ETV Bharat / sitara

ಯಾವ ಹೀರೋಗಳು ನನಗೆ ಡೇಟ್ಸ್ ಕೊಡುತ್ತಿಲ್ಲ...'ವೀರಮದಕರಿ' ನಿರ್ಮಾಪಕ ದಿನೇಶ್ ಗಾಂಧಿ ನೇರ ಆರೋಪ..!

author img

By

Published : Jun 21, 2019, 12:33 PM IST

ನನ್ನ ಬಳಿ 8 ಸ್ಕ್ರಿಪ್ಟ್​ಗಳಿವೆ, ಹೀರೋಗಳ ಮನೆ ಬಾಗಿಲಿಗೆ ಅಲೆಯುತ್ತಿದ್ದರೂ ಯಾವ ಹೀರೋ ಕೂಡಾ ನನಗೆ ಡೇಟ್ಸ್ ಕೊಡುತ್ತಿಲ್ಲ. ಈಗ ಹೀರೋಗಳು ಹೇಳಿದ ಹಾಗೆ ಕೇಳಬೇಕು ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು 'ವೀರಮದಕರಿ' ಸಿನಿಮಾ ನಿರ್ಮಾಪಕ ದಿನೇಶ್ ಎಸ್​. ಗಾಂಧಿ ಆರೋಪಿಸಿದ್ದಾರೆ.

ದಿನೇಶ್ ಗಾಂಧಿ

ಡಾ. ರಾಜ್​​​ಕುಮಾರ್ ಕಾಲದಲ್ಲಿ, ನಿರ್ಮಾಪಕರನ್ನು ಅನ್ನದಾತರು, ಹಾಗೂ ಲಕ್ಷ್ಮಿಪುತ್ರರು ಎಂದು ಕರೆಯುತ್ತಿದ್ದರು. ನಿರ್ಮಾಪಕರ ಮಾತನ್ನು ಎಲ್ಲರೂ ಕೇಳುತ್ತಿದ್ದರು. ಆದರೆ ಈಗ ಎಲ್ಲಾ ಉಲ್ಟಾ ಆಗಿದೆ. ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದೇನೆ ಎಂದು ನಿರ್ಮಾಪಕ ದಿನೇಶ್ ಗಾಂಧಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಿರ್ಮಾಪಕ ದಿನೇಶ್ ಗಾಂಧಿ

ಸುದೀಪ್ ಅಭಿನಯದ 'ವೀರಮದಕರಿ' ಸಿನಿಮಾ ಅವರಿಗೆ ಒಂದು ದೊಡ್ಡ ಬ್ರೇಕ್ ನೀಡಿತ್ತು. ಈ ಸಿನಿಮಾಕ್ಕೆ ಒಳ್ಳೆ ಹೆಸರು ಸಿಕ್ಕರೂ ಲಾಭ ಮಾತ್ರ ಆಗಲಿಲ್ಲ. ಸುದೀಪ್ ಹೇಳಿದಂತೆ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ ದಿನೇಶ್. ನಂತರ ರವಿಚಂದ್ರನ್ ಅವರನ್ನು ಭೇಟಿ ಮಾಡಿದೆ. ಅವರು 4 ವರ್ಷಗಳು ಯಾವುದೇ ಸಿನಿಮಾ ಮಾಡಲಿಲ್ಲ. ಆದರೂ ಅವರನ್ನು ಹಾಕಿಕೊಂಡು ಅವರು ಕೇಳಿದಷ್ಟು ಹಣ ನೀಡಿ 'ಹೂವು' ಹಾಗೂ 'ಮಲ್ಲಿಕಾರ್ಜುನ' ಎಂಬ ಸಿನಿಮಾ ಮಾಡಿದೆ ಇದರಿಂದ ಕೂಡಾ ನಾಲ್ಕು ಕೋಟಿ ರೂಪಾಯಿ ಹಣ ಕಳೆದುಕೊಂಡೆ ಎಂದು ದಿನೇಶ್ ಕ್ರೇಜಿಸ್ಟಾರ್ ಮೇಲೆ ಆರೋಪ ಮಾಡಿದ್ದಾರೆ.

