದೂರವಿದ್ದರು. ಮಗ ಜಿಯಾನ್ ಅಯ್ಯಪ್ಪ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದ ಶ್ವೇತಾ ಚೆಂಗಪ್ಪ ಇದೀಗ ಮತ್ತೆ ರಾಣಿಯಾಗಿ ಮಜಾ ಟಾಕೀಸ್ಗೆ ವಾಪಸ್ ಬಂದಿದ್ದಾರೆ. ಮಜಾ ಟಾಕೀಸ್ ಹೊಸ ಸೀಸನ್ ಇತ್ತೀಚೆಗಷ್ಟೇ ಆರಂಭವಾಗಿತ್ತು. ಅದರೆ ಅದರಲ್ಲಿ ಶ್ವೇತಾ ಕಾಣಿಸಿಕೊಂಡಿರಲಿಲ್ಲ. ಅವರ ಜಾಗಕ್ಕೆ ಬೇರೆ ಯಾರೂ ಬಂದಿರಲಿಲ್ಲ. ಆದರೀಗ ಶ್ವೇತಾ ಅವರೇ ತಮ್ಮ ಜಾಗಕ್ಕೆ ವಾಪಸ್ ಬಂದಿದ್ದಾರೆ. ಮಜಾ ಟಾಕೀಸ್ ಮುಂದಿನ ಸಂಚಿಕೆಗಳ ಹೊಸ ಪ್ರೋಮೋವನ್ನು ಸೃಜನ್ ಲೋಕೇಶ್ ಹಂಚಿಕೊಂಡಿದ್ದು ಅದರಲ್ಲಿ ಶ್ವೇತಾ ಚೆಂಗಪ್ಪ ಕೂಡಾ ಇದ್ದಾರೆ. ತಾಯ್ತನವನ್ನು ಸಂತಸದಿಂದ ಅನುಭವಿಸುತ್ತಿರುವ ಶ್ವೇತಾ ಇತ್ತೀಚೆಗಷ್ಟೇ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ತಮ್ಮ ತಾಯಿಯ ಹೆಸರಿನಲ್ಲಿ ಇತ್ತೀಚೆಗಷ್ಟೇ ಕ್ಲೋತ್ ಬ್ಯ್ರಾಂಡ್ ಆರಂಭಿಸಿದ್ದರು.