ETV Bharat / sitara

ತಾತನಂತೆ ಮೊಮ್ಮಗ ಪೋಸ್​​: ಮಗನ ಫೋಟೋ ಶೇರ್ ಮಾಡಿದ ರಜನೀಕಾಂತ್​​ ಪುತ್ರಿ - undefined

ತಾತನ ಸ್ಟೈಲ್ ಫಾಲೋ ಮಾಡಿರುವ ರಜನೀಕಾಂತ್ ಮೊಮ್ಮಗ ವೇದ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇದ್​ಕೃಷ್ಣ ರಜನೀಕಾಂತ್ ಎರಡನೇ ಪುತ್ರಿ ಸೌಂದರ್ಯ ರಜನೀಕಾಂತ್ ಅವರ ಪುತ್ರ.

ರಜನೀಕಾಂತ್​​ ಪುತ್ರಿ
author img

By

Published : Jun 25, 2019, 10:31 PM IST

ತಮಿಳು ಸೂಪರ್​​​​​ ಸ್ಟಾರ್ ರಜನೀಕಾಂತ್ ಅವರನ್ನು ಫಾಲೋ ಮಾಡುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ವಾಕಿಂಗ್ ಸ್ಟೈಲ್, ಮಾತನಾಡುವ ರೀತಿ, ಬಾಯಿಗೆ ಸಿಗರೇಟ್ ಎಸೆದುಕೊಳ್ಳುವ ಸ್ಟೈಲ್ ಪ್ರತಿಯೊಬ್ಬ ಅಭಿಮಾನಿಗೂ ಬಹಳ ಇಷ್ಟ.

ಈ ತಲೈವಾ ಅಭಿಮಾನಿಗಳ ಸಾಲಿನಲ್ಲಿ ಅವರ ಮೊಮ್ಮಗ ವೇದ್ ಕೃಷ್ಣ ಕೂಡಾ ಇದ್ದಾರೆ. 4 ವರ್ಷದ ವೇದ್​, ರಜನೀಕಾಂತ್ ಕಿರಿಯ ಪುತ್ರಿ ಸೌಂದರ್ಯ ಅವರ ಪುತ್ರ. ವೇದ್​​​ಗೆ ಕೂಡಾ ತಾತನ ಸ್ಟೈಲ್ ಎಂದರೆ ಬಹಳ ಕ್ರೇಜ್​​. ಸೌಂದರ್ಯ ಆಗಾಗ್ಗೆ ತಮ್ಮ ಕುಟುಂಬದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಇತ್ತೀಚೆಗೆ ಸೌಂದರ್ಯ ತಮ್ಮ ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿರುವ ವೇದ್ ಫೋಟೋ ಭಾರೀ ವೈರಲ್ ಆಗಿದೆ. ಈ ಫೋಟೋದಲ್ಲಿ ವೇದ್ ಥೇಟ್ ತನ್ನ ತಾತನ ರೀತಿಯಲ್ಲೇ ಪೋಸ್ ನೀಡಿದ್ದಾರೆ. ವೇದ್ ತನ್ನ ಎರಡೂ ಕೈಗಳನ್ನು ಎರಡೂ ಬದಿಯ ಪ್ಯಾಂಟ್ ಜೇಬಿನೊಳಗೆ ಇರಿಸಿ ಕ್ಯಾಮರಾಗೆ ಬೆನ್ನು ತೋರಿಸಿ ನಿಂತಿರುವ ಫೋಟೋ ಇದಾಗಿದೆ. ಈ ಫೋಟೋವನ್ನು ಬಹಳಷ್ಟು ಅಭಿಮಾನಿಗಳು ಮೆಚ್ಚಿ ಕಮೆಂಟ್ ಮಾಡಿದ್ದಾರೆ.

rajinikanth
ಮೊಮ್ಮಗನೊಂದಿಗೆ ರಜನೀಕಾಂತ್

ಸೌಂದರ್ಯ ಈ ವರ್ಷ ಫೆಬ್ರವರಿಯಲ್ಲಿ ನಟ, ಉದ್ಯಮಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾಗಿದ್ದಾರೆ. 2010ರಲ್ಲಿ ಸೌಂದರ್ಯ ಉದ್ಯಮಿ ಅಶ್ವಿನ್ ರಾಮ್​​ಕುಮಾರ್ ಅವರನ್ನು ವರಿಸಿದ್ದರು. ವೈಯಕ್ತಿಕ ಕಾರಣಗಳಿಂದ ಈ ಜೋಡಿ ವಿಚ್ಛೇದನ ಪಡೆದು ದೂರವಾಗಿತ್ತು.

Intro:Body:

soundarya rajinikant

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.