veera madakari
'ವೀರಮದಕರಿ'

ತೆಲುಗಿನ ಸೂಪರ್​ ಹಿಟ್ ಸಿನಿಮಾ 'ಛತ್ರಪತಿ' ಸಿನಿಮಾವನ್ನು ಮಾಡಲು ರೀಮೇಕ್ ರೈಟ್ಸ್ ಪಡೆದು ದರ್ಶನ್ ಅವರನ್ನು ಭೇಟಿ ಮಾಡಿದರೂ ಡೇಟ್ಸ್ ಸಿಗಲಿಲ್ಲ. ನಂತರ ಸಿದ್ದಾರ್ಥ್ ಎಂಬುವವರನ್ನು ಹಾಕಿಕೊಂಡು ಸಿನಿಮಾ ಮಾಡಿ ಕೈ ಸುಟ್ಟುಕೊಂಡೆ. ಏನಾದರೂ ಗೆಲ್ಲಲೇಬೇಕು ಎಂಬ ಹಠದಿಂದ ಹಿಂದಿಯ ಸೂಪರ್ ಹಿಟ್ ಸಿನಿಮಾ 'ದಬಾಂಗ್​' ರೈಟ್ಸ್​​ ಸ್ವತ: ಸಲ್ಮಾನ್ ಖಾನ್ ಬಳಿ ಪಡೆದುಬಂದೆ. ಜೊತೆಗೆ ಪವರ್ ಕಲ್ಯಾಣ್ ನಟಿಸಿದ್ದ 'ಗಬ್ಬರ್​ ಸಿಂಗ್' ರೈಟ್ಸ್ ಕೂಡಾ ಪಡೆದೆ. ಆದರೆ, ಎಲ್ಲಾ ಸ್ಟಾರ್​​ಗಳ ಮನೆಗೆ ಅಲೆದರೂ ಕಾಲ್​​ಶೀಟ್ ಸಿಗಲಿಲ್ಲ. ನಟ ಗಣೇಶ್ 'ಗಬ್ಬರ್​​ ಸಿಂಗ್​​' ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದರು. ಆದರೆ, ಆ ಸಿನಿಮಾ ಶುರುವಾಗಲೇ ಇಲ್ಲ.

chatrapati
'ಛತ್ರಪತಿ'

ಇಂದಿಗೂ ಹೀರೋಗಳನ್ನು ಡೇಟ್ಸ್ ಕೇಳುತ್ತಲೇ ಇದ್ದೇನೆ ಎಂದು ಸ್ಟಾರ್ ನಟರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 5 ವರ್ಷಗಳಿಂದ ಖಾಲಿ ಕುಳಿತಿದ್ದೇನೆ. ನನಗೂ ಹೆಂಡತಿ, ಮಕ್ಕಳು, ಖರ್ಚು ಇದೆ. ಸದ್ಯಕ್ಕೆ ಒಂದು ದೇವಸ್ಥಾನ ಕಟ್ಟಿಸುತ್ತಿದ್ದೇನೆ. ಆದರೆ, ಯಾವುದೇ ಕಾರಣಕ್ಕೂ ಸಿನಿಮಾ ಇಂಡಸ್ಟ್ರಿಯನ್ನು ಬಿಡುವುದಿಲ್ಲ. ಇಲ್ಲೇ ಇದ್ದು ಒಳ್ಳೆ ಸಿನಿಮಾಗಳನ್ನು ಮಾಡುತ್ತೇನೆ ಎಂದು ದಿನೇಶ್ ಗಾಂಧಿ ಹಠಕ್ಕೆ ಬಿದ್ದಿದ್ದಾರೆ.

hoo
'ಹೂ'

Intro:ಸುದೀಪ್ ನನಗೆ ಮೋಸ ಮಾಡಿದ್ರು! ಯಾವ ನಟನೂ ನನಗೆ ಡೇಟ್ಸ್ ಕೊಡ್ತಾ ಇಲ್ಲಾ!ವೀರಮದಕರಿ ಸಿನಿಮಾ ನಿರ್ಮಾಪಕನ ಅಳಲು!!

