ETV Bharat / sitara

ಬಾಕ್ಸ್​​ ಆಫೀಸ್​​ ಲೂಟಿ ಮಾಡಿದ 'ಭರಾಟೆ'... ಅಭಿಮಾನಿಗಳಿಗೆ ರೋರಿಂಗ್​ ಸ್ಟಾರ್​​​​​​​​​​​​​​​ ಧನ್ಯವಾದ - ಸಿನಿಮಾ ಸಕ್ಸಸ್​​​​​​ಗೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಶ್ರೀಮುರಳಿ

'ಭರಾಟೆ' ಚಿತ್ರದಲ್ಲಿ ಶ್ರೀಮುರಳಿ ಮೊದಲ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಶ್ರೀಮುರಳಿ ಧನ್ಯವಾದ ಕೂಡಾ ಹೇಳಿದ್ದಾರೆ.

ಶ್ರೀಮುರಳಿ
author img

By

Published : Oct 23, 2019, 10:02 PM IST

'ಮಫ್ತಿ' ಸಿನಿಮಾ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ, ಮಾಸ್ ಲುಕ್​​​​​​ನಲ್ಲಿ ಕಾಣಿಸಿಕೊಂಡಿರುವ 'ಭರಾಟೆ' ಸಿನಿಮಾ ರಿಲೀಸ್ ಆದ 250 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರ ಜೊತೆಗೆ ಬಾಕ್ಸ್​ ಆಫೀಸ್​​​​​​​​​​​​​ ಕೂಡಾ ಲೂಟಿ ಮಾಡಿದೆ.

'ಭರಾಟೆ' ಸಕ್ಸಸ್ ಮೀಟ್​

ಈ ಖುಷಿಯನ್ನು ಹಂಚಿಕೊಳ್ಳಲು ನಟ ಶ್ರೀಮುರಳಿ, ನಟಿ ಶ್ರೀಲೀಲಾ, ನಿರ್ದೇಶಕ ಚೇತನ್ ಕುಮಾರ್ ಹಾಗೂ ನಿರ್ಮಾಪಕ ಸುಪ್ರೀತ್, ಡೈಲಾಗ್ ಕಿಂಗ್ ಸಾಯಿಕುಮಾರ್, ನಟಿ ತಾರಾ ಸೇರಿದಂತೆ ಇಡೀ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಹಾಜರಿತ್ತು. ಚಿತ್ರದಲ್ಲಿ ಶ್ರೀಮುರಳಿ ಮೊದಲ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. 'ಭರಾಟೆ' ಸಿನಿಮಾದ ಯಶಸ್ಸು ನಮ್ಮ ಯಶಸ್ಸು ಮಾತ್ರವಲ್ಲ, ಅಭಿಮಾನಿಗಳ ಯಶಸ್ಸು ಎಂದು ಶ್ರೀಮುರಳಿ ಚಿತ್ರದ ಯಶಸ್ಸನ್ನು ಅಭಿಮಾನಿಗಳಿಗೆ ಅರ್ಪಿಸಿದರು. 'ರತ್ನಾಕರ' ಎಂಬ ವಯೋವೃದ್ಧನ ಪಾತ್ರದಲ್ಲಿ ಕೂಡಾ ಶ್ರೀಮುರಳಿ ನಟಿಸಿದ್ದು, ಈ ಪಾತ್ರಕ್ಕಾಗಿ ಸುಮಾರು 5 ಗಂಟೆಗಳ ಕಾಲ ಮೇಕಪ್​​​​ಗೆ ಕೂರುವುದು ನನಗೆ ಬಹಳ ಚಾಲೆಂಜಿಂಗ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.

