ETV Bharat / sitara

ಟಾಲಿವುಡ್ ಯಂಗ್ ಹೀರೋ ನಿತಿನ್ ಮದುವೆ ದಿನಾಂಕ ಫಿಕ್ಸ್​​​

ಏಪ್ರಿಲ್ 16 ರಂದು ನಡೆಯಬೇಕಿದ್ದ ತೆಲುಗು ಚಿತ್ರರಂಗದ ನಟ ನಿತಿನ್ ಹಾಗೂ ಶಾಲಿನಿ ಮದುವೆ ಜುಲೈ 26 ರಂದು ನಡೆಯುತ್ತಿದೆ. ನಿತಿನ್​​​ ಹಾಗೂ ಶಾಲಿನಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ.

author img

By

Published : Jul 20, 2020, 5:45 PM IST

Tollywood actor Nithin marriage date fixed
ನಿತಿನ್ ಮದುವೆ ದಿನಾಂಕ ಫಿಕ್ಸ್​​​

ಎಲ್ಲಾ ಸರಿ ಇದ್ದಿದ್ದರೆ ಟಾಲಿವುಡ್ ನಟ ನಿತಿನ್ ಮದುವೆ ಇಷ್ಟರಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಹಳಷ್ಟು ಶುಭ ಕಾರ್ಯಗಳು ಮುಂದಕ್ಕೆ ಹೋಗಿವೆ. ಆದರೆ ಈಗ ಕೊನೆಗೂ ನಿತಿನ್ ಮದುವೆಗೆ ದಿನಾಂಕ ನಿಗದಿಯಾಗಿದೆ.

ನಿತಿನ್ ತಾನು ಮದುವೆಯಾಗುತ್ತಿರುವುದಾಗಿ ಈ ವರ್ಷದ ಆರಂಭದಲ್ಲೇ ಹೇಳಿಕೊಂಡಿದ್ದರು. ತಾನು ಮದುವೆಯಾಗುತ್ತಿರುವ ಯುವತಿ ಶಾಲಿನಿ ಕಂದುಕೂರಿ ಅವರೊಂದಿಗೆ ತಾವು ಇರುವ ಪೋಟೋವನ್ನು ಕೂಡಾ ನಿತಿನ್ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಅದರಂತೆ ಏಪ್ರಿಲ್ 16 ರಂದು ಇವರಿಬ್ಬರ ಮದುವೆ ಫಿಕ್ಸ್ ಆಗಿತ್ತು. ಆದರೆ ಅಷ್ಟರಲ್ಲೇ ಲಾಕ್​​ ಡೌನ್​ ಆರಂಭವಾಗಿದ್ದರಿಂದ ಮದುವೆ ಮುಂದಕ್ಕೆ ಹೋಯ್ತು.

Tollywood actor Nithin marriage date fixed
ಶಾಲಿನಿ, ನಿತಿನ್

ಈಗ ಜುಲೈ 26 ರಂದು ನಿತಿನ್​​ ಮದುವೆಗೆ ದಿನಾಂಕ ನಿಗದಿಯಾಗಿದೆ. ರಾತ್ರಿ 8.30 ಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ನಿತಿನ್ ಹಾಗೂ ಶಾಲಿನಿ ಮನೆಯವರು, ಆಪ್ತರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಮದುವೆಗೂ ಮುನ್ನ ನಡೆಯುವ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ನಿತಿನ್ ಕರಿಯರ್ ವಿಚಾರಕ್ಕೆ ಬರುವುದಾದರೆ ರಂಗ್​ ದೇ, ಚೆಕ್​, ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಜೊತೆಗೆ ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಅವರು ಸಹಿ ಹಾಕಿದ್ದು ಮದುವೆ ಕಾರ್ಯಗಳು ಮುಗಿದ ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.