ಡಾ ರಾಜ್ ಕುಮಾರ್ ಕಾಲದಲ್ಲಿ, ನಿರ್ಮಾಪಕರನ್ನ ಅನ್ನದಾತರು, ಹಾಗು ಲಕ್ಷ್ಮೀ ಪುತ್ರರು ಅಂತಾ ಕರೆಯುತ್ತಿದ್ರು.. ಆ ಕಾಲದಲ್ಲಿ ಸಿನಿಮಾ ನಿರ್ಮಾಪಕರ ಮಾತನ್ನ, ನಟ, ನಟಿಯರು , ನಿರ್ದೇಶಕರಿಂದ ಹಿಡಿದು ಎಲ್ಲಾ ತಂತ್ರಜ್ಞಾನರು ಕೇಳುತ್ತಿದ್ರು..ಆದ್ರೆ ಇವತ್ತಿನ 2ಡಿ ಹಾಗು 3ಡಿ ಯುಗದಲ್ಲಿ, ಈಗ ಹೀರೋಗಳದ್ದೇ ಮೇಲುಗೈ ಎಂಬ ಮಾತು ಗಾಂಧಿನಗರದಲ್ಲಿ ಹೆಚ್ಚು ಕೇಳಿ ಬರುವ ಮಾತು..ಈ ಮಾತಿಗೆ ಪೂರಕವಾಗಿ ಇಲ್ಲೋಬ್ಬ ನಿರ್ಮಾಪಕ ಕೋಟಿ, ಕೋಟಿ ಹಣವನ್ನ ಕಳೆದುಕೊಂಡು ಬೀದಿಗೆ ಬಂದಿದ್ದಾರೆ...ಅವ್ರು ಒಂದು ಟೈಮಲ್ಲಿ ಕಿಚ್ಚ ಸುದೀಪ್ ಸಿನಿಮಾ ಕೆರಿಯರ್ ಗೆ, ಬಿಗ್ ಬ್ರೇಕ್ ಕೊಟ್ಟ ವೀರ ಮದಕರಿ ಸಿನಿಮಾದ ನಿರ್ಮಾಪಕ ದಿನೇಶ್ ಗಾಂಧಿ...

ಹೌದು..ದಿನೇಶ್ ಗಾಂಧಿ ಎಂಬ ಹೆಸ್ರು ಗಾಂಧಿನಗರಕ್ಕೆ ಹಾಗು ಫಿಲ್ಮ್ ಚೇಂಬರ್ ನಲ್ಲಿ ಹೆಚ್ಚು ಕೇಳಿ ಬರುವ ಹೆಸ್ರು..ಸದ್ಯ ದಿನೇಶ್ ಗಾಂಧಿ ಛತ್ರಪತಿ ಸಿನಿಮಾ ಆದ್ಮಲೇ, ಏನು ಮಾಡುತ್ತಿದ್ರು, ಯಾವ ಯಾವ ಸಿನಿಮಾಗಳಿಂದ ,ಎಷ್ಟೇಷ್ಟು ಹಣ ಕಳೆದುಕೊಂಡ್ರು, ಯಾಕೇ ಸುದೀಪ್ ನನಗೆ ಮೋಸ ಮಾಡಿದ್ರು ಅನ್ನೋದನ್ನ, ನಿರ್ಮಾಪಕ ದಿನೇಶ್ ಗಾಂಧಿ ಈಟಿವಿ ಭಾರತ್ ಕ್ಯಾಮರ ಮುಂದೆ ಬಿಚ್ಚಿಟ್ಟಿದ್ದಾರೆ..

