ETV Bharat / sitara

ಮನಸ್ಸಿನ ತಾಕಲಾಟ, ಪರದಾಟಗಳ ಸುತ್ತ ಸುತ್ತುವ 'ತ್ರಯಂಬಕಂ' - undefined

'ತ್ರಯಂಬಕಂ'
author img

By

Published : Apr 19, 2019, 3:25 PM IST

ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ರಾಘವೇಂದ್ರ ರಾಜ್​ಕುಮಾರ್ ಅಭಿನಯಿಸಿರುವ 'ತ್ರಯಂಬಕಂ' ಸಿನಿಮಾ ಇಂದು ಬಿಡುಗಡೆಯಾಗಿದೆ. ದಯಾಳ್​ ಮತ್ತೊಮ್ಮೆ ಪ್ರೇಕ್ಷಕರ ಮನಸಿಗೆ ಕನ್ನ ಹಾಕಿದ್ದಾರೆ.

ಮೊದಲಾರ್ಧ ಅವರು ಮನಸ್ಸಿಗೆ ಹೆಚ್ಚು ಕೆಲಸ ಕೊಟ್ಟು ಆನಂತರ ಉದ್ವವ ಆದ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರ ನೀಡುತ್ತಾರೆ. ಅವರ ‘ಆ ಕರಾಳ ರಾತ್ರಿ’ ಯ ಶಾರ್ಪ್ ತಂತ್ರ ಇಲ್ಲಿ ಮೈನಸ್ ಆಗಿದೆ. ಕೆಲವೊಂದು ದೃಶ್ಯಗಳು ಇಷ್ಟವಾಗದಿದ್ದರೂ ಅವರ ತಂತ್ರಗಾರಿಗೆ ವಿರಾಮದ ನಂತರ ಆರಾಮವಾಗಿ ಸಾಗುತ್ತದೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡ ಪಾತ್ರಗಳು ಕೂಡಾ ಚೆನ್ನಾಗಿ ಸಹಕರಿಸಿವೆ. 5000 ವರ್ಷದ ಹಿಂದಿನ ನವಪಾಷಾಣ ಹಾಗೂ ಶಿವಲಿಂಗ ಚಿತ್ರದ ಕೇಂದ್ರಬಿಂದು.

ಶಿವರುದ್ರಯ್ಯನಿಗೆ (ರಾಘವೇಂದ್ರ ರಾಜಕುಮಾರ್) ಸದಾ ಮಗಳ ಬಗ್ಗೆ ಚಿಂತೆ. ಮಗಳಿಗೆ ಅಪಘಾತ ಆಗಿ ಮರಣ ಹೊಂದಿರುವ ಕನಸು ಹೆಚ್ಚಾಗಿ ಬರುವುದೇ ಇದಕ್ಕೆ ಕಾರಣ. ಇದರೊಂದಿಗೆ ಆ ಕನಸಲ್ಲಿ ಬರುವ ಕೆಲವೊಂದು ವ್ಯಕ್ತಿಗಳು ನಿಜಜೀವನದಲ್ಲಿ ಅವರ ಕಣ್ಣ ಮುಂದೆ ಬರುತ್ತಿರುತ್ತಾರೆ. ಹೀಗೆಲ್ಲಾ ಜರುಗುವುದಕ್ಕೆ ಬ್ರೈನ್ ಸ್ಟ್ರೋಕ್ ಕಾರಣ ಆದರೆ, ನಿಮ್ಮ ಕನಸು ನಿಜ ಎಂದು ಡಾಕ್ಟರ್ ಹೇಳಿದಾಗ ಪ್ರೇಕ್ಷಕ ನಿಜಕ್ಕೂ ಕಂಗಾಲಾಗುತ್ತಾನೆ.

