ETV Bharat / sitara

ಅಭಿಮಾನಿಗಳಿಗೆ Good News:​ ವರ್ಷದ ಬಳಿಕ ಕ್ಯಾಮರಾ ಮುಂದೆ ಬಂದ ಮೇಘನಾ ರಾಜ್ - Meghana Raj get back to acting as junior chiru turns 9 months

ಜೂನಿಯರ್ ಚಿರು ಹುಟ್ಟಿದ ಮೇಲೆ ಅವನ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದ ಮೇಘನಾ ರಾಜ್, ಇದೀಗ ಮತ್ತೆ ಶೂಟಿಂಗ್​ಗೆ ಮರಳಿದ್ದಾರೆ.

ಮೇಘನಾ ರಾಜ್
ಮೇಘನಾ ರಾಜ್
author img

By

Published : Jul 23, 2021, 12:08 PM IST

ಚಿರಂಜೀವಿ ಸರ್ಜಾ ನಿಧನದ ನಂತರ ನಟಿ ಮೇಘನಾ ರಾಜ್‌ ತೆರೆಮೇಲೆ ಕಾಣಿಸಿಕೊಳ್ಳದೇ ತುಂಬ ಸಮಯವಾಗಿತ್ತು. ಮಗ ಹುಟ್ಟಿದ ಮೇಲೆ ಅವನ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದರು. ಇದೀಗ ಮಗ ಜೂ. ಚಿರುಗೆ 9 ತಿಂಗಳು ತುಂಬಿವೆ. ಈ ಸಂದರ್ಭದಲ್ಲೇ ಗುಡ್ ನ್ಯೂಸ್​ವೊಂದನ್ನು ನೀಡಿದ್ದಾರೆ.

ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಚಿತ್ರರಂಗಕ್ಕೆ ಮಾತ್ರವಲ್ಲದೇ ಮೇಘನಾ ರಾಜ್ ಕುಟುಂಬಕ್ಕೆ ಸಹ ದೊಡ್ಡ ಆಘಾತ ಉಂಟು ಮಾಡಿತ್ತು. ಈ ನೋವಿನ ಮಧ್ಯೆಯೇ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕಳೆದ ಒಂದು ವರ್ಷ ಜೂನಿಯರ್ ಚಿರು ಆರೈಕೆಯಲ್ಲೇ ಸಮಯ ಕಳೆದಿದ್ದ ಮೇಘನಾ ರಾಜ್, ಇದೀಗ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ.

ಮೇಘನಾ ರಾಜ್
ಫೋಟೋ ಶೇರ್ ಮಾಡಿದ ಮೇಘನಾ ರಾಜ್

ಜೂನಿಯರ್ ಚಿರು ತೊಟ್ಟಿಲು ಶಾಸ್ತ್ರದ ಸಮಯದಲ್ಲಿ ಯಾವುದೇ ಕಾರಣಕ್ಕೂ ನಟನೆ ಬಿಡೋದಿಲ್ಲ ಎಂದು ಮೇಘನಾ ರಾಜ್ ಸ್ಪಷ್ಟಪಡಿಸಿದ್ದರು. ಜೂ. ಚಿರುಗೆ ಇದೀಗ 9 ತಿಂಗಳು ತುಂಬಿದ್ದು, ಅದರಂತೆ ಇದೀಗ ಮೇಘನಾ ನಟನೆಗೆ ಮರಳಿದ್ದಾರೆ.

ಹೌದು, ಶೂಟಿಂಗ್​ನಲ್ಲಿ ಭಾಗಿಯಾಗಿ, ಸ್ಕ್ರಿಪ್ಟ್ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿರುವ ಮೇಘನಾ, ಜ್ಯೂನಿಯರ್ ಚಿರುಗೆ 9 ತಿಂಗಳು ಆಯಿತು. ಒಂದು ವರ್ಷದ ಬಳಿಕ ನಾನು ಮತ್ತೆ ಕ್ಯಾಮರಾ ಮುಂದೆ ಬಂದಿದ್ದು, ಈ ಕ್ಷಣವನ್ನು ಸೆಲೆಬ್ರೇಟ್ ಮಾಡುತ್ತಿದ್ದೇನೆ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮೇಘನಾ ರಾಜ್
ಮೇಘನಾ ರಾಜ್

ಆರಂಭದಲ್ಲಿ ಮಲಯಾಳಂ ಭಾಷೆಯ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಂಡ ನಟಿ ಮೇಘನಾ, ನಂತರ ತೆಲುಗು - ತಮಿಳಿನಲ್ಲೂ ನಟಿಸಿದ್ದಾರೆ. 'ರಾಜಾಹುಲಿ' ನಂತರ ಕನ್ನಡದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅವರು ಕೊನೆಯ ಬಾರಿಗೆ ತೆರೆಮೇಲೆ ಕಾಣಿಸಿಕೊಂಡಿದ್ದು 'ಕುರುಕ್ಷೇತ್ರ' ಸಿನಿಮಾದಲ್ಲಿ. ಅದರ ಜೊತೆಗೆ 'ಬುದ್ಧಿವಂತ 2' ಮತ್ತು 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಸದ್ಯ ಆ ಸಿನಿಮಾಗಳು ತೆರೆಕಂಡಿಲ್ಲ. ಸದ್ಯಕ್ಕೆ ಯಾವ ಸಿನಿಮಾದ ಶೂಟಿಂಗ್‌ನಲ್ಲಿ ಮೇಘನಾ ಬ್ಯುಸಿ ಆಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.