supreet
'ಭರಾಟೆ' ಸಕ್ಸಸ್ ಮೀಟ್​ನಲ್ಲಿ ಮಾತನಾಡುತ್ತಿರುವ ನಿರ್ಮಾಪಕ ಸುಪ್ರೀತ್

ಚಿತ್ರದ ನಾಯಕಿ ಶ್ರೀಲೀಲಾ ಮಾತನಾಡಿ, ಸಿನಿಮಾ ಸಕ್ಸಸ್ ನಂತರ ಮೈಸೂರು, ಮಂಡ್ಯ, ಮದ್ದೂರು ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಭಿಮಾನಿಗಳು ತಮ್ಮನ್ನು ಬರಮಾಡಿಕೊಂಡ ರೀತಿಯನ್ನು ನೆನೆದು ಬಹಳ ಸಂತೋಷ ವ್ಯಕ್ತಪಡಿಸಿದರು. 'ಬಹದ್ದೂರ್' ಹಾಗೂ ಭರ್ಜರಿಯಂತಹ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಚೇತನ್ ಕುಮಾರ್​​​​ಗೆ ಈ ಸಿನಿಮಾ ಯಶಸ್ಸು, ಖುಷಿ ಕೊಟ್ಟಿದೆಯಂತೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಮಾತನಾಡಿ, ನಾವು ಮೂವರೂ ಅಣ್ಣ-ತಮ್ಮಂದಿರು ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿರುವುದು ನನಗೆ ಸಂತೋಷವಾಗಿದೆ ಎಂದರು. ಒಟ್ಟಿನಲ್ಲಿ 'ಭರಾಟೆ'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಲಾಭ ಮಾಡಲಿದೆ ಎಂದು ಕಾದು ನೋಡಬೇಕು.

Intro:ಮಫ್ತಿ ಸಿನಿಮಾ ನಂತರ ರೋರಿಂಗ್ ಸ್ಟಾರ್ ಶ್ರೀ ಮುರಳಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ, ಭರಾಟೆ ಸಿನಿಮಾ ರಿಲೀಸ್ ಆದ 250 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಜೊತೆಗೆ ಬಾಕ್ಸಾಫೀಸ್ ನಲ್ಲಿ ಲೂಟಿ ಮಾಡಿದೆ. ಈ ಖುಷಿಯನ್ನು ಹಂಚಿಕೊಳ್ಳುವುದಕ್ಕೆ ನಟ ಶ್ರೀಮುರುಳಿ ನಟಿ ಶ್ರೀಲೀಲಾ ನಿರ್ದೇಶಕ ಚೇತನ್ ಕುಮಾರ್ ಹಾಗೂ ನಿರ್ಮಾಪಕ ಸುಪ್ರೀತ್ ಡೈಲಾಗ್ ಕಿಂಗ್ ಸಾಯಿಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಭರಾಟೆ ಸಿನಿಮಾದ ಸಕ್ಸಸ್ ಕಹಾನಿಯನ್ನು ಹಂಚಿಕೊಂಡಿತ್ತು ಔಟ್ ಅಂಡ್ ಔಟ್ ಆಕ್ಷನ್ ಸ್ಟಾರ್ ಆಗಿ ಮಿಂಚಿರುವ ಶ್ರೀಮುರಳಿ ಫಸ್ಟ್ ಟೈಮ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಿದ್ರು.. ಭರಾಟೆ ಸಿನಿಮಾದ ಯಶಸ್ಸು ಅಭಿಮಾನಿಗಳ ಸಕ್ಸಸ್ ಅಂತ ಶ್ರೀಮುರಳಿ ಅಭಿಮಾನಿಗಳ ಆಶೀರ್ವಾದ ಅಂತ ಕರೆದರು ಹಾಗೆ ರತ್ನಾಕರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀಮುರಳಿ ಈ ಪಾತ್ರದ ಕ್ಯಾರೆಕ್ಟ್ ಮಾಡೋದಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ರಂತೆ ಬರೋಬ್ಬರಿ ಐದು ಗಂಟೆಗಳ ಕಾಲ ಈ ಪಾತ್ರಕ್ಕಾಗಿ ಮೇಕಪ್ ಮಾಡಿಕೊಳ್ಳುವುದು ಒಂದು ಚಾಲೆಂಜಿಂಗ್ ಆಗಿತ್ತು ಅಂದ್ರು ಶ್ರೀಮುರಳಿ