ತಂದೆಯ ಈ ಸಂದಿಗ್ಧ ಪರಿಸ್ಥಿತಿಯನ್ನು ಪುತ್ರಿ ನಮನ ( ಅನುಪಮಾ ಗೌಡ) ಹಾಗೂ ಪ್ರಿಯಕರ ಓಂಕಾರ್​ (ರೋಹಿತ್​​) ಹೇಗೆ ಬಗೆಹರಿಸುತ್ತಾರೆ..? ಶಿವರುದ್ರಯ್ಯ ಕಾಣುವ ಕನಸುಗಳಿಂದ ಮುಕ್ತಿ ಹೊಂದುತ್ತಾರಾ ಎಂಬುದು ಸಸ್ಪೆನ್ಸ್. ಶಿವರುದ್ರಯ್ಯನ ಪಾತ್ರ ರಾಘವೇಂದ್ರ ರಾಜಕುಮಾರ್ ಅವರಿಗೆ ಹೇಳಿ ಮಾಡಿಸಿದಂತಿದೆ. ಅನುಪಮ ಗೌಡ ನಟನೆ ಕೂಡಾ ಚೆನ್ನಾಗಿದೆ. ಇನ್ನು ರೋಹಿತ್ ಪತ್ತೇದಾರಿ ಓಂಕಾರ್ ಆಗಿ ಗಮನ ಸೆಳೆಯುತ್ತಾರೆ. ಸುಂದರ್ ವೀಣ, ಶಿವಮಣಿ ಹಾಗೂ ಶ್ರುತಿ ನಾಯಕ್ ಪಾತ್ರಗಳು ಕೂಡಾ ಗುಡ್​​​.

ಸಂದೀಪ್ ಈ ಸಿನಿಮಾವನ್ನು ನಿರ್ಮಿಸಿದ್ಧಾರೆ. ಚಿತ್ರದ ಸಂಕಲನ ಕಾರ್ಯವನ್ನು ಇನ್ನಷ್ಟು ಬಿಗಿಯಾಗಿ ನಿರ್ವಹಿಸಬಹುದಿತ್ತು. ಗಣೇಶ್ ನಾರಾಯಣ್ ಅವರ ಸಂಗೀತ ಮನಸಿಗೆ ನಾಟುತ್ತದೆ. ರಾಕೇಶ್ ಅವರ ಛಾಯಾಗ್ರಹಣ ಕೆಲಸ ಅಚ್ಚುಕಟ್ಟಾಗಿದೆ. ಇದು ನಿಜಕ್ಕೂ ನಿಮ್ಮನ್ನು ಕಾಡುವ ಸಿನಿಮಾ. ಹೃದಯಕ್ಕೆ ಹತ್ತಿರವಾಗುವ ಸಿನಿಮಾವನ್ನು ನೀವು ಖಂಡಿತ ನೋಡಬಹುದು.

---------- Forwarded message ---------
From: pravi akki <praviakki@gmail.com>
Date: Fri, Apr 19, 2019, 9:45 AM
Subject: Fwd: TRAYAMBAKAM REVIEW
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Fri, Apr 19, 2019, 7:26 AM
Subject: TRAYAMBAKAM REVIEW
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ಕನ್ನಡ ಚಿತ್ರ ತ್ರಯಂಬಕಮ್ ವಿಮರ್ಶೆ

ಮನಸಿನ ತಾಕಲಾಟ ಹಾಗೂ ಪರದಾಟ!

ಆವದಿ 130 ನಿಮಿಷ ರೇಟಿಂಗ್ 3/5

ಚಿತ್ರ – ತ್ರಯಂಬಕಮ್, ನಿರ್ಮಾಪಕ – ಸಂದೀಪ್, ನಿರ್ದೇಶನ – ದಯಾಳ್ ಪದ್ಮನಾಭನ್, ಸಂಗೀತ – ಗಣೇಶ್ ನಾರಾಯಣ್, ಛಾಯಾಗ್ರಹಣ – ರಾಕೇಶ್, ತಾರಾಗಣ – ರಾಘವೇಂದ್ರ ರಾಜಕುಮಾರ್, ಅನುಪಮ ಗೌಡ, ರೋಹಿತ್, ಶಿವಮಣಿ, ಶ್ರುತಿ ನಾಯಕ್, ಸುಂದರ್ ವೀಣ ಹಾಗೂ ಇತರರು.

