ಮುಂಬೈ: ಅಶ್ಲೀಲ ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಈಗಾಗಲೇ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ. ಅವರು ಜೈಲಿನಲ್ಲಿದ್ದ ಸಂದರ್ಭದಲ್ಲಿ ಅನೇಕರು ಗಂಭೀರ ಆರೋಪ ಮಾಡಿದ್ದು, ಈ ಸಾಲಿನಲ್ಲಿ ನಟಿ ಶೆರ್ಲಿನ್ ಚೋಪ್ರಾ ಕೂಡ ಸೇರಿಕೊಂಡಿದ್ದರು. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಆರೋಪ ಮಾಡಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಅಕ್ಟೋಬರ್ 14ರಂದು ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದ ನಟಿ ಶೆರ್ಲಿನ್ ಚೋಪ್ರಾ, ಶಿಲ್ಪಾ ಶೆಟ್ಟಿ ನನಗೆ ಕುಂದ್ರಾ ಜೊತೆ ಒಪ್ಪಂದಕ್ಕೆ ಸಹಿ ಹಾಕುವಂತೆ ಆಮಿಷವೊಡ್ಡಿದ್ದರು. ಭೂಗತ ಸಂಪರ್ಕ ಹೊಂದಿರುವ ಕುಂದ್ರಾ, ತನ್ನ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರು. ಮೂರು ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಇದುವರೆಗೂ ಹಣ ಪಾವತಿಸಿಲ್ಲ ಎಂದು ಹೇಳಿದ್ದರು.
-
Actor Shilpa Shetty & her husband Raj Kundra file a defamation suit of Rs 50 crores against Sherlyn Chopra
— ANI (@ANI) October 19, 2021 " class="align-text-top noRightClick twitterSection" data="
Chopra had filed a complaint against Raj Kundra & Shilpa Shetty for allegedly committing sexual harassment, cheating & criminal intimidation
(file photo) pic.twitter.com/giUuXbhI1a
">Actor Shilpa Shetty & her husband Raj Kundra file a defamation suit of Rs 50 crores against Sherlyn Chopra
— ANI (@ANI) October 19, 2021
Chopra had filed a complaint against Raj Kundra & Shilpa Shetty for allegedly committing sexual harassment, cheating & criminal intimidation
(file photo) pic.twitter.com/giUuXbhI1aActor Shilpa Shetty & her husband Raj Kundra file a defamation suit of Rs 50 crores against Sherlyn Chopra
— ANI (@ANI) October 19, 2021
Chopra had filed a complaint against Raj Kundra & Shilpa Shetty for allegedly committing sexual harassment, cheating & criminal intimidation
(file photo) pic.twitter.com/giUuXbhI1a
ಇದನ್ನೂ ಓದಿರಿ: ಲೈಂಗಿಕ ದೌರ್ಜನ್ಯ ಆರೋಪ: ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಎಫ್ಐಆರ್ ದಾಖಲು
ತಿರುಗಿಬಿದ್ದ ಶಿಲ್ಪಾ, ರಾಜ್ ಕುಂದ್ರಾ
ತಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ನಟಿ ವಿರುದ್ಧ ಇದೀಗ ಈ ಜೋಡಿ ತಿರುಗಿಬಿದ್ದಿದ್ದು, 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು ಮಾಡಿದೆ. ಸಾರ್ವಜನಿಕವಾಗಿ ತಮ್ಮ ವಿರುದ್ಧ ನಿಂದನೆ ಮಾಡಿರುವುದಕ್ಕಾಗಿ ಕ್ಷಮೆಯಾಚನೆ ಹಾಗೂ 50 ಕೋಟಿ ರೂ. ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಪರ ವಕೀಲರು ಈ ನೋಟಿಸ್ ಹೊರಡಿಸಿರುವುದಾಗಿ ತಿಳಿದು ಬಂದಿದೆ. ಶೆರ್ಲಿನ್ ಮಾಡಿರುವ ಆರೋಪದಲ್ಲಿ ಯಾವುದೇ ರೀತಿಯ ಸಾಕ್ಷ್ಯಾಧಾರವಿಲ್ಲ. ಮಾನಹಾನಿ ಮಾಡುವ ಉದ್ದೇಶದಿಂದ ಈ ರೀತಿಯಾಗಿ ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಅಶ್ಲೀಲ ಚಿತ್ರ ನಿರ್ಮಾಣ ದಂಧೆ ನಡೆಸುತ್ತಿದ್ದಾರೆಂಬ ಆರೋಪದಡಿ ಉದ್ಯಮಿ ರಾಜ್ ಕುಂದ್ರಾ ಸೇರಿದಂತೆ ಅನೇಕರನ್ನು ಮುಂಬೈ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಜುಲೈ 19ರಂದು ಬಂಧಿಸಿದ್ದರು. ಆದಾದ ನಂತರ ಸೆಪ್ಟೆಂಬರ್ 20 ರಂದು 50 ಸಾವಿರ ರೂ. ಮೊತ್ತದ ಶೂರಿಟಿ ಬಾಂಡ್ ನೀಡಲು ಸೂಚನೆ ನೀಡಿ, ಮುಂಬೈ ಕೋರ್ಟ್ ರಾಜ್ ಕುಂದ್ರಾಗೆ ಜಾಮೀನು ಮಂಜೂರು ಮಾಡಿದೆ.