Body:ಭರಾಟೆ ಹೀರೋನ ಯುವ ರಾಣಿಯಾಗಿ ಮಿಂಚಿದ ಶ್ರೀಲೀಲಾ ಸಿನಿಮಾ ಸಕ್ಸಸ್ ನಂತರ ಮೈಸೂರು, ಮಂಡ್ಯ, ಮದ್ದೂರು ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಫ್ಯಾನ್ಸ್ ರಿಸೀವ್ ಮಾಡಿಕೊಂಡ ರೀತಿ ,ಶ್ರೀಲೀಲಾಗೆ ಥ್ರಿಲ್ ಕೊಡ್ತಾ ಇದ್ದಂತೆ..ಬಹದ್ದೂರ್ ಹಾಗು ಭರ್ಜರಿಯತಂಹ ಹಿಟ್ ಗಳನ್ನ ಕೊಟ್ಟ ನಿರ್ದೇಶಕ ಚೇತನ್ ಕುಮಾರ್ ಗೆ ಈ ಸಿನಿಮಾ ಯಶಸ್ಸು ಖುಷಿ ಕೊಟ್ಟಿದೆಯಂತೆ..ಹಾಗೆ ಈ ಸಿನಿಮಾ ರಿಲೀಸ್ ಗೂ ಮುಂಚೆ ಭರಾಟೆ ಸಿನಿಮಾ ಮುಕ್ಕಾಲು ಭಾಗ ಬಿಸಿನೆಸ್ ಆಗಿತ್ತು ಅದು ಭರಾಟೆ ಚಿತ್ರದ ಸಕ್ಸಸ್ ಕಾರಣವಾಯಿತು ಅಂತಾ ಚೇತನ ಹೇಳಿದ್ರು..ಡೈಲಾಗ್ ಕಿಂಗ್ ಸಾಯಿಕುಮಾರ್ ನಾವು ಮೂರು ಜನ ಅಣ್ಣತಮ್ಮಂದಿರು ಒಟ್ಟಿಗೆ ಆಕ್ಟ್ ಮಾಡಿರೋದು ವಿಶೇಷ ಅಂದ್ರು...

Conclusion:ಇನ್ನು ನಿರ್ಮಾಪಕ ಸುಪ್ರಿತ್ ಮಾತನಾಡಿ ಭರಾಟೆ ಸಿನಿಮಾ ರಿಲೀಸ್ ಆದ, ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ..ಭರಾಟೆ ಸಿನಿಮಾ ರಿಲೀಸ್ ಆದ ಮೂರು ದಿನಕ್ಕೆ ಓವರ್ ಆಲ್ ಕರ್ನಾಟಕದಲ್ಲಿ 23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ..ಆದರೆ ನಿರ್ಮಾಪಕ ಸುಪ್ರಿತ್ ಅಧಿಕೃತವಾಗಿ ಹಣದ ವ್ಯವಹಾರದ ಬಗ್ಗೆ ಮಾತನಾಡಲಿಲ್ಲ.ಮುಂದಿನ ದಿನಗಳಲ್ಲಿ ಶ್ರೀಮುರಳಿ ಭರಾಟೆ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡಲಿದೆ ಅಂತಾ ಇಡೀ ಚಿತ್ರತಂಡ ಸಕ್ಸಸ್ ಬಗ್ಗೆ ಹಂಚಿಕೊಂಡ್ರು..

ಬೈಟ್ ಶ್ರೀಮುರಳಿ, ನಟ
ತಾರ, ನಟಿ
ಸಾಯಿಕುಮಾರ್, ನಟ
ಶ್ರೀಲೀಲಾ, ನಟಿ
ಚೇತನ್ ಕುಮಾರ್, ನಿರ್ದೇಶಕ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.