ಕನ್ನಡ ಪ್ರೇಕ್ಷಕನ ಮನಸಿಗೆ ಮತ್ತೊಮ್ಮೆ ಖನ್ನ ಹಾಕಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್. ಅರ್ಥಾತ್ ಅಷ್ಟೊಂದು ಕಾಡುವ ಸಿನಿಮಾ ಮಾಡಿದ್ದಾರೆ. ಮೊದಲ ಅರ್ಧ ಅವರು ಮನಸಿಗೆ ಹೆಚ್ಚು ಕೆಲಸ ಕೊಟ್ಟು ಆನಂತರ ಉಧ್ಭವ ಆದ ಪ್ರಶ್ನೆಗಳಿಗೆ ಉತ್ತರ ಸಮಂಜಸವಾಗಿ ನೀಡುತ್ತಾರೆ. ಮೊದಲ ಅರ್ಧದಲ್ಲೇ ಸ್ವಲ್ಪ ವೇಘ ಹೆಚ್ಚಿಕೊಂಡಿದ್ದಾರೆ ಸಿನಿಮಾಕ್ಕೆ ಇನ್ನಷ್ಟು ಶಕ್ತಿ ಬರುವುದಿತ್ತು.

ಹಾಗೆ ನೋಡಿದರೆ ದಯಾಳ್ ಪದ್ಮನಾಭನ್ ಅವರ ಆ ಕರಾಳ ರಾತ್ರಿಯ ಶಾರ್ಪ್ ತಂತ್ರ ಇಲ್ಲಿ ಮೈನಸ್ ಆಗಿದೆ. ಮಾನಸಿಕ ಅಸ್ವಸ್ಥ ತುಂಬಿದ ವ್ಯಕ್ತಿ ಎಂದು ಒಂದೆರಡು ಸನ್ನಿವೇಶಗಳಲ್ಲಿ ಬಣ್ಣಿಸಿದರೆ ಪ್ರೇಕ್ಷಕ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದ್ದಾನೆ. ಅದನ್ನೇ ಇಂಟರ್ವಲ್ ವರೆಗೂ ಎಳದಾಡಿದರೆ ಇರುಸು ಮುರುಸು ಪಾತ್ರಗಳಿಗೆ ಅಷ್ಟೇ ಅಲ್ಲ ಪ್ರೇಕ್ಷಕನಿಗೂ ಆಗುವುದು ಸಹಜ. ಇದು ಬಿಟ್ಟರೆ ದಯಾಳ್ ಅವರ ತಂತ್ರಗಾರಿಗೆ ವಿರಾಮದ ನಂತರ ಆರಾಮವಾಗಿ ಸಾಗುತ್ತದೆ. ಅದಕ್ಕೆ ಅವ್ರು ಆಯ್ಕೆ ಮಾಡಿಕೊಂಡ ಪಾತ್ರಗಳು ಸಹ ಚನ್ನಾಗಿಯೇ ಸಹಕರಿಸಿದೆ. 5000 ವರ್ಷದ ಹಿಂದಿನ ನವಪಾಶನ ಹಾಗೂ ಶಿವಲಿಂಗ ಇಲ್ಲಿಯ ಕೇಂದ್ರ ಬಿಂದು. 

ಅವರು ಶಿವರುದ್ರಯ್ಯ (ರಾಘವೇಂದ್ರ ರಾಜಕುಮಾರ್). ಸದಾ ಮಗಳ ಬಗ್ಗೆ ಚಿಂತೆ. ಕಾರಣ ಅವರ ಕನಸಿನಲ್ಲಿ ಮಗಳಿಗೆ ಅಪಘಾತ ಆಗಿ ಮರಣ ಹೊಂದಿರುವ ದೃಶ್ಯ. ಅದರ ಜೊತೆಗೆ ಆ ಸಮಯಕ್ಕೆ ಸಂಬಂದ ಪಟ್ಟ ವ್ಯಕ್ತಿಗಳು ಅವರಿಗೆ ನಿಜ ಜೀವನದಲ್ಲಿ ಕಣ್ಣ ಮುಂದೆ ಬರುತ್ತಾರೆ. ಇದು ಪಾರ್ಶ್ವ ನೆನಪಿನ ಶಕ್ತಿ ಲಾಸ್ – ಸಣ್ಣ ಬ್ರೈನ್ ಸ್ತ್ರೋಕ್ ಎಂದು ವೈಧ್ಯರು ಪರಿಗಣಿಸಿ. ನಿಮ್ಮ ಕನಸಿನಲ್ಲಿ ಬಂದಿರುವುದೆಲ್ಲ ನಿಜವೇ ಶಿವರುದ್ರಯ್ಯನವರೆ ಎಂದಾಗ ಚಿತ್ರಮಂದಿರದಲ್ಲಿ ಪ್ರೇಕ್ಷಕನು ದಂಗಾಗುತ್ತಾನೆ.