ಸುದೀಪ್ ನನಗೆ ಮೋಸ ಮಾಡಿದ್ರು ನಿರ್ಮಾಪಕ ದಿನೇಶ್ ಗಾಂಧಿ ಅಳಲು!
2009ರಲ್ಲಿ, ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಬ್ಲಾಸ್ಟರ್ ಹಿಟ್ ಆದ ಸಿನಿಮಾ ವೀರ ಮದಕರಿ..ಈ ಸಿನಿಮಾವನ್ನ ನಿರ್ಮಾಪಕ ದಿನೇಶ್ ಗಾಂಧಿ, ಆವತ್ತಿನ ದಿನದಲ್ಲಿ ಬಹು ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿದ್ರು..ಕಿಚ್ಚ ಸುದೀಪ್ ಫಸ್ಟ್ ಟೈಮ್ ಖಾಕಿ ತೊಟ್ಟು ಅಬ್ಬರಿಸಿದ ,ವೀರ ಮದಕರಿ ಚಿತ್ರ ಸೆಂಚುರಿ ಬಾರಿಸುವ ಮೂಲ್ಕ ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿತ್ತು..ಈ ಚಿತ್ರದಿಂದ ಕಿಚ್ಚ ಸುದೀಪ್ ಗೆ ಬಿಗ್ ಹಿಟ್ ನೀಡಿತ್ತು..ಆದ್ರೆ ನಿರ್ಮಾಪಕ ದಿನೇಶ್ ಗಾಂಧಿ, ಈ ಚಿತ್ರದಿಂದ ನನಗೆ ಒಂದುವರೆ ಕೋಟಿ ರೂಪಾಯಿ ನಷ್ಟ ಆಗಿತ್ತು, ಅನ್ನೋ ಅಚ್ಚರಿ ವಿಷ್ಯವನ್ನ ದಿನೇಶ್ ಗಾಂಧಿ ಬಿಚ್ಚಿಟ್ರು..
ಬೈಟ್ : ದಿನೇಶ್ ಗಾಂಧಿ, ನಿರ್ಮಾಪಕ

ಅಷ್ಟು ದೊಡ್ಡ ಮಟ್ಟದಲ್ಲಿ ಸಕ್ಸರ್ ಕಂಡಿದ್ದ ವೀರ ಮದಕರಿ ಸಿನಿಮಾ ಲಾಸ್ ಆಗೋದಿಕ್ಕೆ ಕಾರಣ ಏನು ಅನ್ನೋದನ್ನ ದಿನೇಶ್ ಗಾಂಧಿ ಕೊಡುವ ಕಾರಣ ಇದು..ಸುದೀಪ್ ದಿನೇಶ್ ಗಾಂಧಿಗೆ ನಿಜವಾಗ್ಲೂ ಮಾತು ಕೊಟ್ಟು ತಪ್ಪಿದ್ರು, ಅನ್ನೋದ್ರು ಬಗ್ಗೆ ಸ್ವತಃ ಗಾಂಧಿ ಹೇಳೋದು ಹೀಗೆ..
ಬೈಟ್ : ದಿನೇಶ್ ಗಾಂಧಿ, ನಿರ್ಮಾಪಕ
ಕೇಳಿದ್ರೆಲ್ಲಾ, ನಿರ್ಮಾಪಕ ದಿನೇಶ್ ಗಾಂಧಿ, ಈಗ ಬಹುಭಾಷೆಯ ನಟನಾಗಿರೋ ಸುದೀಪ್ , ಆವತ್ತಿನ ಕಾಲದಲ್ಲಿ ಯಾವ ರೀತಿ ಮಾತು ತಪ್ಪಿದ್ರು ಅನ್ನೋದನ್ನ ಬಹಳ ಬೇಸರದಿಂದ ಹೇಳಿಕೊಂಡಿದ್ದು ಹೀಗೆ..