ಅಸಲಿ ವಿಚಾರ ಏನಪ್ಪಾ ಅಂದರೆ ಶಿವರುದ್ರಯ್ಯ ಅವರಿಗೆ ಗಮನ ಹಾಗೂ ನಮನ (ಅನುಪಮ ಗೌಡ) ಅವಳಿ ಮಕ್ಕಳು. ಗಮನ ಕೇಂದ್ರ ಪುರಾತತ್ವ ಇಲಾಖೆಯಲ್ಲಿ ಒಂದು ದೊಡ್ಡ ಅನ್ವೇಷಣೆ ಮಾಡಿ ಅದರಿಂದ ಆಗುವ ಪ್ರಯೋಜನ ಬಗ್ಗೆ ವರದಿ ಸಿದ್ದ ಮಾಡಿರುತ್ತಾಳೆ. ಗಮನ ಅವರ ಗಮನ ಇದು ಸಾರ್ವಜನಿಕರಿಗೆ ಉಪಯೋಗ ಆಗಬೇಕು. ಅದೇ ನವಪಾಶನ ಏಳು ಶಕ್ತಿಗಳಿಂದ ಕ್ರೂಡಿಕರಿಸಿ ಅದನ್ನು ಶಿವಲಿಂಗದ ಶಕ್ತಿಯೊಂದಿಗೆ ಪ್ರೋಕ್ಷಣೆ ಮಾಡಿದರೆ ಎಂತಹ ರೋಗಕ್ಕೂ ಮದ್ದು ಅದು. ಇದು ವೈಧ್ಯಕಿಯ ಪ್ರಪಂಚಕ್ಕೆ ಒಂದು ದೊಡ್ಡ ಪೆಟ್ಟು. ಕಾರಣ ಅವರ ವ್ಯವಹಾರ ಬಂದ್ ಆಗುವ ಸಾಧ್ಯತೆ ಇದೆ. ಇದನ್ನು ಗಮನ ಅವರಿಂದ ದೂರ ಪಡಿಸಬೇಕು ಎಂದು ಷಡ್ಯಂತ್ರ ಮಾಡಲಾಗುವುದು. ಅದರ ಪರಿಣಾಮದಲ್ಲಿ ಗಮನ ಸಾವು ಸಹ ಸಂಭವಿಸುವುದು. ಅದನ್ನು ಶಿವರುದ್ರಯ್ಯ ಅವರು ಕಣ್ಣಾರೆ ನೋಡಿರುತ್ತಾರೆ. ಆ ಕ್ಷಣವೇ ಅವರ ಮನಸಿಗೆ ಅಘಾತ ಸಹ ಆಗುತ್ತದೆ. ಗಮನ ಸಾಯುವಾಗ ಒಂದು ಶಬ್ದ ಉಚ್ಛಾರಣೆ ಅಸ್ಪಷ್ಟವಾಗಿ ಸಹ ಮಾಡಿರುತ್ತಾಳೆ. ಅದು ಶಿವರುದ್ರಯ್ಯ ಅವರ ಮನಸಿನಲ್ಲಿ ಕೊರೆಯುತ್ತಿರುವುದು.