ಸುದೀಪ್ ನಂತ್ರ ನಿರ್ಮಾಪಕ ದಿನೇಶ್ ಗಾಂಧಿ ಕ್ರೇಜಿ ಸ್ಟಾರ್ ರವಿಚಂದ್ರನ್ ಆಕ್ಟ್ ಮಾಡಿರೋ, ಹೂವು ಹಾಗು ಮಲ್ಲಿಕಾರ್ಜುನಾ ಸಿನಿಮಾದಿಂದ ಕೋಟಿ ಕೋಟಿ ಹಣ ಕಳೆದುಕೊಂಡೆ ಅಂತಾ, ಯಾವುದೇ ಮುಲಾಜಿಲ್ಲದೆ ಹೇಳಿಕೊಂಡ್ರು...ರವಿಚಂದ್ರನ್ ಹೂವು ಸಿನಿಮಾ ಮಾಡೋದಿಕ್ಕೆ ಹೋಗಿ, ನಿರ್ಮಾಪಕ ದಿನೇಶ್ ಗಾಂಧಿ ನಾಲ್ಕು ಕೋಟಿ ಹಣ ಕಳೆದುಕೊಂಡೆ ಅಂತಾ ನೇರವಾಗಿ ಹೇಳ್ತಾರೆ..
ಬೈಟ್: ದಿನೇಶ್ ಗಾಂಧಿ, ನಿರ್ಮಾಪಕ

ಇನ್ನು ತೆಲುಗಿನಲ್ಲಿ, ಸೂಪರ್ ಹಿಟ್ ಆದ ಪ್ರಭಾಸ್ ಅಭಿನಯದ ಹಾಗು ರಾಜಮೌಳಿ ನಿರ್ದೇಶನದ, ಛತ್ರಪತಿ ಸಿನಿಮಾವನ್ನ ಕನ್ನಡದಲ್ಲಿ, ಮಾಡಬೇಕು ಅಂತಾ ಈ ಚಿತ್ರದ ರಿಮೇಕ್ ರೈಟ್ಸ್ ತೆಗೆದುಕೊಂಡು ಬರ್ತಾರೆ..ಆದ್ರೆ ಈ ಸಿನಿಮಾವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಬೇಕಿದ್ದ, ಛತ್ರಪತಿ ಚಿತ್ರವನ್ನ ಎಕೆ 47 ಚಿತ್ರವನ್ನ ಮಾಡಿದ್ದ, ಸಿದ್ಧಾಂತ್ ಆಕ್ಟ್ ಮಾಡ್ತಾರೆ..ಈ ಸಿನಿಮಾ ಕೂಡ ಅದ್ದೂರಿಯಾಗಿ ಮಾಡಬೇಕು ಅಂತಾ ನಿರ್ಮಾಪಕ ದಿನೇಶ್ ಗಾಂಧಿ, ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿ ಕೈ ಸುಟ್ಟಿಕೊಳ್ತಾರೆ..7 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾದ ಕನ್ನಡದ ಛತ್ರಪತಿ ಸಿನಿಮಾ ಗಳಿದ್ದು ಕೇಳಿದ್ರೆ ಶಾಕ್ ಆಗ್ತೀರಾ..
ಬೈಟ್: ದಿನೇಶ್ ಗಾಂಧಿ, ನಿರ್ಮಾಪಕ
Body:ಷ್ಟೇಲ್ಲಾ ನಷ್ಟ ಅನುಭವಿಸಿದ್ರು ಕೂಡ, ನಿರ್ಮಾಪಕ ದಿನೇಶ್ ಗಾಂಧಿ ಗೆಲ್ಲಬೇಕು ಎಂಬ, ಹಠಕ್ಕೆ ಬಿದ್ದು, ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆದ ದಬಾಂಗ್ ಹಾಗು ತೆಲುಗಿನಲ್ಲಿ ಪವನ್ ಕಲ್ಯಾಣ್ ಆಕ್ಟ್ ಮಾಡಿದ್ದ ಗಬ್ಬರ್ ಸಿಂಗ್ ಸಿನಿಮಾಗಳ ರಿಮೇಕ್ ರೈಟ್ಸ್ ತರ್ತಾರೆ..ಈ ಚಿತ್ರಗಳ ರಿಮೇಕ್ ರೈಟ್ಸ್ ಇಟ್ಟುಕೊಂಡು, ನಿರ್ಮಾಪಕ, ಸುದೀಪ್, ದರ್ಶನ್, ಆವತ್ತಿನ ಎಲ್ಲಾ ಸ್ಟಾರ್ ಗಳ ಮನೆ ಬಾಗಿಲು ಅಲೆದ್ರು ಯಾವ ನಟನು ನಿರ್ಮಾಪಕ ದಿನೇಶ್ ಗಾಂಧಿ ಸ್ಟಾರ್ ಕಾಲ್ ಶೀಟ್ ಸಿಗೋಲ್ಲ..ಕೊನೆಗೆ ಗೋಲ್ಡನ್ ಸ್ಟಾರ್ ಗಣೇಶ್ ದಬಾಂಗ್ ಸಿನಿಮಾವನ್ನ ನಾನು ಮಾಡ್ತಿನ ಅಂತಾ ಒಪ್ಪಿಕೊಳ್ಳುತ್ತಾರೆ..ಅದೇ ರೀತಿ ಗಣೇಶ್ ಗೆ ನಿರ್ಮಾಪಕ ದಿನೇಶ್ ಗಾಂಧಿ ಸ್ವಲ್ಪ ಅಡ್ವಾನ್ಸ್ ಕೂಡ ಕೊಡ್ತಾರೆ..ಗಣೇಶ್ ಕೂಡ ನಾನು ನಿಮ್ಗೇ ಮೂರರಿಂದ ನಾಲ್ಕು ಕೋಟಿ ರೂಪಾಯಿಗೆ ಟಿವಿ ರೈಟ್ಸ್ ಮಾಡಿಸಿ ಕೊಡ್ತಿನಿ ಅಂತಾ ಭರವಸೆ ಕೊಡ್ತಾರೆ..ಆದ್ರೆ ಯಾಕೇ ಗಣೇಶ್ ಜೊತೆಗಿನ ಸಿನಿಮಾ ಸ್ಟಾರ್ಟ್ ಆಗಲಿಲ್ಲ ಎಂಬುದಕ್ಕೆ ನಿರ್ಮಾಪಕ ದಿನೇಶ್ ಗಾಂಧಿ ಕೊಡುವ ಉತ್ತರ ಇದು..