ವಾಸ್ತವಕ್ಕೆ ಬಂದರೆ ಶಿವರುದ್ರಯ್ಯ ಅವರ ಮತ್ತೊಬ್ಬ ಮಗಳು ನಮನ ಪತ್ರಕರ್ತೆ. ಅಪ್ಪನ ಈ ಸಂದಿಗ್ದ ಪರಿಸ್ಥಿತಿಯನ್ನು ಪ್ರಿಯಕ ಓಂಕಾರ್ (ರೋಹಿತ್) ಸಹಾಯದಿಂದ ಬಗೆಹರಿಸಲು ಮುಂದಾಗುತ್ತಾಳೆ. ಓಂಕಾರ್ ಹೇಳಿ ಕೇಳಿ ಒಬ್ಬ ಪತ್ತೇದಾರಿ. ಈಗ ಮುಖ್ಯ ಆಗಿರುವುದು ಗಮನ ಸಾಯುವಾಗ ಹೇಳಿದ ಒಂದು ಪದ. ಅದಕ್ಕೆ ಶಿವರುದ್ರಯ್ಯ ಅವರಿಗೆ ಹೋಲಿಕೆ ಆಗುವುದು ಒಂದು ಸಂದರ್ಭ ಇಂದ. ಆ ಸಂದರ್ಭ ಏನು, ಅಲ್ಲಿಂದ ಓಂಕಾರ್, ನಮನ, ಶಿವರುದ್ರಯ್ಯ ಅವರ ಕ್ರಮ ಏನು ಎಂಬುದನ್ನೂ ನೀವು ಚಿತ್ರಮಂದಿರದಲ್ಲೇ ನೋಡಬೇಕು. ಅದೇ ಚಿತ್ರದ ಸಸ್ಪೆನ್ಸ್ ಸಹ.

ಶಿವರುದ್ರಯ್ಯನ ಪಾತ್ರ ರಾಘವೇಂದ್ರ ರಾಜಕುಮಾರ್ ಅವರಿಗೆ ಹೇಳಿ ಮಾಡಿಸಿದ ಹಾಗಿದೆ. ದ್ವಂದ್ವ ಮನಸನ್ನು ಹೊರ ಹಾಕುವ ಪಾತ್ರ. ಅವರ ಹಾವ ಭಾವ ಚಲನ ವಲನ ಅವರ ವಯಕ್ತಿಕ ಜೀವನಕ್ಕು ಹೊಂದಾಣಿಕೆ ಆಗುತ್ತದೆ. ಅನುಪಮ ಗೌಡ ಎಲ್ಲರನ್ನು ಮೀರಿಸುವ ಪಾತ್ರ. ಲವಲವಿಕೆ, ಭಾವನೆ ಹಾಗೂ ಚಿನಕುರಿಳಿಯಂತೆ ಪುಟಿಯುವ ಪಾತ್ರ ಇವರದು. ರೋಹಿತ್ ಪತ್ತೇದಾರಿ ಓಂಕಾರ್ ಆಗಿ ಗಮನ ಸೆಳೆಯುತ್ತಾರೆ.

ಸುಂದರ್ ವೀಣ, ಶಿವಮಣಿ ಹಾಗೂ ಶ್ರುತಿ ನಾಯಕ್ ಪಾತ್ರಗಳು ಸರಿಯಾದ ಆಯ್ಕೆ. ಚಿತ್ರದ ಸಂಕಲನ ಇನ್ನಷ್ಟು ಬಿಗಿಯಾಗಿ ಕೆಲವ ನಿರ್ವಹಿಸಬಹುದಿತ್ತು.

ಗಣೇಶ್ ನಾರಾಯಣ್ ಅವರ ಹಿನ್ನಲೆ ಜೊತೆ ಮೊದ ಮೊದಲ....ಹಾಡು ಮತ್ತು ಒಂದು ಭಾವನಾತ್ಮಕ ಗೀತೆ ಅಂಗೈಲ್ಲಿ ನಿನ್ನ ಅಂಗಾಲನ್ನು...ನಿನ್ನ ತೊಳಲ್ಲಿ ಮಗುವಾದರೆ ಚಂದ....ಮನಸಿಗೆ ನಾಟುತ್ತದೆ. ರಾಕೇಶ್ ಅವರ ಛಾಯಾಗ್ರಹಣ ಕೆಲಸ ಅಚ್ಚುಕಟ್ಟಾಗಿದೆ.

ಇದು ಕಾಡುವ ಸಿನಿಮಾ, ಹೃದಯಕ್ಕೆ ಹತ್ತಿರವಾಗುವ ಸಿನಿಮಾ, ಇಂತಹ ಪರಿಸ್ಥಿತಿ ಸಮಾಜದಲ್ಲಿ ಕಂಡಿರಲುಬಹುದು. ಹೋಗಿ ಬನ್ನಿ ಈ ತ್ರಯಂಬಕಮ್ ಸಿನಿಮಾಕ್ಕೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.