ಬೈಟ್: ದಿನೇಶ್ ಗಾಂಧಿ, ನಿರ್ಮಾಪಕ
ಆದ್ರೂ ಛಲ ಬಿಡದ ನಿರ್ಮಾಪಕ ದಿನೇಶ್ ಗಾಂಧಿ ಐದು ವರ್ಷಗಳಿಂದ ಸಿನಿಮಾ ಮಾಡಬೇಕು ಅಂತಾ, ಕಾಯುತ್ತಿದ್ದಾರೆ..ಇವತ್ತಿಗೂ ಸುದೀಪ್, ದರ್ಶನ್, ಯಶ್ ಹತ್ತಿರ ಹೋಗಿ ಕಾಲ್ ಶೀಟ್ ಕೇಳ್ತಾನ ಇದ್ದೀನಿ, ಆದ್ರೆ ಯಾರು ನನಗೆ ಸಿನಿಮಾ ಡೇಟ್ಸ್ ಕೊಡ್ತಾ ಇಲ್ಲಾ..ಇವತ್ತಿನ ಸ್ಟಾರ್ ನಟರು ಹೊಸ ನಿರ್ಮಾಪಕರಿಗೆ ಮಾತ್ರ ತಮ್ಮ ಸಿನಿಮಾ ಡೇಟ್ಸ್ ಕೊಡ್ತಾರೆ ಅಂತಾ, ಸ್ಟಾರ್ ನಟರ ವಿರುದ್ಧ ತಮ್ಮ ಅಸಮಾಧನವನ್ನ ವ್ಯಕ್ತಪಡಿಸಿದ್ರು..ಯಾಕೇ ಹಳೆ ಪ್ರಾಡ್ಯೂಜರ್ ಗೆ ಸ್ಟಾರ್ ನಟರು ಸಿನಿಮಾ ಮಾಡೋದಿಲ್ಲ ಅಂತಾ, ಹೇಳ್ತಾರೆ ಅನ್ನೋದಿಕ್ಕೆ ನಿರ್ಮಾಪಕ ದಿನೇಶ್ ಗಾಂಧಿ ಹೇಳೋದು ಹೀಗೆ..
ಬೈಟ್: ದಿನೇಶ್ ಗಾಂಧಿ, ನಿರ್ಮಾಪಕ
ಹೊಸ ಪ್ರಾಡ್ಯೂಜರ್ ಆಗೋಲ್ಲ ನೀವು ಎಷ್ಟು ದುಡ್ಡು ಕೇಳ್ತಿರೋ ಅಷ್ಟು ದುಡ್ಡು ಕೊಡ್ತಿನಿ ಅಂತಾರೆ..ಸಿನಿಮಾ ಇಂಡಸ್ಟ್ರಿಯಲ್ಲಿ ಬೇಗೆ ನಾನು ಗುರುತ್ತಿಸಿಕೊಳ್ಳಬೇಕು ಎಂಬ ಹಂಬಲ ಹೊಸ ನಿರ್ಮಾಪಕರಲ್ಲಿದೆ..ಇನ್ನು ದರ್ಶನ್, ಸುದೀಪ್ ಯಶ್ ಹತ್ತಿರ ಸಿನಿಮಾ ಮಾಡೋಣ ಅಂದ್ರೆ ಯಾರು ಒಪ್ಪಿಕೊಳ್ಳೊಲ್ಲ,,ಆದ್ರೆ ನಮ್ಮ ಸಿನಿಮಾಗಳ ಕತೆ, ರಿಜೆಕ್ಟ್ ಮಾಡಿ ಬೇರೆ ಸಿನಿಮಾಗಳನ್ನ ಮಾಡಿದಾಗ, ಆ ಸಿನಿಮಾಗಳು ಪ್ಲಾಫ್ ಆಗಿ, ಥಿಯೇಟರ್ ನಲ್ಲಿ ಖಾಲಿ ಖಾಲಿ ಹೊಡೆದಿರೋ ಅದೆಷ್ಟೋ ಸಿನಿಮಾಗಳು ಆಗಿವೆ ಅನ್ನೋದನ್ನ ಆ ಸ್ಟಾರ್ ನಟರೇ ಹೇಳಬೇಕು ಅಂತಾ ನಿರ್ಮಾಪಕ ದಿನೇಶ್ ಗಾಂಧಿ ಹೇಳುವ ಮಾತು...

Conclusion:ಒಂದು ಕಾಲದಲ್ಲಿ ಚಿ ಉದಯ್ ಶಂಕರ್ ಇಲ್ಲದೆ ಇದ್ರೆ, ರಾಜ್ ಕುಮಾರ್ ಸಿನಿಮಾ ಮಾಡ್ತಾ ಇರಲಿಲ್ಲ..ಆದ್ರೆ ಇವತ್ತಿನ ನಟರು ಯಾವದನ್ನ ಇಷ್ಟ ಪಡ್ತಾರೋ ಅದನ್ನ ನಾವು ಮಾಡವ ಪರಿಸ್ಥಿತಿ ಇರೋದು ಬೇಸರದ ಸಂಗತಿ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.